ಕ್ರಿಕೆಟ್

ಭಾರತ vs ದ.ಆಫ್ರಿಕಾ: ಟಿ20ಯಲ್ಲಿ 11 ಸಾವಿರ ರನ್ ಗಳಿಸಿದ ಮೊದಲ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ!

Srinivasamurthy VN

ಗುವಾಹತಿ: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕೇವಲ 1ರನ್ ಅಂತರದಲ್ಲಿ ಅರ್ಧ ಶತಕ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ.

ಹೌದು.. ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಅರ್ಧಶತಕ ವಂಚಿತರಾದರೂ 49 ರನ್ ಸಿಡಿಸಿದ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ T20 ಕ್ರಿಕೆಟ್‌ನಲ್ಲಿ 11 ಸಾವಿರ ರನ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಆಟಗಾರನೆಂಬ ಸಾಧನೆ ಮಾಡಿದ್ದಾರೆ.

ಈ ವರೆಗೆ 102 ಟೆಸ್ಟ್, 262 ಏಕದಿನ ಮತ್ತು 109 T20 ಪಂದ್ಯಗಳಲ್ಲಿ ವಿರಾಟ್ 71 ಶತಕಗಳನ್ನ ಬಾರಿಸಿದ್ದಾರೆ. ಅದರಲ್ಲಿ 354 T20 ಪಂದ್ಯಗಳನ್ನಾಡಿದ್ದು, ಅತಿ ವೇಗವಾಗಿ 11 ಸಾವಿರ ರನ್‌ಗಳನ್ನು ಸಿಡಿಸಿದ್ದಾರೆ. ಭಾನುವಾರ ವೇಯ್ನ್ ಪಾರ್ನೆಲ್ ಬೌಲಿಂಗ್‌ನಲ್ಲಿ ಭರ್ಜರಿ ಸಿಕ್ಸರ್‌ ಗಳಿಸುವ ಮೂಲಕ ಕೊಹ್ಲಿ ಟಿ20ಯಲ್ಲಿ ತಮ್ಮ ರನ್ ಗಳಿಕೆಯನ್ನು 11 ಸಾವಿರಕ್ಕೇರಿಸಿಕೊಂಡರು. ಅಲ್ಲದೆ 11ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅಂತೆಯೇ ಜಾಗತಿಕವಾಗಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಕೀರ್ತಿಗೂ ಕೊಹ್ಲಿ ಭಾಜನವಾಗಿದ್ದು, ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ನ ಕೀರಾನ್ ಪೊಲಾರ್ಡ್, ಕ್ರಿಸ್ ಗೇಲ್ ಮತ್ತು ಪಾಕಿಸ್ತಾನದ ಶೋಯೆಬ್ ಮಲಿಕ್ ಈ  ಮೈಲಿಗಲ್ಲು ಸಾಧಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ 49 ರನ್ (1 ಸಿಕ್ಸರ್, 7 ಬೌಂಡರಿ) ಚಚ್ಚಿದರು. ಕೊನೆಯಲ್ಲಿ ಅರ್ಧ ಶತಕ ಗಳಿಸುವ ಅವಕಾಶವಿದ್ದರೂ ದಿನೇಶ್ ಕಾರ್ತಿಕ್ ಕ್ರೀಸ್ ಬಿಟ್ಟುಕೊಟ್ಟರು.
 

SCROLL FOR NEXT