ಮೊಹಮ್ಮದ್ ಶಮಿ 
ಕ್ರಿಕೆಟ್

5 ವಿಕೆಟ್ ಗೊಂಚಲು ಜೊತೆಗೆ 9896 ಎಸೆತಗಳಲ್ಲಿ ನೂತನ ದಾಖಲೆ ಬರೆದ ಶಮಿ, ಭಾರತೀಯ ಬೌಲರ್‌ಗಳಲ್ಲೇ ಅಗ್ರಸ್ಥಾನ!

ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ. 

ಸೆಂಚೂರಿಯನ್: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ. 

ಮೊದಲ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಐದು ವಿಕೆಟ್​ನೊಂದಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ 200 ವಿಕೆಟ್​ಗಳನ್ನು ಪಡೆದಿದ್ದಾರೆ. ಅದು ಕೂಡ ಅತೀ ಕಡಿಮೆ ಎಸೆತಗಳ ಮೂಲಕ ಎಂಬುದು ವಿಶೇಷ. ಭಾರತ ಪರ ಅತೀ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಇದೀಗ ಶಮಿ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನದಲ್ಲಿದ್ದರು.

ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಒಟ್ಟು 10,248 ಎಸೆತಗಳ ಮೂಲಕ 200 ವಿಕೆಟ್​ ಪಡೆದಿದ್ದರೆ, ಮೊಹಮ್ಮದ್ ಶಮಿ 9896 ಎಸೆತಗಳಲ್ಲಿ ಇನ್ನೂರು ವಿಕೆಟ್ ಪಡೆದು ನೂತನ ದಾಖಲೆ ಬರೆದರು. 

ಅತೀ ಕಡಿಮೆ ಎಸೆತದಲ್ಲಿ 200 ವಿಕೆಟ್ ಪಡೆದ ಭಾರತೀಯರ ಪಟ್ಟಿ
ಮೊಹಮ್ಮದ್ ಶಮಿ 9896 ಎಸೆತ
ಆರ್ ಅಶ್ವಿನ್ 10,248 ಎಸೆತ
ಕಪಿಲ್ ದೇವ್ 11,066 ಎಸೆತ
ರವೀಂದ್ರ ಜಡೇಜಾ 11,989 ಎಸೆತ
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!