ಕ್ರಿಕೆಟ್

ಹುಟ್ಟುಹಬ್ಬದ ಪಾರ್ಟಿಯಲ್ಲಿ ಸ್ವಲ್ಪದರಲ್ಲೇ ಪಾರಾದ ಮ್ಯಾಕ್ಸ್‌ವೆಲ್: ಕಾಲಿಗೆ ಶಸ್ತ್ರಚಿಕಿತ್ಸೆ!

Vishwanath S

ಮೆಲ್ಬೋರ್ನ್: ಆರ್ ಸಿಬಿ ತಂಡ ಆಲೌರಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸ್ನೇಹಿತನ 50ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಅಪಘಾತಕ್ಕೆ ಒಳಗಾಗಿದ್ದು ಸ್ವಲ್ಪದಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಅಪಘಾತದಲ್ಲಿ ಮ್ಯಾಕ್ಸ್‌ವೆಲ್ ಕಾಲು ಮುರಿದಿದ್ದು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಅವರು ಮೂರು ತಿಂಗಳ ಕಾಲ ಮೈದಾನದಿಂದ ದೂರ ಉಳಿಯಲಿದ್ದಾರೆ. ಈ ವಾರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಮ್ಯಾಕ್ಸ್‌ವೆಲ್ ಹೊರಗುಳಿದಿದ್ದು, ಮುಂದಿನ ವರ್ಷ ಭಾರತ ಪ್ರವಾಸಕ್ಕೂ ಸೇರಿಸಿಕೊಳ್ಳುವ ಬಗ್ಗೆ ಅನುಮಾನವಿದೆ.

Cricket.com.au ಪ್ರಕಾರ, ಗ್ಲೆನ್ ಮ್ಯಾಕ್ಸ್‌ವೆಲ್ ತನ್ನ ಸ್ನೇಹಿತನೊಂದಿಗೆ ಟೆನ್ನಿಸ್ ಕೋರ್ಟ್ ನಲ್ಲಿ ರನ್ನಿಂಗ್ ಮಾಡುವ ವೇಳೆ ಇಬ್ಬರೂ ನೆಲಕ್ಕೆ ಬಿದ್ದಿದ್ದಾರೆ. ಇದರಲ್ಲಿ ಮ್ಯಾಕ್ಸ್‌ವೆಲ್‌ ಅವರ ಎಡಗಾಲಿನ ಮೇಲೆ ಅವರ ಸ್ನೇಹಿತ ಕಾಲಿಟ್ಟಿದ್ದರಿಂದ ಮ್ಯಾಕ್ಸ್ ವೆಲ್ ಎಡಗಾಲು ಮುರಿದಿದ್ದು, ಈ ಗಾಯ ತುಂಬಾ ಗಂಭೀರವಾಗಿದ್ದರಿಂದ ಇಂದು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಮುಂದಿನ 12 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಿದೆ.

ಮುಂದಿನ ವರ್ಷ ಫೆಬ್ರುವರಿ-ಮಾರ್ಚ್‌ನಲ್ಲಿ ಭಾರತ ಪ್ರವಾಸದ ವೇಳೆ ಆಸ್ಟ್ರೇಲಿಯಾ ನಾಲ್ಕು ಟೆಸ್ಟ್‌ಗಳು ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಭಾರತ ಪ್ರವಾಸ ಅನುಮಾನಾಸ್ಪದ ಎಂದು ಪರಿಗಣಿಸಲಾಗಿದೆ. 

ಆಸ್ಟ್ರೇಲಿಯಾ ಪರ ಮ್ಯಾಕ್ಸ್‌ವೆಲ್ ಇತ್ತೀಚೆಗೆ T20 ವಿಶ್ವಕಪ್‌ನಲ್ಲಿ 32 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿದ್ದು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಆದರೂ 20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಪ್ರಯಾಣವು ಗುಂಪು ಹಂತದಲ್ಲೇ ಕೊನೆಗೊಂಡಿತು.

SCROLL FOR NEXT