ಕ್ರಿಕೆಟ್

2ನೇ ಟೆಸ್ಟ್: ಲಿಯಾನ್ ಬೌಲಿಂಗ್ ದಾಳಿಗೆ ಭಾರತ ತತ್ತರ; 262 ರನ್ ಗಳಿಗೆ ಆಲೌಟ್, ಆಸೀಸ್ ಗೆ 1 ರನ್ ಮುನ್ನಡೆ

Vishwanath S

ದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 262 ರನ್ ಗಳಿಗೆ ಆಲೌಟ್ ಆಗಿದೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 263 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾಗೆ ಅತ್ಯಂತ ಕೆಟ್ಟ ಆರಂಭ ಸಿಕ್ಕಿದ್ದು 150 ರನ್‌ಗಳ ಒಳಗೆ ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು. 

ನಂತರ ಆರ್. ಅಶ್ವಿನ್ ಮತ್ತು ಅಕ್ಷರ್ ಪಟೇಲ್ 114 ರನ್ ಜೊತೆಯಾಟ ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ಭಾರತವನ್ನು ಮೇಲೆಳೆಯುವಂತೆ ಮಾಡಿತು. ಅಕ್ಷರ್ ಪಟೇಲ್ 74 ಮತ್ತು ಆರ್. ಅಶ್ವಿನ್ 37 ರನ್ ಗಳ ಪೇರಿಸಿ ಔಟಾದರು. ಒಟ್ಟಾರೆ ಭಾರತ 262 ರನ್ ಗಳಿಗೆ ಆಲೌಟ್ ಆಗಿದೆ. ಇನ್ನು 1 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಎರಡನೇ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 61 ರನ್ ಪೇರಿಸಿದೆ.

ಭಾರತದ ಪರ ರೋಹಿತ್ ಶರ್ಮಾ 32, ಕೆಎಲ್ ರಾಹುಲ್ 17, ವಿರಾಟ್ ಕೊಹ್ಲಿ 44, ರವೀಂದ್ರ ಜಡೇಜಾ 26, ಅಕ್ಷರ್ ಪಟೇಲ್ 74 ಮತ್ತು ರವಿಚಂದ್ರನ್ ಅಶ್ವಿನ್ 37 ರನ್ ಬಾರಿಸಿದ್ದಾರೆ.

ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ನಾಥನ್ ಲಿಯಾನ್ 5, ಮ್ಯಾಥ್ಯೂ ಕುನ್ನೆಮನ್ ಮತ್ತು ಮರ್ಫಿ ತಲಾ 2 ವಿಕೆಟ್ ಪಡೆದರೆ, ಪ್ಯಾಟ್ ಕಮಿನ್ಸ್ 1 ವಿಕೆಟ್ ಪಡೆದಿದ್ದಾರೆ. 

SCROLL FOR NEXT