ಕ್ರಿಕೆಟ್

ಮುಜುಗರ! ಪಾಕ್ ಡ್ರೆಸ್ಸಿಂಗ್ ರೂಮ್ ಪೋಸ್ಟ್ ಗೆ ವಾಸಿಂ ಅಕ್ರಮ್ ಕಿಡಿ

Nagaraja AB

ಇಸ್ಲಾಮಾಬಾದ್: ಸೋಶಿಯಲ್ ಮೀಡಿಯಾದಲ್ಲಿ ಪಾಕ್ ಡ್ರೆಸ್ಸಿಂಗ್ ರೂಮ್ ವಿಡಿಯೋ ಹಂಚಿಕೊಂಡಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ  ಮಾಜಿ ಆಟಗಾರರಾದ ವಾಸಿಂ ಅಕ್ರಮ್ ಮತ್ತು ವಕಾರ್ ಯೂನಿಷ್ ಕಿಡಿಕಾರಿದ್ದಾರೆ.

ಇತರ ಕ್ರಿಕೆಟ್ ತಂಡಗಳಿಗೆ ಹೋಲಿಸಿದರೆ ಪಾಕ್ ಕ್ರಿಕೆಟ್ ಮಂಡಳಿಯ ಸಾಮಾಜಿಕ ಮಾಧ್ಯಮವು ವೀಡಿಯೊಗಳು, ಸಂದರ್ಶನಗಳು ಮತ್ತು ಡ್ರೆಸ್ಸಿಂಗ್ ರೂಮ್‌ನೊಳಗಿನ ಹಾಸ್ಯ ಮಾತುಗಳು ಸೇರಿದಂತೆ ಇತರ ಘಟನೆಗಳನ್ನು ಹಂಚಿಕೊಳ್ಳುವಲ್ಲಿ ಅತ್ಯಂತ ಸಕ್ರಿಯವಾಗಿದೆ.

ಟಿ-20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲಿನ ನಂತರ ಬಾಬರ್ ಅಜಮ್ ಅವರ ಭಾಷಣದ ವೀಡಿಯೊವನ್ನು ಪಿಸಿಬಿ ಪೋಸ್ಟ್ ಮಾಡಿದೆ ಮತ್ತು  ಪಾಕ್ ತಂಡ ಸೆಮಿಫೈನಲ್ ಗೆ ಅರ್ಹತೆ ಪಡೆದ ನಂತರ ಬಾಬರ್ ಮತ್ತು ಮಾರ್ಗದರ್ಶಕ ಮ್ಯಾಥ್ಯೂ ಹೇಡನ್ ಆಟಗಾರರಿಗೆ ಹೇಳುತ್ತಿರುವ ಹಾಸ್ಯ ಮಾತುಗಳನ್ನು ಪೋಸ್ಟ್ ಮಾಡಿತ್ತು.

ಇದಕ್ಕೆ ಕಿಡಿಕಾರಿರುವ ಅಕ್ರಮ್ ಮತ್ತು ಯೂನಿಸ್, ಡ್ರೆಸ್ಸಿಂಗ್ ರೂಮ್ ನಲ್ಲಿ ಏನೇ ನಡೆದರೂ ಅದನ್ನು ಗೌಪ್ಯವಾಗಿಡಬೇಕು ಮತ್ತು ಜಗತ್ತಿಗೆ ಹೈಲೈಟ್ ಮಾಡಬಾರದು ಎಂದು ಹೇಳಿದ್ದಾರೆ. ಡ್ರೆಸ್ಸಿಂಗ್ ರೂಮ್ ನಲ್ಲಿ  ಕೆಲವೊಮ್ಮೆ ವೈಯಕ್ತಿಕ ವಿಷಯಗಳನ್ನು ಹೇಳಲಾಗುತ್ತದೆ ಮತ್ತು ವಿಡಿಯೋ ಮಾಡಲಾಗುತ್ತದೆ. ಅವುಗಳುಸೋರಿಕೆಯಾದಲ್ಲಿ ಮುಜುಗರವಾಗಬಹುದು ಎಂದು ಅಕ್ರಮ್ ಎ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಹೇಳಿದ್ದಾರೆ.

SCROLL FOR NEXT