ಕ್ರಿಕೆಟ್

ಹ್ಯಾಟ್ಸ್ ಆಫ್ ಟು ಮೊಹಮ್ಮದ್ ಶಮಿ: ರೋಹಿತ್ ಶರ್ಮಾ

Nagaraja AB

ಹ್ಯಾಮಿಲ್ಟನ್ : ಸೆಡ್ಡನ್ ಪಾರ್ಕ್ ನಲ್ಲಿ ನಿನ್ನೆ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ-20 ಪಂದ್ಯದ ಗೆಲುವಿನ ಕ್ರೆಡಿಟ್ ತಮಗೆ  ತೆಗೆದುಕೊಳ್ಳಲು ನಿರಾಕರಿಸಿದ ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ, ಅದು ಮೊಹಮ್ಮದ್ ಶಮಿಗೆ ಸಲ್ಲಬೇಕೆಂದು ಹೇಳಿದರು.

ನಿರ್ಣಯಕ ಪಂದ್ಯದ  ಕಡೆಯ ಓವರ್ ನಲ್ಲಿ 29 ವರ್ಷದ ಅನುಭವಿ ವೇಗಿ ಮೊಹಮ್ಮದ್ ಶಮಿ ನ್ಯೂಜಿಲೆಂಡ್ ಪ್ರಮುಖ ಆಟಗಾರರಾದ ಕೇನ್ ವಿಲಿಯಮ್ಸ್  (95) ಹಾಗೂ ರಾಸ್ ಟೆಲರ್ (17) ವಿಕೆಟ್ ಪಡೆದುಕೊಂಡರು.

ಮೊಹಮ್ಮದ್ ಶಮಿ ಅವರ ಕೊನೆಯ ಓವರ್ ಅತ್ಯಂತ ಮಹತ್ವದ್ದಾಗಿತ್ತು. ಆದ್ದರಿಂದಲೇ ನಾವು ಪಂದ್ಯ ಗೆಲ್ಲಲು ಸಾಧ್ಯವಾಯಿತು. ನನ್ನ ಎರಡು ಸಿಕ್ಸರ್ ಅಲ್ಲ, ಕೇನ್ ವಿಲಿಯಮ್ಸ್ ಹಾಗೂ ರಾಸ್ ಟೆಲರ್ ಅಂತಹ  ವಿಕೆಟ್ ಪಡೆದು ಶಮಿ ಓವರ್ ನಲ್ಲಿ 9 ರನ್  ರಕ್ಷಿಸಿಕೊಂಡರು. ಅದು ಅದುಕೊಂಡಷ್ಟು ಸುಲಭವಾಗಿರಲಿಲ್ಲ. ಸೂಪರ್ ಓವರ್ ನಲ್ಲಿ ನಮ್ಮನ್ನು ಮತ್ತೆ ಆಡಲು ಅನುವು ಮಾಡಿಸಿಕೊಟ್ಟ ಶಮಿ ಅವರಿಗೆ ಹ್ಯಾಟ್ಸ್  ಆಫ್  ಎಂದು ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ರೋಹಿತ್ ತಿಳಿಸಿದರು.

ಸೂಪರ್ ಓವರ್  ನಿಯಮದಂತೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮಾರ್ಟಿನ್ ಗುಪ್ಟಿಲ್ ಹಾಗೂ ಕೇನ್ ವಿಲಿಯಮ್ಸ್ ಜೋಡಿಯ ಬಿರುಸಿನ ಆಟದ ಫಲವಾಗಿ 17 ರನ್ ಪೇರಿಸಿತು. 18 ರನ್ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಆರಂಭಿಕ 4 ಎಸೆತಗಳಿಂದ 8 ರನ್ ಪೇರಿಸಲಷ್ಟೇ ಶಕ್ತರಾದರು. ಕಡೇ 2 ಎಸತೆಗಳಲ್ಲಿ 10 ರನ್ ಅವಶ್ಯಕತೆಯಿದ್ದಾಗ ರೋಹಿತ್ ಶರ್ಮ ಮಿಡ್ ವಿಕೆಟ್ ನತ್ತ ಹಾಗೂ ಲಾಂಗ್ ಆಫ್ ನತ್ತ ಸತತ ಎರಡು ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದರು.

SCROLL FOR NEXT