ಶಫಾಲಿ ಶರ್ಮಾ ಬ್ಯಾಟಿಂಗ್ ವೈಖರಿ 
ಕ್ರಿಕೆಟ್

ಮಹಿಳಾ ಟಿ20 ವಿಶ್ವಕಪ್: ಮುಂದುವರೆದ ಭಾರತದ ಅಜೇಯ ಓಟ, ಲಂಕಾ ವನಿತೆಯರ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವನಿತೆಯರ ಅಜೇಯ ಓಟ ಮುಂದುವರೆದಿದ್ದು, ಗ್ರೂಪ್ ಸ್ಟೇಜ್ ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವನಿತೆಯರ ತಂಡವನ್ನು  ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ.

ಮೆಲ್ಬೋರ್ನ್: ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವನಿತೆಯರ ಅಜೇಯ ಓಟ ಮುಂದುವರೆದಿದ್ದು, ಗ್ರೂಪ್ ಸ್ಟೇಜ್ ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವನಿತೆಯರ ತಂಡವನ್ನು  ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ.

ಮೆಲ್ಬೋರ್ನ್ ನ ಜಂಕ್ಷನ್ ಓವಲ್ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ರಾಧ ಯಾದವ್ (23 ಕ್ಕೆ 4) ಸ್ಪಿನ್ ಮೋಡಿಯಿಂದಾಗಿ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನು ಹತ್ತಿದ ಭಾರತ ತಂಡ ಶಫಾಲಿ ವರ್ಮಾ (47 ರನ್) ಅವರ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧ ಏಳು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಈ ಸೋಲಿನೊಂದಿಗೆ ಲಂಕಾ ನಾಕೌಟ್ ಹಂತದಿಂದ ಅಧಿಕೃತವಾಗಿ ಹೊರಬಿದ್ದಿತು.

ಶ್ರೀಲಂಕಾ ನೀಡಿದ 114 ರನ್ ಗುರಿ ಹಿಂಬಾಲಿಸಿದ ಭಾರತ ತಂಡ ಕೇವಲ 14.4 ಓವರ್‌ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿ ಬಹುಬೇಗ ಗೆಲುವಿನ ತೋರಣ ಕಟ್ಟಿತು. ಆ ಮೂಲಕ ಆಡಿದ ನಾಲ್ಕೂ ಪಂದ್ಯಗಳಲ್ಲಿ ಹರ್ಮನ್ ಪ್ರೀತ್ ಪಡೆ ಗೆದ್ದು ಎ ಗುಂಪಿನ ಅಂಕಪಟ್ಟಿಯಲ್ಲಿ ಎಂಟು ಪಾಯಿಂಟ್ ಗಳೊಂದಿಗೆ ಅಗ್ರ ಸ್ಥಾನ ಪಡೆಯಿತು. ಭಾರತದ ಪರ ಅದ್ಭುತ ಲಯದಲ್ಲಿರುವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೇವಲ 34 ಎಸೆತಗಳಲ್ಲಿ 47 ರನ್ ಚಚ್ಚಿದರು. ಮತ್ತೊಮ್ಮೆ ಕೇವಲ ಮೂರು ರನ್‌ಗ ಳ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಸ್ಮೃತಿ ಮಾಂಧನ 17 ರನ್ ಗಳಿಸಿದರೆ, ಹರ್ಮನ್ ಪ್ರೀತ್ ಕೌರ್, ಜೆಮಿಮಾ ರೊಡ್ರಿಗಸ್ ಹಾಗೂ ದೀಪ್ತಿ ಶರ್ಮಾ ತಲಾ15 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ನಿಗದಿತ 20 ಓವರ್ ಗಳಿಗೆ ಒಂಬತ್ತು ವಿಕೆಟ್ ಕಳೆದುಕೊಂಡು 11 3 ರನ್ ಗಳಿಸಿತ್ತು. ಲಂಕಾ ಪರ ನಿರೀಕ್ಷೆಯಂತೆ ಚಾಮರಿ ಅಟಪಟ್ಟು 33 ರನ್ ಗಳಿಸಿದರು. ಅತ್ಯುತ್ತಮವಾಗಿ ಆಡುತ್ತಿದ್ದ ಇವರನ್ನು ರಾಧ ಯಾದವ್ ಸ್ಪಿನ್ ಬಲೆಗೆ ಬೀಳಿಸಿದರು.  ಕೊನೆಯ ಹಂತದಲ್ಲಿ ಕವಿಷಾ 25 ರನ್ ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಭಾರತದ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ರಾಧ ಯಾದವ್ ನಾಲ್ಕು ಓವರ್ ಗಳಿಗೆ 23 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.  ರಾಜೇಶ್ವರಿ ಗಾಯಕ್ವಾಡ್ ಎರಡು ವಿಕೆಟ್ ಕಿತ್ತರು.

ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 20 ಓವರ್ ಗಳಿಗೆ 113/9 (ಚಾಮರಿ ಅಟಪಟ್ಟು 33, ಕವಿಷಾ ಔಟಾಗದೆ 25; ರಾಧ ಯಾದವ್ 23 ಕ್ಕೆ 4, ರಾಜೇಶ್ವರಿ ಗಾಯಕ್ವಾಡ್ 18 ಕ್ಕೆ 2, ದೀಪ್ತಿ ಶರ್ಮಾ 16 ಕ್ಕೆ 1, ಶಿಖಾ ಪಾಂಡೆ 35 ಕ್ಕೆ 1)
ಭಾರತ: 14.4 ಓವರ್ ಗಳಿಗೆ 116(ಶಫಾಲಿ ವರ್ಮಾ 47, ಸ್ಮೃತಿ ಮಾಂಧನ 17; ಉದೇಶಿಕಾ ಪ್ರಬೋದನಿ 13 ಕ್ಕೆ 1)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?