ಐಪಿಎಲ್ 
ಕ್ರಿಕೆಟ್

ಭಾನುವಾರ ಐಪಿಎಲ್ 2020 ವೇಳಾಪಟ್ಟಿ ಬಿಡುಗಡೆ: ಬ್ರಿಜೇಶ್ ಪಟೇಲ್

ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿ-20 ಟೂರ್ನಿಯ ವೇಳಾಪಟ್ಟಿಯನ್ನು ನಾಳೆ ಅಂದರೆ ಭಾನುವಾರ ಬಿಡುಗಡೆ ಮಾಡಲಾಗುತ್ತದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್  ಹೇಳಿದ್ದಾರೆ.

ದುಬೈ: ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿ-20 ಟೂರ್ನಿಯ ವೇಳಾಪಟ್ಟಿಯನ್ನು ನಾಳೆ ಅಂದರೆ ಭಾನುವಾರ ಬಿಡುಗಡೆ ಮಾಡಲಾಗುತ್ತದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್  ಹೇಳಿದ್ದಾರೆ.

ಈ ಕುರಿತಂತೆ ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ ಅವರು, ಐಪಿಎಲ್ ಟೂರ್ನಿ ಆರಂಭಕ್ಕೆ ಬೇಕಾದ ಎಲ್ಲ ರೀತಿಯ ತಯಾರಿ ಪೂರ್ಣಗೊಂಡಿದ್ದು, ನಾಳೆ ಅಧಿಕೃತವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 

ಹಾಲಿ ವರ್ಷದ ಐಪಿಎಲ್ ಟೂರ್ನಿಯು ಸೆಪ್ಟಂಬರ್ 19ರಿಂದ ಆರಂಭವಾಗಿ ನವೆಂಬರ್ 10ರ ತನಕ ಯುಎಇಯ ದುಬೈ, ಅಬುಧಾಬಿ ಹಾಗೂ ಶಾರ್ಜಾಗಳಲ್ಲಿ ನಡೆಯಲಿದೆ. 53 ದಿನಗಳ ಕಾಲ ನಡೆಯಲಿರುವ ಐಪಿಎಲ್‌ ಟೂರ್ನಿಯು ಸೆ.19 ರಂದು ಪ್ರಾರಂಭವಾಗಿ ನ.10ರಂದು ಕೊನೆಗೊಳ್ಳಲಿದೆ.   ತಮ್ಮ ನೆಚ್ಚಿನ ತಂಡಗಳು ಯಾವ ದಿನದಂದು ಆಡುತ್ತವೆ ಎಂದು ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಭಾರತದಲ್ಲಿ ಆಯೋಜನೆಯಾಗಬೇಕಿದ್ದ ಐಪಿಎಲ್ ಟೂರ್ನಿ ಕೊರೋನಾ ಸಾಂಕ್ರಾಮಿಕದಿಂದಾಗಿ ಯುಎಇಗೆ ಶಿಫ್ಟ್ ಆಗಿತ್ತು. ಈಗಾಗಲೇ ಎಲ್ಲ ತಂಡಗಳು ಯುಎಇನಲ್ಲಿ ಬೀಡುಬಿಟ್ಟಿದ್ದು, ಟೂರ್ನಿಗೆ ತಯಾರಿ ನಡೆಸುತ್ತಿವೆ. ಏತನ್ಮಧ್ಯೆ ಐಪಿಎಲ್ ತಂಡಗಳಲ್ಲಿನ ಸಿಬ್ಬಂದಿಗಳು ಮತ್ತು ಆಟಗಾರರು ಕೊರೋನಾ ಸೋಂಕಿಗೆ ತುತ್ತಾಗುತ್ತಿರುವುದು ಫ್ರಾಂಚೈಸಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅದಾಗ್ಯೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಆಟಗಾರರು ಮತ್ತು ಸಿಬ್ಬಂದಿಗಳ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran conflict: ಟೆಹ್ರಾನ್'ನಲ್ಲಿ ಭಾರೀ ಸ್ಫೋಟ, ಬಾಂಬ್ ದಾಳಿ ಮತ್ತಷ್ಟು ಹೆಚ್ಚಲಿದೆ ಎಂದು ಅಮೆರಿಕಾ ಎಚ್ಚರಿಕೆ

ಟ್ರಂಪ್ ಹತ್ಯೆಗೆ ಸಂಚು: ಇರಾನ್ ಜೊತೆಗೆ ನಂಟು ಹೊಂದಿದ ಪಾಕ್ ವ್ಯಕ್ತಿ ದೋಷಿ ಎಂದ ಅಮೆರಿಕ ನ್ಯಾಯಾಲಯ!

T20 ವಿಶ್ವಕಪ್ 2026: ಭಾರತದ ವಿರುದ್ಧ ಸ್ಫೋಟಕ ಶತಕ: Jacob Bethell ದಾಖಲೆಗಳ ಸುರಿಮಳೆ

Dhurandhar The Revenge trailer: ಪಾಕ್‌ನ ಭವಿಷ್ಯವನ್ನು ಭಾರತ ಬರೆಯಲಿದೆ! ಏನಿದು ರಣವೀರ್ ಸಿಂಗ್ ಶಪಥ?

T20 ವಿಶ್ವಕಪ್ 2026: '499 ರನ್, 34 ಸಿಕ್ಸರ್, 39 ಬೌಂಡರಿ': T20 ಇತಿಹಾಸದ ಅಪರೂಪದ ದಾಖಲೆ ಬರೆದ India vs England ಪಂದ್ಯ

SCROLL FOR NEXT