ಅಜಯ್ ಜಡೇಜಾ 
ಕ್ರಿಕೆಟ್

ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದ ಮಾಜಿ ಕ್ರಿಕೆಟಿಗ ಅಜಯ್‌ ಜಡೇಜಾಗೆ 5,000 ರೂ. ದಂಡ!

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಗೋವಾದ ಗ್ರಾಮವೊಂದರ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದಿದ್ದಾರೆ.

ಪಣಜಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಗೋವಾದ ಗ್ರಾಮವೊಂದರ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದಿದ್ದಾರೆ.  

ಈ ಪ್ರಮಾದಕ್ಕಾಗಿ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರ ಆದೇಶದಂತೆ 5,000 ರೂ. ದಂಡ ಪಾವತಿಸಿದ್ದಾರೆ. ಗೋವಾದ ಉತ್ತರ ಪ್ರಾಂತ್ಯದ ಅಲ್ಡೋನಾದಲ್ಲಿ ಅಜಯ್ ಜಡೇಜಾ ನಿವಾಸವಿದೆ.   

ಲೇಖಕ ಅಮಿತ್ ಘೋಷ್ ಸೇರಿದಂತೆ ಹಲವಾರು ಗಣ್ಯರು ಅಲ್ಲಿ ವಾಸಿಸುತ್ತಿದ್ದಾರೆ. ಗೋವಾ ಪ್ರವಾಸಿ ತಾಣವಾಗಿರುವುದರಿಂದ ಇಲ್ಲಿ ಹೆಚ್ಚು ತ್ಯಾಜ್ಯ  ಸಂಗ್ರಹವಾಗುತ್ತದೆ. ಜಡೇಜಾ ವಾಸಿಸುವ ಗ್ರಾಮದ ಸಮೀಪದಲ್ಲಿರುವ ನಾಚಿನೋಲಾದಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಕಸ ಯಾವ ವ್ಯಕ್ತಿಗೆ ಸೇರಿದ್ದು ಎಂಬುದನ್ನು ಕಂಡುಕೊಂಡು ಅವರ ಮೇಲೆ ದಂಡ ವಿಧಿಸಲಾಗುತ್ತದೆ.

ಕಸದ ಸಮಸ್ಯೆಯಿಂದ ನಮ್ಮ ಗ್ರಾಮ ತತ್ತರಿಸಿ ಹೋಗಿದ್ದು, ಹೊರಗಿನಿಂದ ತಂದ ಕಸವನ್ನು ಇಲ್ಲಿ ಎಸೆಯಲಾಗುತ್ತದೆ. ಆ ಕಸದ ಚೀಲಗಳು ಯಾರದ್ದು ಎಂಬುದನ್ನು ಪತ್ತೆ ಹಚ್ಚಲು ನಾವು ಕೆಲವು ಯುವಕರನ್ನು ನೇಮಿಸಿಕೊಂಡಿದ್ದೇವೆ. ಕಸದ ಚೀಲವೊಂದರ ಮೇಲೆ ಅಜಯ್ ಜಡೇಜಾ ಅವರ ಹೆಸರು ಕಾಣಿಸಿಕೊಂಡಿತು. ಮುಂದೆ ಇಲ್ಲಿ ಕಸವನ್ನು ವಿಲೇವಾರಿ ಮಾಡಬೇಡಿ ಎಂದು ನಾವು ಅವರಿಗೆ ಸಲಹೆ ನೀಡಿದ್ದೇವೆ ಎಂದರು.

ನಮ್ಮ ಷರತ್ತುಗಳ ಅನ್ವಯ ಯಾವುದೇ ತಗಾದೆ ತೆಗೆಯದೆ ಅವರು ದಂಡ ಪಾವತಿಸಿದ್ದಾರೆ. ಒಬ್ಬ ಶ್ರೇಷ್ಠ ಕ್ರಿಕೆಟಿಗ ನಮ್ಮ ಪ್ರದೇಶದಲ್ಲಿ ನೆಲೆಸಿರುವುದು ನಮಗೆ ಹೆಮ್ಮೆ. ಆದರೆ ಎಲ್ಲರೂ ಕಸದ ನಿಯಮಗಳನ್ನು ಪಾಲಿಸಬೇಕು 'ಎಂದು ಗ್ರಾಮದ ಸರ್ಪಂಚ್ ತೃಪ್ತಿ ಬಂಡೋದ್ಕರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT