ಕ್ರಿಕೆಟ್

ಟೀಂ ಇಂಡಿಯಾ ಮಾಜಿ ಆಟಗಾರ ಚೇತನ್ ಚೌಹಾಣ್ ಗೆ ಕೊರೋನಾ ಸೋಂಕು!

Raghavendra Adiga

ನವದೆಹಲಿ: ಟೀಂ ಇಂಡಿಯಾ ಮಾಜಿ  ಕ್ರಿಕೆಟಿಗ ಮತ್ತು ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಚೇತನ್ ಚೌಹಾಣ್ ಅವರಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಶನಿವಾರ ರಾತ್ರಿ ಟೀಂ ಇಂಡಿಯಾ ಮಾಜಿ  ಆಟಗಾರರಾದ ಆಕಾಶ್ ಚೋಪ್ರಾ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.

72 ವರ್ಷದ ಚೌಹಾಣ್ ಶುಕ್ರವಾರ ಕೋವಿಡ್  -19 ಪರೀಕ್ಷೆಗೆ ಒಳಗಾಗಿದ್ದು, ಅವರನ್ನು ಲಖನೌದ ಸಂಜಯ್ ಗಾಂಧಿ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಚೌಹಾಣ್ ಅವರ ಕುಟುಂಬ ಸದಸ್ಯರು ಕೋವಿಡ್ -19 ಪರೀಕ್ಷೆಗಳಿಗೆ ಒಳಗಾಗಿದ್ದು ಇದೀಗ ಅವರನ್ನು  ಹೋಂ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಚೌಹಾಣ್ ಉತ್ತರಪ್ರದೇಶದ ಸಂಪುಟದಲ್ಲಿ ಸೈನಿಕ್ ಕಲ್ಯಾಣ, ಗೃಹರಕ್ಷಕರು, ಪಿಆರ್‌ಡಿ ಮತ್ತು ನಾಗರಿಕ ಭದ್ರತಾ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಾಜಿ ಲೋಕಸಭಾ ಸದಸ್ಯರಾದ ಚೌಹಾಣ್ ವೈರಸ್ ಸೋಂಕಿಗೆ ಒಳಗಾದ ಕೆಲವೇ ಕೆಲವು ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರಲ್ಲಿ ಒಬ್ಬರು. 1969 ಮತ್ತು 1978 ರ ನಡುವೆ ಚೌಹಾಣ್ 40 ಟೆಸ್ಟ್ ಪಂದ್ಯಗಳನ್ನು ಆಡಿ 31.57 ರ ಸರಾಸರಿಯಲ್ಲಿ 2,084 ರನ್ ಗಳಿಸಿದ್ದರು.  ಚೌಹಾಣ್ ಹಾಗೂ ಸುನಿಲ್ ಗವಾಸ್ಕರ್ ಯಶಸ್ವಿ ಓಪನಿಂಗ್ ಬ್ಯಾಟ್ಸ್ ಮನ್ ಗಳಾಗಿ 1970 ರ ದಶಕದಲ್ಲಿ ಹಲವಾರು ಟೆಸ್ಟ್ ಗಳಲ್ಲಿ ಜತೆಯಾಟವಾಡಿದ್ದಾರೆ.
 

SCROLL FOR NEXT