ಮ್ಯಾಥ್ಯೂ ಹೇಡನ್ 
ಕ್ರಿಕೆಟ್

ಭಾರತದ ವಿರುದ್ಧ ಐತಿಹಾಸಿಕ ದಾಖಲೆ ಬರೆಯುವ ಅವಕಾಶ ಪಾಕಿಸ್ತಾನಕ್ಕೆ ಇದೆ: ಮ್ಯಾಥ್ಯೂ ಹೇಡನ್

ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಪ್ರಾಬಲ್ಯದ ವಿರುದ್ಧ ಐತಿಹಾಸಿಕ ದಾಖಲೆ ಬರೆಯುವ ಅವಕಾಶ ಪಾಕಿಸ್ತಾನಕ್ಕೆ ಇದೆ ಎಂದು ಆಸಿಸ್ ದೈತ್ಯ ದಾಂಡಿಗ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.

ದುಬೈ: ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಪ್ರಾಬಲ್ಯದ ವಿರುದ್ಧ ಐತಿಹಾಸಿಕ ದಾಖಲೆ ಬರೆಯುವ ಅವಕಾಶ ಪಾಕಿಸ್ತಾನಕ್ಕೆ ಇದೆ ಎಂದು ಆಸಿಸ್ ದೈತ್ಯ ದಾಂಡಿಗ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.

ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಆಯ್ಕೆಯಾಗಿರುವ ಮ್ಯಾಥ್ಯೂ ಹೇಡನ್, ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಪ್ರಾಬಲ್ಯದ ವಿರುದ್ಧ ಐತಿಹಾಸಿಕ ದಾಖಲೆ ಬರೆಯುವ ಅವಕಾಶ ಪಾಕಿಸ್ತಾನಕ್ಕೆ ಇದೆ ಎಂದು ಹೇಳಿದ್ದಾರೆ.

ಕ್ರಿಕೆಟ್ ವೆಬ್ ಸೈಟ್ ನೊಂದಿಗೆ ಮಾತನಾಡಿರುವ ಮ್ಯಾಥ್ಯೂ ಹೇಡನ್, 'ಮುಂದೊಂದು ದಿನ ನಾನು ಪಾಕಿಸ್ತಾನದ ಡ್ರೆಸ್ಸಿಂಗ್ ರೂಂ ಒಳಗೆ ಕುಳಿತುಕೊಳ್ಳುತ್ತೇನೆ ಎಂದು ನನ್ನ ಕನಸಿನಲ್ಲಿಯೂ ಯೋಚಿಸಿರಲಿಲ್ಲ.  ಅಲ್ಪಾವಧಿಗೆ ಸಹಿ ಹಾಕಿದ್ದರೂ ಸಹ, ಜವಾಬ್ಗಾರಿ ಹೆಚ್ಚಿದೆ. ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಗೆಲುವಲ್ಲಿ ಸಹಾಯ ಮಾಡಲು ಮತ್ತು ಭಾರತದ ವಿರುದ್ಧದ ಉತ್ತಮ ಪ್ರದರ್ಶನ ನೀಡಲು ಕಾರ್ಯ ನಿರ್ವಹಿಸಬೇಕಿದೆ. 

"ನಮ್ಮ ಆಟದ ವಿವಿಧ ಅಂಶಗಳ ಮೂಲಕ ನಾನು ನೋಡಿದ ಯಾವುದೂ ಭಾರತ ಮತ್ತು ಪಾಕಿಸ್ತಾನದ ಪೈಪೋಟಿಗೆ ಹೊಂದಿಕೆಯಾಗುವುದಿಲ್ಲ. ಆದಾಗ್ಯೂ, ಭಾರತದ ಪರವಾಗಿ ಒಂದು ಬದಿಯ ದಾಖಲೆಯ ಹೊರತಾಗಿಯೂ, ತಂಡಗಳು ಸವಾಲನ್ನು ಹೇಗೆ ಸ್ವೀಕರಿಸುತ್ತವೆ ಎಂಬುದು ಮುಖ್ಯವಾಗುತ್ತದೆ. ಒತ್ತಡದ ಹೊರತಾಗಿಯೂ ಪಾಕ್ ಡ್ರೆಸಿಂಗ್ ರೂಮಿನಲ್ಲಿ ಆಟಗಾರರು ನಿರಾಳವಾಗಿದ್ದಾರೆ ಎಂದು ಹೇಳಿದರು.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಆಡುವಾಗ ಹೇಗೆ ಒತ್ತಡ ವಿರುತ್ತದೆಯೇ ಅದೇ ರೀತಿ ಭಾರತದ ವಿರುದ್ಧ ಆಡವಾಗಲೂ ಒತ್ತಡವಿದೆ.  ಆದರೆ ಈ ಒತ್ತಡವು ನೀವು ಅನುಮತಿಸುವಷ್ಟು ಮಾತ್ರ. ನಿಮ್ಮ ಸಿದ್ಧತೆ ಇದೆ, ನಿಮ್ಮ ಅನುಭವವಿದೆ, ನಿಮಗೆ ಸಿಕ್ಕಿರುವ ಈ ಅವಕಾಶವು ಈಗ ಇತಿಹಾಸ ನಿರ್ಮಿಸುವ ಅವಕಾಶವಾಗಿದೆ. ಅಂಕಿ ಅಂಶಗಳು ಏನೇ ಇದ್ದರೂ ಮೈದಾನದಲ್ಲಿ ಯಾವ ತಂಡ ಉತ್ತಮವಾಗಿ ಆಡುತ್ತದೆಯೋ ಆ ತಂಡವೇ ಗೆಲುವು ಸಾಧಿಸುತ್ತದೆ. 

ಪಾಕ್ ನಾಯಕನ ಹೊಗಳಿದ ಹೇಡನ್
ಇದೇ ವೇಳೆ ಮ್ಯಾಥ್ಯೂ ಹೇಡನ್ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ರನ್ನು ಕೊಂಡಾಡಿದರು.  ನಾಯಕನ ಒತ್ತಡದ ನಡುವೆಯೇ ಬಾಬರ್ ತಮ್ಮ ಅದ್ಬುತ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಬಾಬರ್ ಕಡಿಮೆ ಸಮಯದಲ್ಲಿ ಸವಾಲಿಗೆ ಸಿದ್ದರಾಗುತ್ತಾರೆ.  ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಅಭ್ಯಾಸ ಪಂದ್ಯದಲ್ಲಿ ಸೋತರೂ, ಭಾರತವನ್ನು ಎದುರಿಸಲು ಪಾಕಿಸ್ತಾನವು ಬಲವಾದ ಬ್ಯಾಟಿಂಗ್ ಸಂಯೋಜನೆಯನ್ನು ಹೊಂದಿದೆ. ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಮತ್ತು ಫಖರ್ ಜಮಾನ್ ಅವರನ್ನು ಒಳಗೊಂಡ ಅಗ್ರ ಕ್ರಮಾಂಕ ಉತ್ತಮ ಹೋರಾಟ ನೀಡಲಿದೆ  ಎಂದು ಹೇಡನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?