ಕ್ರಿಕೆಟ್

10 ವಿಕೆಟ್‌ ಹೇಗೆ ಪಡೆದಿರಿ? ಎಜಾಜ್ ಪಟೇಲ್‌ಗೆ ಅಶ್ವಿನ್ ಪ್ರಶ್ನೆ; ದೇಹದಲ್ಲಿನ ಎಲುಬುಗಳು ನಡುಗುತ್ತಿವೆ ಎಂದ ಸ್ಪಿನ್ನರ್

Vishwanath S

ಮುಂಬೈ: ಜಿಮ್ ಲೇಕರ್ ಮತ್ತು ಅನಿಲ್ ಕುಂಬ್ಳೆ ಬಳಿಕ ಎಜಾಜ್ ಪಟೇಲ್ ಟೆಸ್ಟ್‌ನ ಇನ್ನಿಂಗ್ಸ್ ವೊಂದರಲ್ಲಿ 10 ವಿಕೆಟ್ ಗಳನ್ನು ಪಡೆದಿರುವ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 372 ರನ್ ಗಳಿಂದ 2 ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿದೆ. ರವಿಚಂದ್ರನ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಆದಾಗ್ಯೂ, ಸ್ವತಃ ಅಶ್ವಿನ್ ನ್ಯೂಜಿಲೆಂಡ್‌ನ ಎಡಗೈ ಸ್ಪಿನ್ನರ್ ಎಜಾಜ್ ಪಟೇಲ್ ನೀಡಿರುವ ಪ್ರದರ್ಶನದಿಂದ ಪ್ರಭಾವಿತರಾಗಿದ್ದಾರೆ. 

ಮುಂಬೈ ಟೆಸ್ಟ್ ಮುಗಿದ ಬಳಿಕ ಅಶ್ವಿನ್ ಸ್ವತಃ ಎಜಾಜ್ ಪಟೇಲ್ ಅವರನ್ನು ಸಂದರ್ಶನ ಮಾಡಿದರು. ಅಲ್ಲದೆ, ಟೀಮ್ ಇಂಡಿಯಾ ಸ್ಟಾರ್‌ಗಳ ಹಸ್ತಾಕ್ಷರವಿರುವ ಜೆರ್ಸಿಯನ್ನು ಗಿಫ್ಟ್ ಆಗಿ ಭಾರತೀಯ ಮೂಲದ ನ್ಯೂಜಿಲೆಂಡ್ ಆಟಗಾರ ಎಜಾಜ್ ಗೆ ನೀಡಿದರು. 

ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ ಪಡೆಯಲು ಏನು ಮಾಡಬೇಕು?

ಅಶ್ವಿನ್: 'ನಾನು ಇಷ್ಟು ವರ್ಷಗಳಿಂದ ಆಡುತ್ತಿದ್ದೇನೆ ಆದರೆ ಟೆಸ್ಟ್‌ನ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ಗಳನ್ನು ತೆಗೆದುಕೊಳ್ಳಲು ಹತ್ತಿರವೂ ಬಂದಿಲ್ಲ. ನೀವು ಈ ಸಾಧನೆಯನ್ನು ಹೇಗೆ ಮಾಡಿದ್ದೀರಿ. ಜಿಮ್ ಲೇಕರ್ ಮತ್ತು ಅನಿಲ್ ಕುಂಬ್ಳೆ ನಂತರ ಈ ಸಾಧನೆ ಮಾಡಿದ ಮೂರನೇ ಬೌಲರ್ ನೀವು ಎನಿಸಿಕೊಂಡಿದ್ದೀರಾ. ನಾನು ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ಗಳನ್ನು ಪಡೆಯಬೇಕಾದರೆ ಏನು ಮಾಡಬೇಕು ಎಂದು ಕೇಳಿದರು. 

ಎಜಾಜ್: 'ನೀವು ನನಗಿಂತ ಹೆಚ್ಚು ಅನುಭವಿ ಆಟಗಾರ. ನಾನು ತುಂಬಾ ನಿಧಾನವಾಗಿ ಬೌಲ್ ಮಾಡಿದರೆ ಭಾರತೀಯ ಆಟಗಾರರು ಬಿಡಲ್ಲ. ಇಂಡಿಯನ್ ಬ್ಯಾಟ್ಸಮನ್ ಗಳು ಸ್ಪಿನ್ ವಿರುದ್ಧ ತುಂಬಾ ಆಕ್ರಮಣಕಾರಿಯಾಗಿ ಆಡುತ್ತಾರೆ. ಹಾಗಾಗಿ ಪಿಚ್ ನ ಸರಿಯಾದ ಭಾಗದಲ್ಲಿ ಬೌಲಿಂಗ್ ಮಾಡುವುದು ನನ್ನ ಪ್ರಯತ್ನವಾಗಿತ್ತು. ಅದರ ಫಲವೇ 10 ವಿಕೆಟ್ ಗಳು' ಎಂದು ತಿಳಿಸಿದರು. 
 
ಭಾರತದ ಬಗ್ಗೆ ನಿಮ್ಗೆ ಏನು ಅನಿಸುತ್ತದೆ? 
ಅಶ್ವಿನ್: ವೇಗದ ಬೌಲರ್‌ನಿಂದ ನೀವು ಸ್ಪಿನ್ನರ್ ಆಗಿದ್ದು ಹೇಗೆ ಎಂದು ಅಶ್ವಿನ್ ಪ್ರಶ್ನೆ ಮಾಡಿದ್ದರು. (ಅಂಡರ್-19 ಹಂತದವರೆಗೆ ಎಜಾಜ್ ಎಡಗೈ ವೇಗದ ಬೌಲರ್ ಆಗಿದ್ದರು. ಬಳಿಕ ಸ್ಪಿನ್ನರ್ ಆದರೂ.)
 
ಎಜಾಜ್: 'ವೇಗದ ಬೌಲರ್ ಆಗಲು ಮುಖ್ಯವಾಗಿ ಎತ್ತರಬೇಕು. ಆದರೆ, ನನ್ನ ಎತ್ತರ ಸಾಕಾಗುವುದಿಲ್ಲ ಅನ್ನೋದು ಅರಿವಿಗೆ ಬಂತು. ಹಾಗಾಗಿ ನಾನು ಹೊಸ ಕೌಶಲ್ಯವನ್ನು ರೂಢಿಸಿಕೊಂಡೆ. ಇದರಿಂದ ವಾಂಖೆಡೆ ಸ್ಟೇಡಿಯಂನಲ್ಲಿ ಇತಿಹಾಸ ಸೃಷ್ಟಿಸಿದ್ದರಿಂದ ಖುಷಿಯಾಯಿತು' ಎಂದು ಹೇಳಿದರು.
 
'ನಾವು ನ್ಯೂಜಿಲೆಂಡ್‌ಗೆ ಹೋಗಿರಬಹುದು. ಆದರೆ ಭಾರತೀಯರಲ್ಲಿರುವಂತೆ ನಮ್ಮ ಕುಟುಂಬದಲ್ಲಿ ಕ್ರಿಕೆಟ್ ಮೇಲಿನ ಪ್ರೀತಿ ಹಾಗೆಯೇ ಉಳಿದಿದೆ. ನಾವು ನಮ್ಮ ಅಂಗಳದಲ್ಲಿ ಸಾಕಷ್ಟು ಕ್ರಿಕೆಟ್ ಆಡುತ್ತೇವೆ. ಮನೆಯಲ್ಲಿ ಎಲ್ಲರಿಗೂ ಕ್ರಿಕೆಟ್ ಹುಚ್ಚು. ಈ ಕ್ರೇಜ್ ಅವರು ಕ್ರಿಕೆಟ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡಿತು ಎಂದು ಎಜಾಜ್ ಪ್ರತಿಕ್ರಿಯೆ ನೀಡಿದರು. 
 
ಸಂದರ್ಶನದ ಕೊನೆಯಲ್ಲಿ, ಅಶ್ವಿನ್ ಎಜಾಜ್‌ಗೆ ಭಾರತೀಯ ತಾರೆಯರು ಸಹಿ ಮಾಡಿದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಜಾಜ್, 'ನೀವು ನನ್ನ ಮಾತನ್ನು ನಂಬುವುದಿಲ್ಲ. ಈ ಗಿಫ್ಟ್ ನಿಂದಾಗಿ ನನ್ನ ದೇಹದಲ್ಲಿನ ಎಲುಬುಗಳು ನಡುಗುತ್ತಿವೆ. ಇದಕ್ಕಾಗಿ ಭಾರತೀಯ ಕ್ರಿಕೆಟ್ ಆಟಗಾರರಿಗೆ ತುಂಬಾ ಧನ್ಯವಾದಗಳು' ಎಂದು ತಿಳಿಸಿದರು.

SCROLL FOR NEXT