ಕ್ರಿಕೆಟ್

CPL 2023: ರಿಸ್ಕಿ ರನ್ ಗಾಗಿ ವಿಕೆಟ್ ಒಪ್ಪಿಸಿದ ವಿಶ್ವದ ದೈತ್ಯ ಆಟಗಾರ; ಮುಳುವಾಗಿದ್ದು ದೇಹದ ತೂಕ!

Srinivasamurthy VN

ಬಾರ್ಬೊಡಾಸ್: ಕೆರಿಬಿಯನ್ ಪ್ರೀಮಿಯರ್ ಲೀಗ್ ಸಿಪಿಎಲ್ 2023ಯಲ್ಲಿ ವಿಶ್ವದ ದೈತ್ಯ ಮತ್ತು 'ತೂಕದ ಆಟಗಾರ' ಆಟಗಾರ ಎಂದೇ ಖ್ಯಾತಿ ಗಳಿಸಿರುವ ರಕ್ಹೀಮ್ ಕಾರ್ನ್ವಾಲ್ ರಿಸ್ಕಿ ರನ್ ಗಾಗಿ ಓಡಿ ಶೂನ್ಯಕ್ಕೆ ಔಟಾಗಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ವೃತ್ತಿಪರ ಕ್ರಿಕೆಟ್‌ನಲ್ಲಿ 'ಭಾರಿ' ಆಟಗಾರ ಎಂದು ಖ್ಯಾತಿ ಪಡೆದಿರುವ ರಕ್ಹೀಮ್ ಕಾರ್ನ್‌ವಾಲ್ ಅವರು ಮೈದಾನಕ್ಕೆ ಬಂದಾಗಲೆಲ್ಲಾ ತಮ್ಮ ತೂಕದಿಂದಲೇ ಅಭಿಮಾನಿಗಳ ಗಮನವನ್ನು ಸೆಳೆಯುವ ವ್ಯಕ್ತಿ. ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2023 ರಲ್ಲಿ ಬಾರ್ಬಡೋಸ್ ರಾಯಲ್ಸ್ ಪರ ಆಡುತ್ತಿರುವ ವೆಸ್ಟ್ ಇಂಡೀಸ್ ಆಲ್-ರೌಂಡರ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಅಪಾಯಕಾರಿ ಸಿಂಗಲ್ ರನ್ ತೆಗೆದುಕೊಳ್ಳಲು ಹೋಗಿ ರನೌಟ್ ಆಗುವ ಮೂಲಕ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ.

200 ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕಾರ್ನ್‌ವಾಲ್ ತಮ್ಮ ತಂಡವು ತ್ವರಿತ ರನ್ ಗಳಿಸುವ ಅಗತ್ಯವಿದೆ ಎಂದು ತಿಳಿದಿದ್ದರು, ಆದರೆ ಈ ದೈತ್ಯ ಆಟಗಾರನಿಗೆ ಮುಳುವಾಗಿದ್ದು ಮಾತ್ರ ಆತನ ದೇಹದ ತೂಕ. ರಿಸ್ಕಿ ರನ್ ತೆಗೆದುಕೊಳ್ಳುವ ವೇಳೆ ಆಟಗಾರರು ವಿಕೆಟ್ ಗಳ ನಡುವೆ ಹೆಚ್ಚು ವೇಗವಾಗಿ ಓಡುವ ಅವಶ್ಯತೆ ಇರುತ್ತದೆ. ಆದರೆ ಕಾರ್ನ್ ವಾಲ್ ತಮ್ಮ ಭಾರಿ ದೇಹದ ತೂಕದಿಂದಾಗಿ ವೇಗವಾಗಿ ಓಡಲು ಸಾಧ್ಯವಾಗದೇ ರನೌಟ್ ಆಗುವ ಮೂಲಕ ಶೂನ್ಯಸುತ್ತಿದ್ದು ಮಾತ್ರವಲ್ಲದೇ ತಮ್ಮ ತೂಕದ ವಿಚಾರವಾಗಿ ಮತ್ತೆ ಸುದ್ದಿಯಾಗುತ್ತಿದ್ದಾರೆ.

ಇನ್ನು ತಮ್ಮ ದೇಹದ ತೂಕದ ವಿಚಾರ ಎಷ್ಟೇ ಬಾರಿ ಚರ್ಚೆಯಾದರೂ ಅದಕ್ಕೆ ತಲೆಕೆಡಿಸಿಕೊಳ್ಳದ ರಕ್ಹೀಮ್, "ನನ್ನ ದೇಹದ ರಚನೆಯನ್ನು ನಾನು ಬದಲಾಯಿಸಲು ಸಾಧ್ಯವಿಲ್ಲ, ನಾನು ತುಂಬಾ ಎತ್ತರ ಅಥವಾ ತುಂಬಾ ದೊಡ್ಡವನು ಎಂದು ನಾನು ಹೇಳಲಾರೆ, ಎಲ್ಲೂ ಕುಗ್ಗುವುದಿಲ್ಲ, ಎಲ್ಲರೂ ಸ್ಲಿಮ್ ಆಗಿರುವುದಿಲ್ಲ, ನಾನು ಮಾಡಬಲ್ಲದು ಅಲ್ಲಿಗೆ ಹೋಗಿ ನನ್ನ ಕೌಶಲ್ಯವನ್ನು ತೋರಿಸಿ ನನ್ನ ಸಾಮರ್ಥ್ಯ ತೋರಿಸುವುದಷ್ಟೇ. ನಾನು ದೊಡ್ಡ ಗಾತ್ರದ ವ್ಯಕ್ತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ನಾನು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ನಾನು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ಸೋಮಾರಿಯಾಗುವುದಿಲ್ಲ. ನಾನು ನನ್ನ ಫಿಟ್‌ನೆಸ್‌ಗಾಗಿ ಸಾಕಷ್ಟು ಸಮಯವನ್ನು ಕಳೆಯುತ್ತೇನೆ ESPNCricinfo ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನು ಸೀನಿಯರ್ ಲೂಸಿಯಾ ಕಿಂಗ್ಸ್ ಮತ್ತು ಬಾರ್ಬಡೋಸ್ ರಾಯಲ್ಸ್ ನಡುವಿನ ಪಂದ್ಯಕ್ಕೆ ಸಂಬಂಧಿಸಿದಂತೆ, 202 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕಾರ್ನ್‌ವಾಲ್ ತಂಡವು ಕೇವಲ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಹೀನಾಯ ಸೋಲು ಕಂಡಿತು.
 

SCROLL FOR NEXT