ಅಭ್ಯಾಸ ನಿರತ ಟೀಂ ಇಂಡಿಯಾ ಆಟಗಾರರು 
ಕ್ರಿಕೆಟ್

ಟಿ-20 ವಿಶ್ವಕಪ್: ಟಾಸ್ ಗೆದ್ದವರೆ ಬಾಸ್! ಕಿವೀಸ್- ಇಂಡಿಯಾ ಪಂದ್ಯದಲ್ಲಿ ಟಾಸ್ ನಿರ್ಣಾಯಕ

ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಇನ್ನು ಮೂರೇ ದಿನಗಳು ಬಾಕಿ ಇವೆ. ಈ ಮಧ್ಯೆ, ಟೀಮ್ ಇಂಡಿಯಾ ಪಡೆಗೆ ಅಧಿಕ ಸಮಯಾವಕಾಶ ಸಿಕ್ಕಿದ್ದು, ನೆಟ್ ಅಭ್ಯಾಸದಲ್ಲಿ ಹೆಚ್ಚು ನಿರತರಾಗಿದ್ದಾರೆ. ಅಕ್ಟೋಬರ್ 31ರಂದು ನಡೆಯಲಿರುವ ಕಿವೀಸ್, ಭಾರತದ ಪಂದ್ಯದಲ್ಲಿ ಟಾಸ್ ಹೆಚ್ಚು ನಿರ್ಣಾಯಕವಾಗಲಿದೆ.

ದುಬೈ: ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಇನ್ನು ಮೂರೇ ದಿನಗಳು ಬಾಕಿ ಇವೆ. ಈ ಮಧ್ಯೆ, ಟೀಮ್ ಇಂಡಿಯಾ ಪಡೆಗೆ ಅಧಿಕ ಸಮಯಾವಕಾಶ ಸಿಕ್ಕಿದ್ದು, ನೆಟ್ ಅಭ್ಯಾಸದಲ್ಲಿ ಹೆಚ್ಚು ನಿರತರಾಗಿದ್ದಾರೆ. ಅಕ್ಟೋಬರ್ 31ರಂದು ನಡೆಯಲಿರುವ ಕಿವೀಸ್, ಭಾರತದ ಪಂದ್ಯದಲ್ಲಿ ಟಾಸ್ ಹೆಚ್ಚು ನಿರ್ಣಾಯಕವಾಗಲಿದೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಕ್ಕೂ ನೆರವಾಗಲಿದೆ. ನಿಧಾನಗತಿ ಬೌಲಿಂಗ್ ಗೆ ಹೆಚ್ಚು ಪ್ರಶಸ್ತವಾಗಿರುವ ಪಿಚ್ ನಲ್ಲಿ ನಂತರ ಬ್ಯಾಟಿಂಗ್ ಮಾಡುವ ತಂಡಕ್ಕೆ ಲಾಭದಾಯಕವಾಗಲಿದೆ ಅಂತಾ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಟಿ-20 ವಿಶ್ವಕಪ್ ನ ಈವರೆಗಿನ ಟೂರ್ನಿಯಲ್ಲಿ ಸೋಲು-ಗೆಲುವಿನ ಬಗ್ಗೆ ಲೆಕ್ಕಾಚಾರ ಹಾಕೋದಾದ್ರೆ ಮೊದಲು ಫಿಲ್ಡಿಂಗ್ ಆಯ್ದುಕೊಳ್ಳುವ ತಂಡಗಳು ಹೆಚ್ಚು ಗೆಲುವು ಸಾಧಿಸಿವೆ.

ಟಿ-20 ವಿಶ್ವಕಪ್ ನ ಸೂಪರ್-12ರ ಹಂತದಲ್ಲಿ ಇಲ್ಲಿವರೆಗೆ 9 ಪಂದ್ಯಗಳು ನಡೆದಿವೆ. ಅದರಲ್ಲಿ ಪ್ರಮುಖವಾಗಿ ನಂತರ ಬ್ಯಾಟಿಂಗ್ ಮಾಡಿದ 8 ತಂಡಗಳು ವಿಜಯ ಶಾಲಿಯಾಗಿವೆ. ಅಲ್ಲದೆ, ಈ ಟೂರ್ನಿಯ 7 ಪಂದ್ಯಗಳಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ತಂಡ ಗೆಲುವು ಪಡೆದಿವೆ. 

ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ಮಧ್ಯೆ ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ ತಂಡ ಸೋಲು ಅನುಭವಿಸಬೇಕಾಯಿತು. ಆದರೆ, ಈ ನಿಯಮಕ್ಕೆ ವಿರುದ್ಧವಾಗಿರುವ ಮ್ಯಾಚ್ ಅಂದರೆ ಅಫ್ಘಾನಿಸ್ತಾನ ಹಾಗೂ ಸ್ಕಾಟ್ ಲ್ಯಾಂಡ್ ನಡುವಿನ ಪಂದ್ಯ. ಈ ಮ್ಯಾಚ್ ನಲ್ಲಿ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡುವ ಮೂಲಕ 190 ರನ್ ಸಿಡಿಸಿ ಗೆಲುವು ಪಡೆದುಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IIT Bombay ವಿದ್ಯಾರ್ಥಿ ನಕಲು ಮಾಡಿದ್ದನ್ನು ತಡೆದಿದ್ದೇ ತಪ್ಪಾ? ಪ್ರೊಫೆಸರ್ ವಿರುದ್ಧ ಪ್ರತಿಭಟನೆ; ಯಾರು ಈ ಪ್ರೊ. Suryanarayana Doolla?

Bihar horror: ಕೋಚಿಂಗ್‌ ಸೆಂಟರ್`ನಿಂದ ಮರಳುತ್ತಿದ್ದ ಅಪ್ರಾಪ್ತ ಜೋಡಿ ಅಡ್ಡಗಟ್ಟಿದ ಗುಂಪು, ಲೈಂಗಿಕ ಕಿರುಕುಳ

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ..!

TMC ಹೆಸರು-ಚಿಹ್ನೆ ಫ್ರೀಜ್; ಚುನಾವಣಾ ಆಯೋಗದ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ಆಕ್ಷೇಪ, ತುರ್ತು ವಿಚಾರಣೆಗೆ ಸುಪ್ರೀಂ ಒಪ್ಪಿಗೆ..!

ಭೂಮಿಯನ್ನು ಸುತ್ತುತ್ತಿರುವ ಆಯುಧಗಳು: ಭಾರತದ ಮುಂದಿರುವ ಸವಾಲುಗಳೇನು? (ಜಾಗತಿಕ ಜಗಲಿ)