ಕ್ರೀಸ್ ಗೇಲ್ ಸಾಂದರ್ಭಿಕ ಚಿತ್ರ 
ಕ್ರಿಕೆಟ್

ಬಿಗ್ ತ್ರೀ ಪ್ರಾಬಲ್ಯ ಕ್ರಿಕೆಟ್ ಆಟವನ್ನೇ ಕೊಲ್ಲುತ್ತದೆ: ಗೇಲ್ ಎಚ್ಚರಿಕೆ

ಬಿಗ್ ತ್ರೀಗಳಾದ ಭಾರತ-ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಟೆಸ್ಟ್ ನ್ನು ಎಡೆಬಿಡದೆ ಆಡುತ್ತಿರುವುದು ಅಂತಿಮವಾಗಿ ಕ್ರಿಕೆಟ್ ಆಟವನ್ನೇ ಕೊಲ್ಲುತ್ತದೆ ಎಂದು ವೆಸ್ಟ್ ಇಂಡೀಸ್ ಬ್ಯಾಟರ್ ಕ್ರಿಸ್ ಗೇಲ್ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ಬಿಗ್ ತ್ರೀಗಳಾದ ಭಾರತ-ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಟೆಸ್ಟ್ ನ್ನು ಎಡೆಬಿಡದೆ ಆಡುತ್ತಿರುವುದು ಅಂತಿಮವಾಗಿ ಕ್ರಿಕೆಟ್ ಆಟವನ್ನೇ ಕೊಲ್ಲುತ್ತದೆ ಎಂದು ಎಚ್ಚರಿಕೆ ನೀಡಿರುವ ವೆಸ್ಟ್ ಇಂಡೀಸ್ ಬ್ಯಾಟರ್ ಕ್ರಿಸ್ ಗೇಲ್, ವೆಸ್ಟ್ ಇಂಡೀಸ್ ನಂತಹ ಸಣ್ಣ ಮಂಡಳಿಯ ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಭಿವೃದ್ಧಿ ಹೊಂದಲು ಉತ್ತಮ ಸಂಭಾವನೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಟಿ-20 ಪಂದ್ಯಗಳಿಗೆ ಖ್ಯಾತರಾಗಿರುವ ಗೇಲ್, 103 ಟೆಸ್ಟ್ ಮತ್ತು 301 ಏಕದಿನ ಪಂದ್ಯಗಳನ್ನಾಡಿದ್ದಾರೆ. ಕ್ರಿಕೆಟ್ ನಲ್ಲಿ ಕೇವಲ ಬಿಗ್ ತ್ರೀಗಳ ಪ್ರಾಬಲ್ಯ ಹೆಚ್ಚಿನ ಕಾಲ ಪಂದ್ಯಗಳು ನಡೆಯುವಲ್ಲಿ ಉತ್ತಮವಾದದ್ದಲ್ಲ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇಂಡಿಯನ್ ಹಿರಿಯರ ಪ್ರೀಮಿಯರ್ ಲೀಗ್ ಸಂದರ್ಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ನಲ್ಲಿ ಸ್ವಲ್ವ ಬದಲಾವಣೆಯಾಗಿದೆ. ಇದೊಂದು ದೊಡ್ಡ ವ್ಯವಹಾರವಾಗಿದೆ. ಟಿ-20 ಲೀಗ್ ಮಾತ್ರವಲ್ಲದೇ ಟೆಸ್ಟ್ ಕ್ರಿಕೆಟ್ ನಿಂದಲೂ ಅಪಾರ ಪ್ರಮಾಣದ ಹಣವನ್ನು ಬಾಚಲಾಗುತ್ತಿದೆ. ಸಣ್ಣ ತಂಡಗಳಿಗಿಂತ ದೊಡ್ಡ ತಂಡಗಳು ಹೆಚ್ಚು ಸಂಭಾವನೆ ಪಡೆಯುತ್ತವೆ, ಇದರಿಂದಾಗಿ ಅವರಿಗೆ ಅನನುಕೂಲವಾಗುತ್ತದೆ. ಇದರಲ್ಲಿ ರಚನಾತ್ಮಕತೆಯ ಅಗತ್ಯವಿದೆ. ಇದರಿಂದ ಪ್ರತಿಯೊಬ್ಬರೂ ಪ್ರಯೋಜನ ಪಡೆಯುತ್ತಾರೆ. ಅನಾನುಕೂಲಕರ ಮತ್ತು ಕೆಳ-ಶ್ರೇಯಾಂಕದ ತಂಡಗಳು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಆಟಗಳನ್ನು ಆಡುವ ಅಗತ್ಯವಿದೆ. ಅವರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕಾಗಿದೆ. ಅಲ್ಲದೇ ಅವರು ಕೂಡಾ ಚೆನ್ನಾಗಿಯೇ ಆಡುವುದರಿಂದ ದೊಡ್ಡ ತಂಡಗಳಂತೆ ಆಟಗಾರರಿಗೆ ಉತ್ತಮ ವೇತನವನ್ನು ನೀಡಬೇಕಾಗಿದೆ ಎಂದರು.

ಐಸಿಸಿ ಶ್ರೇಯಾಂಕದಲ್ಲಿನ ಕೆಳ ಕ್ರಮಾಂಕದ ತಂಡಗಳು ವರ್ಷದಲ್ಲಿ ನಿರಂತರವಾಗಿ ಮೂರು ಮಾದರಿ ಆಟಗಳನ್ನು ಆಡದ ಹಿನ್ನೆಲೆಯಲ್ಲಿ ಬಿಗ್ ತ್ರೀಗಳು ಅವರನ್ನು ರಕ್ಷಿಸಬೇಕು ಎಂಬರ್ಥದಲ್ಲಿ ಗೇಲ್ ಹೇಳಿದ್ದಾರೆ. ಅಲ್ಲದೇ ಏಕದಿನ ಮಾದರಿ ಪಂದ್ಯಗಳ ಭವಿಷ್ಯವನ್ನು ಕೂಡಾ ಊಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಬಹುಮಟ್ಟಿಗೆ ಈ ಮೂರು ತಂಡಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿವೆ. ನಾವು ಹೀಗೆಯೇ ಮುಂದುವರಿದರೆ ಜನರು ನಮಗೆ ಈಗ ಹೊಸ ತಂಡ ಬೇಕು, ಹೊಸ ಪ್ರತಿಭೆಗಳು ಹೊರಗೆ ಬರಬೇಕು, ಹೆಸರು ಗಳಿಸಬೇಕು ಎಂದು ಹೇಳಲು ಹೊರಟಿದ್ದಾರೆ ಎಂದು ಅವರು ತಿಳಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT