ಭಾರತಕ್ಕೆ ಜಯ 
ಕ್ರಿಕೆಟ್

2ನೇ ಏಕದಿನ ಪಂದ್ಯ: ಯಾರೊಬ್ಬರ ಶತಕವಿಲ್ಲದೇ 300+ ಗುರಿ ತಲುಪಿದ ಭಾರತ, ದಾಖಲೆ ನಿರ್ಮಾಣ

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 300ಕ್ಕೂ ಅಧಿಕ ರನ್ ಗಳ ಬೃಹತ್ ಗುರಿಯನ್ನು ಬೆನ್ನು  ಹತ್ತಿ ಯಶಸ್ವಿಯಾಗಿ ಗೆಲುವು ದಾಖಲಿಸಿದ ಟೀಂ ಇಂಡಿಯಾ ಈ ಗೆಲುವಿನ ಮೂಲಕ ಮತ್ತೊಂದು ದಾಖಲೆ ನಿರ್ಮಾಣ ಮಾಡಿದೆ.

ಕ್ವೀನ್ಸ್ ಪಾರ್ಕ್ ಓವಲ್: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 300ಕ್ಕೂ ಅಧಿಕ ರನ್ ಗಳ ಬೃಹತ್ ಗುರಿಯನ್ನು ಬೆನ್ನು  ಹತ್ತಿ ಯಶಸ್ವಿಯಾಗಿ ಗೆಲುವು ದಾಖಲಿಸಿದ ಟೀಂ ಇಂಡಿಯಾ ಈ ಗೆಲುವಿನ ಮೂಲಕ ಮತ್ತೊಂದು ದಾಖಲೆ ನಿರ್ಮಾಣ ಮಾಡಿದೆ.

ಹೌದು.. ನಿನ್ನೆ ಟ್ರಿನಿಡಾಡ್ ನ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 2 ವಿಕೆಟ್ ಗಳ ವಿರೋಚಿತ ಗೆಲುವು ಸಾಧಿಸಿತು.  ವಿಂಡೀಸ್ ತಂಡ ನೀಡಿದ 312 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ 49.4 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 312 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಮುಟ್ಟಿತು.

ಅಚ್ಚರಿ ಎಂದರೆ ಈ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ ಗೆಲುವು ಸಾಧಿಸಿತಾದರೂ ಈ ಮ್ಯಾರಥಾನ್ ಚೇಸಿಂಗ್ ನಲ್ಲಿ ತಂಡದ ಯಾವೊಬ್ಬ ಆಟಗಾರನೂ ಶತಕ ದಾಖಲಿಸಿಲ್ಲ. ಆದರೂ ಸಾಂಘಿಕ ಹೋರಾಟದ ಮೂಲಕ ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದಿದೆ. ಪ್ರಮುಖವಾಗಿ ಶುಭ್ ಮನ್ ಗಿಲ್ (43 ರನ್), ಶ್ರೇಯಸ್ ಅಯ್ಯರ್ (63 ರನ್), ಅಕ್ಸರ್ ಪಟೇಲ್ (ಅಜೇಯ 64 ರನ್) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತ ವಿಂಡೀಸ್ ವಿರುದ್ಧ 2 ವಿಕೆಟ್ ಗಳ ವಿರೋಚಿತ ಗೆಲುವು ಸಾಧಿಸಿದೆ.

ಅಂತಿಮ ಹಂತದಲ್ಲಿ ಅಕ್ಸರ್ ಪಟೇಲ್ ಆಲ್ರೌಂಡ್ ಆಟವೇ ವಿಂಡೀಸ್ ಗೆ ಮುಳುವಾಯಿತು. ಈ ಪಂದ್ಯದ ಗೆಲುವಿನ ಮೂಲಕ ಭಾರತ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, 300+ ಬೃಹತ್ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದ ಪಂದ್ಯಗಳಲ್ಲಿ ವೈಯುಕ್ತಿಕ ಗರಿಷ್ಠ ರನ್ ಗಳಿಸಿದೇ ಗೆದ್ದ ಪಂದ್ಯಗಳಲ್ಲಿ ನಿನ್ನೆಯ ಪಂದ್ಯ ಅಗ್ರಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಅಕ್ಸರ್ ಪಟೇಲ್ ಗಳಿಸಿದ 64 ರನ್ ಗಳೇ ಗೆದ್ದ ತಂಡದ ಆಟಗಾರನೊಬ್ಬ ಗಳಿಸಿದ ಗರಿಷ್ಠ ವೈಯುಕ್ತಿಕ ರನ್ ಗಳಿಕೆಯಾಗಿದೆ.

ಇದಕ್ಕೂ ಮೊದಲು ಇಂತಹುದೇ ದಾಖಲೆ ಕ್ರಿಕೆಟ್ ಇತಿಹಾಸದಲ್ಲಿ 2 ಬಾರಿ ದಾಖಲಾಗಿದೆ. 2005ರಲ್ಲಿ ಅಹ್ಮದಾಬಾದ್ ನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಭಾರತ ನೀಡಿದ್ದ 319 ರನ್ ಗಳ ಗುರಿಯನ್ನು ಪಾಕಿಸ್ತಾನ ತಂಡ ಯಶಸ್ವಿಯಾಗಿ ಚೇಸ್ ಮಾಡಿತ್ತು. ಅಂದು ಪಾಕ್ ಪರ ಶೊಯೆಬ್ ಮಲ್ಲಿಕ್ ಗಳಿಸಿದ್ದ 65 ರನ್ ಗಳೇ  ಆ ತಂಡದ ಆಟಗಾರನೊಬ್ಬ ಗಳಿಸಿದ ವೈಯುಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು. ಬಳಿಕ 2008 ರಲ್ಲಿ ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಗೌತಮ್ ಗಂಭೀರ್ 310 ರನ್ ಗಳ ಬೃಹತ್ ಗುರಿಯನ್ನು ಬೆನ್ನತ್ತುವ ವೇಳೆ 68 ರನ್ ಗಳಿಸಿದ್ದರು. ಇದು ಅಂದು ಟೀಂ ಇಂಡಿಯಾ ಪರ ದಾಖಲಾಗಿದ್ದ ಆಟಗಾರನ ವೈಯುಕ್ತಿಕ ಗರಿಷ್ಛ ಸ್ಕೋರ್ ಆಗಿತ್ತು. 

ನಾಟ್ ವೆಸ್ಟ್ ಫೈನಲ್ ನಲ್ಲೂ ಇಂತಹುದೇ ದಾಖಲೆ ಬರೆದಿದ್ದ ಭಾರತ
ಇಷ್ಟೇ ಅಲ್ಲ 2002ರ ಇಂಗ್ಲೆಂಡ್ ವಿರುದ್ಧದ ನಾಟ್ ವೆಸ್ಟ್ ಸರಣಿಯ ಫೈನಲ್ ನಲ್ಲೂ ಟೀಂ ಇಂಡಿಯಾ ಇಂತಹುದೇ ದಾಖಲೆ ನಿರ್ಮಿಸಿದೆ. ಅಂದು ಇಂಗ್ಲೆಂಡ್ ನೀಡಿದ್ದ 326 ರನ್ ಗಳ ಗುರಿಯನ್ನು ಬೆನ್ನು ಹತ್ತಿದ್ದ ಭಾರತ ತಂಡ 49.3 ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 326 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು.

ಅಂದು ಆರಂಭಿಕರಾದ ವೀರೇಂದ್ರ ಸೆಹ್ವಾಗ್ 45 ರನ್, ನಾಯಕ ಸೌರವ್ ಗಂಗೂಲಿ 60 ರನ್ ಕಲೆಹಾಕಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಬಂದು ಪಂದ್ಯದ ಗತಿಯನ್ನೇ ಬದಲಿಸಿದ್ದ ಯುವರಾಜ್ ಸಿಂಗ್ (69ರನ್) ಮತ್ತು ಮಹಮದ್ ಕೈಫ್ (ಅಜೇಯ 87) ರನ್ ಕಲೆಹಾಕಿ ಭಾರತಕ್ಕೆ ಐತಿಹಾಸಿಕ ಜಯ ತಂದು ಕೊಟ್ಟಿದ್ದರು.

Lowest highest individual scores in successful 300+ chases in ODIs
64*Axar Patel 312/8 vs WI Port of Spain 2022
65 Shoaib Malik 319/7 vs Ind Ahmedabad 2005
68 Gautam Gambhir 310/4 vs SL Karachi 2008

 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT