ಕ್ರಿಕೆಟ್

ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಆಯ್ಕೆ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ

Harshavardhan M

ನವದೆಹಲಿ: ಭಾರತೀಯ ಏಕದಿನ ಕ್ರಿಕೆಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ಅವರನ್ನು ಬುಧವಾರ ಆಯ್ಕೆ ಮಾಡಲಾಗಿತ್ತು. ಜನವರಿಯಿಂದ ಶುರುವಾಗಲಿರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ರೋಹಿತ್ ಅವರು ವಿರಾಟ್ ಕೊಹ್ಲಿಯವರಿಂದ ಕಪ್ತಾನ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. 

ಈ ಬಗ್ಗೆ ತಾವು ಮತ್ತು ಆಯ್ಕೆ ತಂಡದ ಚೇರ್ ಮೆನ್ ಕೊಹ್ಲಿ ಅವರಲ್ಲಿ ಮಾತನಾಡಿದ್ದು, ಅವರ ಇದುವರೆಗಿನ ಕೊಡುಗೆಗೆ ತಾವು ಆಭಾರಿಯಾಗಿರುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. 

ನಾಯಕತ್ವ ಬದಲಾವಣೆ ವಿಚಾರವಾಗಿ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಸೇರಿ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕವೇ ಈ ತೀರ್ಮಾನ ಕೈಗೊಂಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.  ವಿರಾಟ್ ಕೊಹ್ಲಿ ಟೆಸ್ಟ್ ತಂಡದ ಕ್ಯಾಪ್ಟನ್ ಅಗಿ ಮುಂದುವರಿಯಲಿದ್ದಾರೆ.

ವಿರಾಟ್ ಕೊಹ್ಲಿಯವರನ್ನು ಟಿ20 ಕಪ್ತಾನರಾಗಿ ಮುಂದುವರಿಸುವ ಯೋಚನೆ ಬಿಸಿಸಿಐ ದಾಗಿತ್ತು. ಆದರೆ ಕೊಹ್ಲಿ ಅದಕ್ಕೆ ಒಪ್ಪಲಿಲ್ಲ. ಅಲ್ಲದೆ ಆಯ್ಕೆ ಸಮಿತಿ ಕೂಡಾ ಏಕದಿನ ಪಂದ್ಯ ಹಾಗೂ ಟಿ20 ಫಾರ್ಮ್ಯಾಟ್ ಗಳಿಗೆ ಪ್ರತ್ಯೇಕ ಕ್ಯಾಪ್ಟನ್ ಇರುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಾಗಿ ಸೌರವ್ ಮಾಹಿತಿ ನೀಡಿದ್ದಾರೆ.

SCROLL FOR NEXT