ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಪಾಕ್ ಕ್ರಿಕೆಟ್ ತಂಡವನ್ನು ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ ಟ್ರೋಲ್ ಮಾಡಿದ್ದು ಯಾಕೆ? ವಿಡಿಯೋ ವೈರಲ್

ಪಾಕಿಸ್ತಾನ ತಂಡದ ಬಗ್ಗೆ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ ಕಾಮೆಂಟ್ ಮಾಡಿದ್ದಾರೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಕುರಿತಂತೆ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ ಪಾಕಿಸ್ತಾನ ಕ್ರಿಕೆಟ್ ತಂಡವನ್ನೇ ಟ್ರೋಲ್ ಮಾಡಿದ ಘಟನೆ ನಡೆದಿದೆ.

ಡ್ಯಾನಿ ಡೇನಿಯಲ್-ಪಾಕ್ ಆಟಗಾರರು
Vishwanath S
Updated On : 5 Jan 2023, 9:58 pm

ಪಾಕಿಸ್ತಾನ ತಂಡದ ಬಗ್ಗೆ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ ಕಾಮೆಂಟ್ ಮಾಡಿದ್ದಾರೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಕುರಿತಂತೆ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ ಪಾಕಿಸ್ತಾನ ಕ್ರಿಕೆಟ್ ತಂಡವನ್ನೇ ಟ್ರೋಲ್ ಮಾಡಿದ ಘಟನೆ ನಡೆದಿದೆ. 

ಪಾಕಿಸ್ತಾನದ ಮಾಜಿ ಆಟಗಾರ ಹಾಗೂ ಈ ಪಂದ್ಯದಲ್ಲಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಬಾಜಿದ್ ಖಾನ್ ಮಾಡಿದ ಒಂದೇ ಒಂದು ಎಡವಟ್ಟು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಕಾಮೆಂಟೇಟರ್ ಆಗಿರುವ ಬಾಜಿದ್ ಖಾನ್ ತನ್ನ ಸಹ ಪ್ಯಾನೆಲಿಸ್ಟ್ ಮತ್ತು ಮಾಜಿ ನ್ಯೂಜಿಲೆಂಡ್ ಕ್ರಿಕೆಟಿಗ ಡ್ಯಾನಿ ಮಾರಿಸನ್ ಬದಲಿಗೆ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ಸ್ ಎಂದು ತಪ್ಪಾಗಿ ಕರೆದಿದ್ದರು.

Advertisement

Advertisement

ಇದನ್ನೂ ಓದಿ: ಗಂಟೆಗೆ 161 ಕಿ.ಮಿ ವೇಗದಲ್ಲಿ ಬೌಲಿಂಗ್‌?; ಶೊಯೆಬ್ ಅಖ್ತರ್ ದಾಖಲೆ ಮುರಿಯುವ ಕುರಿತು ಭಾರತದ ವೇಗಿ ಉಮ್ರಾನ್ ಮಲ್ಲಿಕ್ ಹೇಳಿದ್ದೇನು?

ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್ ಎಜಾಜ್ ಪಟೇಲ್ ಮತ್ತು ಮ್ಯಾಟ್ ಹೆನ್ರಿ 10ನೇ ವಿಕೆಟ್‌ಗೆ 49 ರನ್‌ಗಳ ಜೊತೆಯಾಟ ನೀಡಿದ್ದಾಗ ಈ ಘಟನೆ ಸಂಭವಿಸಿದೆ. ಬಾಜಿದ್ ಖಾನ್ ನ್ಯೂಜಿಲೆಂಡ್‌ಗಾಗಿ ಇದುವರೆಗಿನ ಅತಿದೊಡ್ಡ 10ನೇ ವಿಕೆಟ್ ಜೊತೆಯಾಟವನ್ನು ಉಲ್ಲೇಖಿಸಿ, ತನ್ನ ಪಾಲುದಾರ ಡ್ಯಾನಿ ಮಾರಿಸನ್ ಬದಲಿಗೆ ಅಮೇರಿಕನ್ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ಸ್ ಹೆಸರನ್ನು ತೆಗೆದುಕೊಂಡರು. ಆದರೆ, ತಕ್ಷಣವೇ ತನ್ನ ತಪ್ಪನ್ನು ಅರಿತು ಸರಿಪಡಿಸಿಕೊಂಡರು.

ಆದರೆ ಈ ವಿಡಿಯೋ ಟ್ವಿಟ್ಟರ್ ನಲ್ಲಿ ಹೆಚ್ಚು ವೈರಲ್ ಆಗಿತ್ತು. ಅದೇ ಸಮಯದಲ್ಲಿ, ಡ್ಯಾನಿ ಡೇನಿಯಲ್ ಕೂಡ ಈ ವೀಡಿಯೊಗೆ ಪ್ರತಿಕ್ರಿಯಿಸಿದ್ದು ಪಾಕ್ ತಂಡ ಕೋಚ್ ಆಗಿ ಮಾಡಿ ಎಂದು ಹೇಳಿದ್ದಾರೆ. ಕರಾಚಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಈಗ ಡ್ರಾದತ್ತ ಸಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement