ಕ್ರಿಕೆಟ್

ಟೀಂ ಇಂಡಿಯಾದ ನ್ಯೂಜಿಲೆಂಡ್ ಪ್ರವಾಸ ಮುಂದಿನ ವರ್ಷಕ್ಕೆ ಮುಂದೂಡಿಕೆ 

Nagaraja AB

ವೆಲ್ಲಿಂಗ್ಟನ್:  ಬಿಡುವಿಲ್ಲದ ವೇಳಾಪಟ್ಟಿ ಹಾಗೂ  ಕೋವಿಡ್-19 ಸಂಬಂಧಿತ ನಿರ್ಬಂಧಿತ ಕಾರಣಗಳಿಂದ ಈ ವರ್ಷದ ಅಂತ್ಯದಲ್ಲಿ ನಿಗದಿಯಾಗಿದ್ದ ಟೀಂ ಇಂಡಿಯಾದ ನ್ಯೂಜಿಲೆಂಡ್ ಪ್ರವಾಸ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. 

ವಿಶ್ವಕಪ್ ಸೂಪರ್ ಲೀಗ್ ಭಾಗವಾಗಿ ಭಾರತ ಅಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಬೇಕಾಗಿತ್ತು. ಈ ಪಂದ್ಯಕ್ಕೂ ಮುನ್ನ ಭಾರತ ಅಲ್ಲಿ  14 ದಿನಗಳ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಬಳಿಕ ಭಾರತ ಪಂದ್ಯವನ್ನಾಡಲಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ವಕ್ತಾರರು ಸ್ಪಷ್ಪಪಡಿಸಿದ್ದಾರೆ.

ನವೆಂಬರ್ ನಲ್ಲಿ ಎರಡು ಟೆಸ್ಟ್ ಹಾಗೂ ಮೂರು ಟಿ-20 ಪಂದ್ಯಗಳಿಗಾಗಿ ನ್ಯೂಜಿಲೆಂಡ್ ಭಾರತದ ಪ್ರವಾಸ ನಿಗದಿಯಾಗಿದೆ.  ಮುಂದಿನ ವರ್ಷ ಮಾರ್ಚ್- ಏಪ್ರಿಲ್ ನಲ್ಲಿ ಮಹಿಳೆಯರ ವಿಶ್ವಕಪ್ ನಲ್ಲಿ ಏಳು ತಂಡಗಳ ಜೊತೆಗೆ ಬೇಸಿಗೆಯಲ್ಲಿ ಬಾಂಗ್ಲಾದೇಶ, ನೆದರ್ ಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯವನ್ನು ನ್ಯೂಜಿಲೆಂಡ್ ಆಯೋಜಿಸಲಿದೆ.

 ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಭಾಗವಾಗಿ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯ ಆಯೋಜಿಸಲಾಗುತ್ತಿದೆ. ಚಳಿಗಾಲದಿಂದಲೂ ಸುಧೀರ್ಘ ಪ್ರವಾಸಕ್ಕಾಗಿ ಬಹಳಷ್ಟು ಆಟಗಾರರು ಇಲ್ಲಿಗೆ ಬರಲಿದ್ದು, ಅವರಿಗಾಗಿ ನಾವು ತವರಿನಲ್ಲಿ ಸಮಯ ಕೊಡಬೇಕಾಗುತ್ತದೆ ಎಂದು  ನ್ಯೂಜಿಲೆಂಡ್ ಮುಖ್ಯ ಕಾರ್ಯನಿರ್ವಹಕ ಡೇವಿಡ್ ವೈಟ್ ಹೇಳಿದ್ದಾರೆ.

SCROLL FOR NEXT