ದೇವದತ್ ಪಡಿಕ್ಕಲ್ 
ಕ್ರಿಕೆಟ್

ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಭಾರೀ ಗೆಲುವಿನೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಕರ್ನಾಟಕ

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಅರುಣಾಚಲ ಪ್ರದೇಶ ವಿರುದ್ಧ 10 ವಿಕೆಟ್‌ಗಳ ಗೆಲುವು ಸಾಧಿಸಿ, ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. 

ಚೆನ್ನೈ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಅರುಣಾಚಲ ಪ್ರದೇಶ ವಿರುದ್ಧ 10 ವಿಕೆಟ್‌ಗಳ ಗೆಲುವು ಸಾಧಿಸಿ, ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಮೊದಲು ಬ್ಯಾಟಿಂಗ್ ಮಾಡಿದ ಅರುಣಾಚಲ ಪ್ರದೇಶ 75 ರನ್ ಗಳಿಗೆ ಆಲೌಟ್ ಆಯಿತು. ನಂತರ ಈ ಗುರಿ ಬೆನ್ನಟ್ಟಿದ್ದ ಕರ್ನಾಟಕ ಕೇವಲ 6.5 ಓವರ್ ಗಳಲ್ಲಿ  ಮಯಾಂಕ್ ಅಗರ್ವಾಲ್ 47, ದೇವದತ್ ಪಡಿಕ್ಕಲ್ 28 ರನ್ ಗಳೊಂದಿಗೆ ವಿಜಯದ ನಗೆ ಬೀರಿತು.

ಉಳಿದಂತೆ ತಮಿಳುನಾಡು ಮತ್ತು ಆಂಧ್ರ ಪ್ರದೇಶ ನಾಕೌಟ್ ಹಂತ ತಲುಪುವ ಭರವಸೆ ಹೊಂದಿವೆ. ಆದರೆ, ಮಹಾರಾಷ್ಟ್ರ ವಿರುದ್ಧ ಸೋತ ನಂತರ ಕೇರಳ ಭರವಸೆಯನ್ನು ಕಳೆದುಕೊಂಡಿತು. ಆಂಧ್ರ ಪ್ರದೇಶ ಎರಡು ವಿಕೆಟ್ ಗಳೊಂದಿಗೆ ಬಿಹಾರವನ್ನು ಸೋಲಿಸಿತು. ಕರಣ್ ಶಿಂಧೆ 38 ಎಸೆತಗಳಲ್ಲಿ 75 ರನ್ ಗಳಿಸುವ ಮೂಲಕ ಗೆಲುವಿನ ಹಾದಿ ಸುಗಮಗೊಳಿಸಿದರು.

ತಮಿಳುನಾಡು ಪರ ವಾಷಿಂಗ್ಟನ್ ಸುಂದರ್ , ವರುಣ್ ಚಕ್ರವರ್ತಿ ತಲಾ ಒಂದು, ಆರ್  ಸಾಯಿ ಕಿಶೋರ್ 3 ಮತ್ತು ಮುರುಗನ್ ಅಶ್ವಿನ್ 2 ವಿಕೆಟ್ ಕಬಳಿಸುವ ಮೂಲಕ ಜಾರ್ಖಂಡ್ ತಂಡವನ್ನು ಸೋಲಿಸಿದರು. ಭಾರತ ತಂಡದ ಕೀಪರ್ ಸಂಜು ಸ್ಯಾಮ್ಸನ್ ನಿರೀಕ್ಷೆಗೆ ತಕ್ಕಂತೆ ಆಡಲು ವಿಫಲವಾದ ಕಾರಣ ಕೇರಳ ಮಹಾರಾಷ್ಟ್ರ ವಿರುದ್ಧ 168 ರನ್ ಗಳ ಚೇಸಿಂಗ್‌ನಲ್ಲಿ ಸೋತಿತು.ಮಹಾರಾಷ್ಟ್ರ ಪರ ಭಾರತದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ಸ್ 114 ರನ್ ಗಳಿಸಿ ಮಿಂಚಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT