ಕ್ರಿಕೆಟ್

ಹ್ಯಾರಿಸ್ ರೌಫ್ ಯಾರ್ಕರ್ ಗೆ ಬೇಸ್ತು ಬಿದ್ದ ಅಫ್ರಿದಿ, ಸ್ಲೋ ಎಸೆಯುವಂತೆ ಮನವಿ

Srinivasamurthy VN

ಕರಾಚಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದಲೇ ಕ್ರಿಕೆಟ್ ಜಗತ್ತಿನಲ್ಲಿ ಚಿರಪರಿತರಾದವರು. ಇಂತಹ ಅಫ್ರಿದಿ ಬೌಲರ್ ಒಬ್ಬರ ಎಸೆತವನ್ನು ಆಡಲಾಗದೇ ಸ್ಲೋ ಎಸೆತ ಎಸೆಯುವಂತೆ ಮನವಿ ಮಾಡಿರುವ ಘಟನೆ  ಪಾಕಿಸ್ತಾನ್ ಸೂಪರ್ ಲೀಗ್‌  ನಲ್ಲಿ ನಡೆದಿದೆ.

ಹೌದು.. ಭಾನುವಾರ ನಡೆದ ಪಾಕಿಸ್ತಾನ್ ಸೂಪರ್ ಲೀಗ್‌ ದ್ವಿತೀಯ ಎಲಿಮಿನೇಟರ್ ಪಂದ್ಯದಲ್ಲಿ ಲಾಹೋರ್ ಕಲಂದರ್‌ ವೇಗಿ ಹ್ಯಾರಿಸ್ ರೌಫ್ ಅಫ್ರಿದಿ ಎದುರಿಸಿದ ಮೊದಲ ಎಸೆತದಲ್ಲೇ ಅವರನ್ನು ಕ್ಲೀನ್ ಬೋಲ್ಡ್ ಮಾಡುವ ಮೂಲಕ ಗಮನ ಸೆಳೆದರು. ಅದ್ಭುತ ಯಾರ್ಕರ್ ಎಸೆದ ರೌಫ್  ಅಫ್ರಿದಿ ಎಸೆತವನ್ನು ಗಮನಿಸುವುದರೊಳಗೇ ಅವರನ್ನು ಕ್ಲೀನ್ ಬೋಲ್ಡ್ ಮಾಡಿದ್ದರು. 

ಅಫ್ರಿದಿ ಔಟಾಗುತ್ತಿದ್ದಂತೆಯೇ ಅವರತ್ತ ಗೌರವ ಪೂರ್ವಕವಾಗಿ ಕೈ ಮುಗಿದು ಬೀಳ್ಕೊಟ್ಟರು. ಈ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬೂಮ್ ಬೂಮ್ ಅಫ್ರಿದಿ ಎಂದೇ ಖ್ಯಾತಿಯಾಗಿರುವ ಅಫ್ರಿದಿಯನ್ನು ತಮ್ಮ ಯಾರ್ಕರ್ ಮೂಲಕ ತಿಣುಕಾಣುವಂತೆ ಮಾಡಿದ ರೌಫ್  ಬೌಲಿಂಗ್ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಪಂದ್ಯದ ಬಳಿಕ ಈ ಕುರಿತಂತೆ ಟ್ವೀಟ್ ಮಾಡಿರುವ ಆಫ್ರಿದಿ ನಿಜಕ್ಕೂ ಅದೊಂದು ಅದ್ಭುತ ಎಸೆತ. ಹ್ಯಾರಿಸ್ ಉತ್ತಮವಾಗಿ ಬೌಲಿಂಗ್ ಮಾಡಿದರು. ಮುಂದಿನ ಪಂದ್ಯದಲ್ಲಿ ಕೊಂಚ ನಿಧಾನವಾಗಿ ಬೌಲಿಂಗ್ ಮಾಡು.. ಎಂದು ಹೇಳಿದ್ದಾರೆ.  ಅಂತೆಯೇ ಫೈನಲ್ ಗೇರಿರುವ ಲಾಹೋರ್ ಕಲಂದರ್‌ ತಂಡಕ್ಕೆ ಶುಭ ಕೋರಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಾಹೋರ್ ಕಲಂದರ್, ಫಖರ್ ಝಮಾನ್ 46, ತಮೀಮ್ ಇಕ್ಬಾಲ್ 30, ಡೇವಿಡ್ ವೈಸ್ 48 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 182 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಮುಲ್ತಾನ್ ಸುಲ್ತಾನ್ಸ್, ಆ್ಯಡಮ್ ಲಿಥ್ 50 ರನ್‌  ಹೊರತಾಗಿಯೂ 19.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 157 ರನ್ ಬಾರಿಸಿ ಶರಣಾಯಿತು. ಫೈನಲ್ ಪಂದ್ಯದಲ್ಲಿ ಕರಾಚಿ ಮತ್ತು ಲಾಹೋರ್ ಕಾಡಾಡಲಿವೆ.

SCROLL FOR NEXT