ಕ್ರಿಕೆಟ್

ಐಸಿಸಿ ಟೆಸ್ಟ್‌ ಚಾಂ‍ಪಿಯನ್‌ಶಿಪ್‌ ಫೈನಲ್‌, ಭಾರತದ ವಿರುದ್ಧದ ಫೈನಲ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ

Srinivasamurthy VN

ಮೆಲ್ಬೋರ್ನ್: ಐಸಿಸಿ ಟೆಸ್ಟ್‌ ಚಾಂ‍ಪಿಯನ್‌ಶಿಪ್‌ ಫೈನಲ್‌ ಟೂರ್ನಿಯ ಭಾರತದ ವಿರುದ್ಧದ ಫೈನಲ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟವಾಗಿದೆ.

ಮುಂಬರುವ ಜೂನ್‌ 7ರಂದು ಇಂಗ್ಲೆಂಡಿನ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್‌ ಚಾಂ‍ಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ಆಸ್ಟ್ರೇಲಿಯಾದ ತಂಡವನ್ನು ಪ್ರಕಟಿಸಲಾಗಿದ್ದು, ಡೇವಿಡ್‌ ವಾರ್ನರ್‌ ಸೇರಿದಂತೆ 17 ಜನರ ತಂಡವನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಪ್ರಕಟಿಸಿದೆ. ಮೇ 28ರಂದು 15 ಜನರ ತಂಡವನ್ನು ಅಂತಿಮವಾಗಿ ಪ್ರಕಟಿಸಲಾಗುವುದು ಎಂದು ಆಯ್ಕೆ ಸಮಿತಿ ತಿಳಿಸಿದೆ.

ಕಳೆದ ಫೆಬ್ರುವರಿ ತಿಂಗಳು ನಡೆದ ಆ್ಯಶಸ್‌ ಟೆಸ್ಟ್‌ ಸರಣಿಯ ತಂಡವನ್ನೇ ಬಹುತೇಕ ಉಳಿಸಿಕೊಳ್ಳಲಾಗಿದೆ. ಈ ಫೈನಲ್‌ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಜೂನ್‌ 7 ರಿಂದ 11ರ ವರೆಗೆ ನಡೆಯಲಿದೆ. ಭಾರತ ತಂಡ ಸತತ ಎರಡನೇ ಬಾರಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ. 

2021ರಲ್ಲಿ ನಡೆದ ಚೊಚ್ಚಲ ವಿಶ್ವ ಟೆಸ್ಟ್‌ ಚಾಂ‍ಪಿಯನ್‌ಶಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋಲನುಭವಿಸಿದ್ದ ಭಾರತ ರನ್ನರ್-ಅಪ್ ಪ್ರಶಸ್ತಿಗೆ ಭಾಜನವಾಗಿತ್ತು.

ತಂಡ ಇಂತಿದೆ:
ಪ್ಯಾಟ್ ಕಮನ್ಸ್ (ನಾಯಕ), ನಥನ್ ಲಯನ್, ಟಾಡ್ ಮುರ್ಫಿ, ಸ್ಕಾಟ್ ಬೋಲಾಂಡ್, ಉಸ್ಮಾನ್ ಖ್ವಾಜಾ, ಕ್ಯಾಮರೂನ್ ಗ್ರೀನ್, ಟ್ರಾವಿಸ್‌ ಹೆಡ್‌, ಮಾರ್ನಸ್‌ ಲಾಬುಷೇನ್‌, ಸ್ಟೀವ್‌ ಸ್ಮಿತ್‌ (ಉಪ ನಾಯಕ), ಡೇವಿಡ್ ವಾರ್ನರ್, ಅಲೆಕ್ಸ್ ಕೇರಿ (ವಿಕೆಟ್ ಕೀಪರ್), ಮರ್ಕಸ್ ಹ್ಯಾರಿಸ್, ಹ್ಯಾಜಲ್‌ವುಡ್‌, ಜೋಶ್‌ ಇಂಕ್ಲಿಶ್‌, ಮಿಷೆಲ್‌ ಮಾರ್ಶ್‌, ಮಿಷೆಲ್‌ ಸ್ಟಾರ್ಕ್‌ ಹಾಗೂ ಮ್ಯಾಥಿವ್‌

SCROLL FOR NEXT