ಕ್ರಿಕೆಟ್

ಟಿ20 ವಿಶ್ವಕಪ್: ಕಳಪೆ ಬ್ಯಾಟಿಂಗ್ ನಲ್ಲೂ ದಾಖಲೆ ಬರೆದ ಟೀಂ ಇಂಡಿಯಾ!!

Srinivasamurthy VN

ದುಬೈ: ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಸಂಪೂರ್ಣ ವೈಫಲ್ಯ ಅನುಭವಿಸಿದ್ದು, ಕಳಪೆ ಬ್ಯಾಟಿಂಗ್ ನಲ್ಲೂ ಟೀಂ ಇಂಡಿಯಾ ದಾಖಲೆ ಬರೆದಿದೆ.

ಹೌದು.. ಇಂದು ದುಬೈನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 110 ರನ್ ಗಳನ್ನಷ್ಟೇ ಗಳಿಸಿದೆ. ಆ ಮೂಲಕ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಕಳಪೆ ದಾಖಲೆ ನಿರ್ಮಿಸಿದ್ದು, ಇದು ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ 2ನೇ ಕನಿಷ್ಠ ರನ್ ಗಳಿಕೆಯಾಗಿದೆ. 

ಈ ಹಿಂದೆ 2016ರಲ್ಲಿ ನಾಗ್ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಕೇವಲ 79 ರನ್ ಗಳಿಸಿತ್ತು. ಇದು ಟಿ20 ವಿಶ್ವಕಪ್ ನಲ್ಲಿ ಭಾರತ ತಂಡದ ಅತ್ಯಂತ ಕಡಿಮೆ ರನ್ ಗಳಿಕೆಯಾಗಿದೆ.

ಬಳಿಕದ ಸ್ಥಾನದಲ್ಲಿ ಇಂದಿನ ಪಂದ್ಯವಿದ್ದು, ಇಲ್ಲಿ ಭಾರತ ತಂಡ 110 ರನ್ ಗಳಿಸಿದೆ. ನಂತರದ ಸ್ಥಾನದಲ್ಲಿ 2009ರಲ್ಲಿ ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 118 ರನ್ ಗಳಿಸಿತ್ತು. 2014ರಲ್ಲಿ ಮೀರ್ ಪುರದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 130 ರನ್ ಗಳಿಸಿತ್ತು. ಇದು ನಾಲ್ಕನೇ ಸ್ಥಾನದಲ್ಲಿದೆ.
 

SCROLL FOR NEXT