ಮಹೇಂದ್ರ ಸಿಂಗ್ ಧೋನಿ 
ಕ್ರಿಕೆಟ್

ಸಿಎಸ್ ಕೆ ತಂಡದ ಅಭ್ಯಾಸ ವೇಳೆ ಅನುಭವ ಕೊರತೆಯಾದವರಂತೆ ಧೋನಿ ಕಾಣಲಿಲ್ಲ: ಪಿಯೂಷ್ ಚಾವ್ಲಾ

ಇದೇ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭ್ಯಾಸದ ಶಿಬಿರದಲ್ಲಿ ಅನುಭವದ ಕೊರತೆಯಲ್ಲಿರುವಂತೆ ಮಾಜಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಕಾಣಲಿಲ್ಲ ಎಂದು ಸ್ಪೀನ್ನರ್ ಪಿಯೂಷ್ ಚಾವ್ಲಾ ಹೇಳಿದ್ದಾರೆ.

ನವದೆಹಲಿ: ಇದೇ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭ್ಯಾಸದ ಶಿಬಿರದಲ್ಲಿ ಅನುಭವದ
ಕೊರತೆಯಲ್ಲಿರುವಂತೆ ಮಾಜಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಕಾಣಲಿಲ್ಲ ಎಂದು ಸ್ಪೀನ್ನರ್ ಪಿಯೂಷ್ ಚಾವ್ಲಾ ಹೇಳಿದ್ದಾರೆ.

ಮಾರ್ಚ್ 29ರಿಂದ ಐಪಿಎಲ್ ನಡೆಯಬೇಕಿತ್ತು, ಆದರೆ, ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಧೀರ್ಘ ವಿರಾಮದ ಬಳಿಕ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ ಧೋನಿ ಬಗ್ಗೆ ಪಿಯೂಷ್ ಚಾವ್ಲಾ ಮಾತನಾಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಧೀರ್ಘ ವಿರಾಮದ ಬಳಿಕ ಅಭ್ಯಾಸಕ್ಕೆ ತೊಡಗಿಸಿಕೊಂಡರೂ ಅಭ್ಯಾಸ ಇಲ್ಲದವರಂತೆ ಕಾಣಲಿಲ್ಲ. ಬ್ಯಾಟಿಂಗ್ ತರಬೇತಿ ವೇಳೆಯಲ್ಲಿ  ದೊಡ್ಡ ಹೊಡೆತಗಳನ್ನು ಧೋನಿ ಬಾರಿಸಿದ್ದರು ಎಂಬುದಾಗಿ ಮಾಜಿ ಆಟಗಾರ ಆಕಾಶ್ ಚೋರ್ಪಾ ಅವರ ಯು ಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.

ಧೀರ್ಘ ರಜೆ ಬಳಿಕ ಬ್ಯಾಟಿಂಗ್ ಮಾಡಿದರು. ಕೆಲವೇ ಮಂದಿ ಇದ್ದ ಶಿಬಿರದಲ್ಲಿ ರೈನಾ,ರಾಯುಡು, ಧೋನಿ ಎಲ್ಲ ಬ್ಯಾಟ್ಸ್ ಮನ್ ಗಳು ಎರಡರಿಂದ ಎರಡೂವರೆ ಗಂಟೆಗಳವರೆಗೂ ಅಭ್ಯಾಸ ನಡೆಸಿದರು. ಪ್ರತಿಯೊಬ್ಬ ಬ್ಯಾಟ್ಸ್ ಮನ್ ಗಳು 200ರಿಂದ 250 ಎಸೆತಗಳನ್ನು ಎದುರಿಸಿದ್ದಾಗಿ ಪಿಯೂಷ್ ಚಾವ್ಲಾ ತಿಳಿಸಿದರು

2019 ವಿಶ್ವಕಪ್ ಫೈನಲ್ ಪಂದ್ಯದ ನಂತರ ಯಾವುದೇ ಪಂದ್ಯದಲ್ಲೂ ಕಾಣಿಸಿಕೊಳ್ಳದ 38 ವರ್ಷದ ಮಹೇಂದ್ರ ಸಿಂಗ್ ಧೋನಿ, ಪ್ರಸ್ತುತ ಕ್ರಿಕೆಟ್ ನಿಂದ ದೂರ ಉಳಿದು ಸಮಯದ ಜೊತೆ ಆನಂದಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!