ಕ್ರಿಕೆಟ್

ಕ್ರಿಕೆಟ್: ಮಹಿಳಾ ಒಡಿಐ ವಿಶ್ವಕಪ್ ವೇಳಾಪಟ್ಟಿ; ಮಾ.6 ರಂದು ಪಾಕ್ ವಿರುದ್ಧ ಭಾರತದ ಮೊದಲ ಪಂದ್ಯ

Srinivas Rao BV

ಮಾ.4, 2022 ರಿಂದ ಮಹಿಳಾ ಒಡಿಐ ವಿಶ್ವಕಪ್ ಸರಣಿ ನ್ಯೂಜಿಲ್ಯಾಂಡ್ ನಲ್ಲಿ ಪ್ರಾರಂಭವಾಗಲಿದ್ದು, ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮೊದಲ ಪಂದ್ಯದಲ್ಲಿ ಎದುರಿಸಲಿದೆ. 

ಹಾಲಿ ಚಾಂಪಿಯನ್ ಗಳಾದ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಮಾ.05 ರಂದು ಸೆಣೆಸಿದರೆ, ಮಾ.06 ರಂದು ಭಾರತ-ಪಾಕಿಸ್ತಾನ ಪಂದ್ಯಗಳು ನಡೆಯಲಿದೆ. 31 ದಿನಗಳಲ್ಲಿ 31 ಪಂದ್ಯಗಳು ನಡೆಯಲಿದ್ದು, 8 ತಂಡಗಳು ವಿಶ್ವಕಪ್ ಗೆಲ್ಲಲು ಸೆಣೆಸಲಿವೆ. 

ನ್ಯೂಜಿಲ್ಯಾಂಡ್ ನ ಆಕ್ಲೆಂಡ್, ಕ್ರೈಸ್ಟ್‌ಚರ್ಚ್, ಡ್ಯುನೆಡಿನ್, ಹ್ಯಾಮಿಲ್ಟನ್, ಟೌರಂಗಾ ಮತ್ತು ವೆಲ್ಲಿಂಗ್‌ಟನ್ ಗಳಲ್ಲಿ ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿದೆ. 

ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಭಾರತ 2017-20 ರ ವರೆಗಿನ ಐಸಿಸಿ ಮಹಿಳಾ ಚಾಂಪಿಯನ್ಷಿಪ್ ಸ್ಥಾನಗಳಿಂದ ಅರ್ಹತೆ ಪಡೆದರೆ ನ್ಯೂಜಿಲ್ಯಾಂಡ್ ತಂಡ ಆಥಿತೇಯ ತಂಡವಾಗಿರುವ ಕಾರಣಕ್ಕೆ ಸ್ವಾಭಾವಿಕವಾಗಿ ಅರ್ಹತೆ ಪಡೆದುಕೊಂಡಿದೆ. 

ಬಾಂಗ್ಲಾದೇಶ, ಪಾಕಿಸ್ತಾನ, ವೆಸ್ಟ್ ಇಂಡೀಸ್ ತಂಡಗಳು ಅಂತಿಮವಾಗಿ ಅರ್ಹತೆ ಪಡೆದುಕೊಂಡ ತಂಡಗಳಾಗಿದೆ.

SCROLL FOR NEXT