ರೋಹಿತ್ ಶರ್ಮಾ-ಎಂಎಸ್ ಧೋನಿ 
ಕ್ರಿಕೆಟ್

ಬಹು ದೊಡ್ಡ ನಿರ್ಧಾರಕ್ಕೆ ಮುಂದಾದ ಬಿಸಿಸಿಐ: ಭಾರತ ತಂಡ ಸೇರುತ್ತಾರಾ ಮಹೇಂದ್ರ ಸಿಂಗ್ ಧೋನಿ?

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲಿನ ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನ ಉಂಟಾಗಿದೆ.

ನವದೆಹಲಿ: ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲಿನ ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನ ಉಂಟಾಗಿದೆ. 

ಈ ಸೋಲಿನಿಂದಾಗಿ ಬಿಸಿಸಿಐ ಎರಡು ವಿಭಿನ್ನ ನಾಯಕರನ್ನು ಮತ್ತು ವೈಟ್ ಬಾಲ್ ಸ್ವರೂಪಗಳಲ್ಲಿ ವಿಭಿನ್ನ ಸಿಬ್ಬಂದಿಯನ್ನು ನೇಮಿಸಲು ಹೊರಟಿದೆ ಎಂದು ವರದಿಯಾಗುತ್ತಿವೆ. ಈ ಅನುಕ್ರಮದಲ್ಲಿ ಬಿಸಿಸಿಐ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಟಿ20 ಮಾದರಿಯಲ್ಲಿ ದೊಡ್ಡ ಜವಾಬ್ದಾರಿಯನ್ನು ವಹಿಸಲಿದೆ ಎಂಬ ವರದಿಯಾಗುತ್ತಿವೆ.

ಟಿ20 ತಂಡದ ಮುಖ್ಯ ಕೋಚ್ ಎಂಎಸ್ ಧೋನಿ?
ದಿ ಟೆಲಿಗ್ರಾಫ್‌ನ ವರದಿಯ ಪ್ರಕಾರ, ಕಳೆದ ಹಲವಾರು ವರ್ಷಗಳಿಂದ ಬಹಳಷ್ಟು ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕೆಲಸದ ಹೊರೆ ತಗ್ಗಿಸಲು BCCI ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ T20 ಸ್ವರೂಪದ ಮುಖ್ಯ ಕೋಚ್ ಅಥವಾ ನಿರ್ದೇಶಕ ಹುದ್ದೆಯನ್ನು ಹಸ್ತಾಂತರಿಸಲು ಪರಿಗಣಿಸುತ್ತಿದೆ. ಕಳೆದ ವರ್ಷವೂ ಟಿ20 ವಿಶ್ವಕಪ್ ವೇಳೆ ಭಾರತ ತಂಡದೊಂದಿಗೆ ಮೆಂಟರ್ ಆಗಿ ಒಡನಾಟ ಹೊಂದಿದ್ದ ಧೋನಿ ಈ ಬಾರಿ ಕೇವಲ ಒಂದು ಪಂದ್ಯಾವಳಿಗೆ ಮಾತ್ರವಲ್ಲದೆ ಸುದೀರ್ಘ ಅವಧಿಗೆ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಈ ವರ್ಷ ಭಾರತದಲ್ಲಿ ನಡೆಯಲಿರುವ ಐಪಿಎಲ್ ಸೀಸನ್ 16ರ ನಂತರ ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನಿಂದ ನಿವೃತ್ತಿ ಘೋಷಿಸಲಿದ್ದಾರೆ. ಆ ನಂತರ ಧೋನಿ ಜೊತೆ ಬಿಸಿಸಿಐ ಮಾತುಕತೆ ನಡೆಸಿದ ನಂತರ ಈ ದೊಡ್ಡ ನಿರ್ಧಾರವನ್ನು ಘೋಷಿಸಲಿದೆ. ಹೀಗಾಗಿ ಮೂರು ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡವನ್ನು ವಿಜೇತರನ್ನಾಗಿಸಿರುವ ನಾಯಕ ಧೋನಿ ಭಾರತ ತಂಡಕ್ಕೆ ಮಾರ್ಗದರ್ಶನ ನೀಡಬಲ್ಲರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT