ಕ್ರಿಕೆಟ್

ಮಾಜಿ ಕ್ರಿಕೆಟಿಗರು, ಅಂಪೈರ್‌ಗಳಿಗೆ ಪಿಂಚಣಿ ಹೆಚ್ಚಳ: ಬಿಸಿಸಿಐ

Srinivasamurthy VN

ನವದೆಹಲಿ: ಐಪಿಎಲ್ ಪ್ರಸಾರ ಹಕ್ಕುಗಳ ಮಾರಾಟದಲ್ಲಿ ಭರ್ಜರಿ ಹಣ ಗಳಿಸಿದ ಕೆಲವೇ ಗಂಟೆಗಳಲ್ಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ಮಾಜಿ ಕ್ರಿಕೆಟಿಗರು ಮತ್ತು ಅಂಪೈರ್‌ಗಳಿಗೆ ಸಿಹಿಸುದ್ದಿ ನೀಡಿದೆ.

ಬಿಸಿಸಿಐ ಮಾಜಿ ಆಟಗಾರರ ತಿಂಗಳ ಪಿಂಚಣಿಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಪ್ರಥಮ ದರ್ಜೆ ಪಂದ್ಯವನ್ನಾಡಿದ ಮಾಜಿ ಆಟಗಾರರಿಗೆ ನೀಡುತ್ತಿದ್ದ ಪಿಂಚಣಿಯನ್ನು 15ರೂ ಸಾವಿರದಿಂದ 30 ಸಾವಿರ ರೂಗೆ ಏರಿಕೆ ಮಾಡಿದೆ. ಅಂತೆಯೇ ಪ್ರತಿ ತಿಂಗಳು 37,500 ಪಿಂಚಣಿ ಪಡೆಯುತ್ತಿದ್ದ ಟೆಸ್ಟ್‌ ತಂಡದ ಮಾಜಿ ಆಟಗಾರರು ಇನ್ನು 60 ಸಾವಿರ ರೂ ಹಾಗೂ 50 ಸಾವಿರ ರೂ ಪಡೆಯುತ್ತಿದ್ದವರು 70 ರೂ ಸಾವಿರ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ರಾಷ್ಟ್ರೀಯ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ್ತಿಯರು  30 ಸಾವಿರ ರೂಗಳ ಬದಲು  52,500 ರೂ ಪಡೆಯಲಿದ್ದಾರೆ.  2003ಕ್ಕೂ ಮುನ್ನ ನಿವೃತ್ತಿಯಾಗಿದ್ದ ಪ್ರಥಮ ದರ್ಜೆ ಕ್ರಿಕೆಟ್‌ ಆಟಗಾರರು 22,500 ರ ಬದಲು  45 ರೂಸಾವಿರ ಗಳಿಸಲಿದ್ದಾರೆ ಎಂದು ತಿಳಿದುಬಂದಿದೆ.

’ಮಾಜಿ ಆಟಗಾರರು ಮತ್ತು ಅಂಪೈರ್‌ಗಳ ಪಿಂಚಣಿ ಹೆಚ್ಚಿಸಿರುವುದನ್ನು ಘೋಷಿಸಲು ಸಂತಸವಾಗುತ್ತಿದೆ. ಸುಮಾರು 900 ಆಟಗಾರರು ಇದರ ಲಾಭ ಪಡೆಯಲಿದ್ದಾರೆ. ಇದರಲ್ಲಿ ಶೇ.75 ರಷ್ಟು ಮಂದಿಯ ಪಿಂಚಣಿಯನ್ನು ಶೇ 100 ರಷ್ಟು ಹೆಚ್ಚಿಸಲಾಗಿದೆ‘ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದಾರೆ.

SCROLL FOR NEXT