ಟೀಂ ಇಂಡಿಯಾ ಮಹಿಳಾ ತಂಡ 
ಕ್ರಿಕೆಟ್

ಏಷ್ಯಾ ಕಪ್ 2022: ಲಂಕಾ ವಿರುದ್ಧ ಭರ್ಜರಿ ಜಯ; 7ನೇ ಬಾರಿ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ಚಾಂಪಿಯನ್ ಪಟ್ಟ!

ಏಷ್ಯಾ ಕಪ್ 2022ರ ಫೈನಲ್ ಪಂದ್ಯದಲ್ಲಿ ಲಂಕಾ ವಿರುದ್ಧ ಭರ್ಬರಿ ಜಯ ಗಳಿಸುವ ಮೂಲಕ ಟೀಂ ಇಂಡಿಯಾ ಮಹಿಳಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. 

ಬಾಂಗ್ಲಾ: ಏಷ್ಯಾ ಕಪ್ 2022ರ ಫೈನಲ್ ಪಂದ್ಯದಲ್ಲಿ ಲಂಕಾ ವಿರುದ್ಧ ಭರ್ಬರಿ ಜಯ ಗಳಿಸುವ ಮೂಲಕ ಟೀಂ ಇಂಡಿಯಾ ಮಹಿಳಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಟೀಂ ಇಂಡಿಯಾ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದರು. ಲಂಕಾ ಪರ ಓಷದಿ ರಣಸಿಂಗ್(13) ಇನೋಕಾ ರಣವೀರ ಅಜೇಯ 18 ರನ್ ಬಿಟ್ಟರೆ ಮತ್ಯಾವ ಆಟಗಾರ್ತಿಯೂ ಎರಡಂಕಿ ದಾಟಲಿಲ್ಲ. 

ಟೀಂ ಇಂಡಿಯಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ರೇಣುಕಾ ಸಿಂಗ್ 3, ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹ್ ರಾಣಾ ತಲಾ 2 ವಿಕೆಟ್ ಪಡೆದು ಲಂಕಾ ತಂಡವನ್ನು 65 ರನ್ ಗಳ ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು. 

ಲಂಕಾ ನೀಡಿದ 66 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 71 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು. ಟೀಂ ಇಂಡಿಯಾ ಪರ ಸ್ಮೃತಿ ಮಂದಾನಾ ಅಜೇಯ 51 ಹಾಗೂ ಹರ್ಮನ್ ಪ್ರೀತ್ ಕೌರ್ ಅಜೇಯ 11 ರನ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಇನ್ನುಳಿದಂತೆ ಶಫಾಲಿ ವರ್ಮಾ 5 ರನ್ ಹಾಗೂ ಜೆಮಿಮಾ ರಾಡ್ರಿಗಸ್ 2 ರನ್ ಬಾರಿಸಿದ್ದಾರೆ.

ಇಲ್ಲಿಯವರೆಗೂ ಏಷ್ಯಾಕಪ್ 8 ಆವೃತ್ತಿಗಳು ನಡೆದಿದ್ದು ಇದರಲ್ಲಿ ಭಾರತ ಬರೋಬ್ಬರಿ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನುಳಿದಂತೆ 2018ರ ಟೂರ್ನಿಯಲ್ಲಿ ಬಾಂಗ್ಲಾದೇಶ ಚಾಂಪಿಯನ್ ಆಗಿದ್ದು ಭಾರತ ರನ್ ಅಪ್ ಆಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧ ನಮ್ಮದಲ್ಲ: ಶಶಿತರೂರ್ ಬಳಿಕ ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ

ಸಮುದ್ರದಲ್ಲೇ ಬಿಗ್ ಡೀಲ್‌: ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ನೌಕೆ ಭಾರತಕ್ಕೆ ಯು-ಟರ್ನ್!

Iran-Israel war- ಇರಾನ್‌ನ ತೈಲ ಘಟಕ ಮೇಲೆ ಇಸ್ರೇಲ್ ದಾಳಿ, ಪ್ರತೀಕಾರವಾಗಿ ಗಲ್ಫ್ ರಾಷ್ಟ್ರಗಳ ಇಂಧನ ಸೌಲಭ್ಯಗಳ ಮೇಲೆ ಟೆಹ್ರಾನ್ ಪ್ರತೀಕಾರ

ATM ತಾಂತ್ರಿಕ ದೋಷ: ಹಣ ವಿತ್ ಡ್ರಾ ಮಾಡಲು ಹೋದ ಗ್ರಾಹಕನಿಗೆ ಶಾಕ್.. 9 ವರ್ಷಗಳ ನಿರಂತರ ಕದನ..10 ಸಾವಿರಕ್ಕೆ ಸಿಕ್ಕಿದ್ದು 3 ಲಕ್ಷ ರೂ!

ಇರಾನ್ ಬಗ್ಗೆ ಜಗತ್ತಿಗೆ ಸುಳ್ಳು ಹೇಳಿತಾ ಅಮೆರಿಕ?: ಖಮೇನಿ ಇರಾನ್ ಅಣ್ವಸ್ತ್ರ ಅಭಿವೃದ್ಧಿ ತಡೆಯುತ್ತಿದ್ದರು: US ಮಾಜಿ ಅಧಿಕಾರಿ ಜೋ ಕೆಂಟ್ ಸ್ಫೋಟಕ ಹೇಳಿಕೆ!

SCROLL FOR NEXT