ಟೀಂ ಇಂಡಿಯಾ ಬೌಲರ್ ಮೊಹಮ್ಮದ್​ ಶಮಿ 
ಕ್ರಿಕೆಟ್

ಅಪಘಾತಕ್ಕೀಡಾದ ವ್ಯಕ್ತಿಯ ರಕ್ಷಿಸಿ ಮಾನವೀಯತೆ ಮೆರೆದ ಟೀಂ ಇಂಡಿಯಾ ಬೌಲರ್ ಮೊಹಮ್ಮದ್​ ಶಮಿ

ಕಾರು ಅಪಘಾತಕ್ಕೀಡಾಗಿ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡುವ ಮೂಲಕ ಟೀಂ ಇಂಡಿಯಾ ಬೌಲರ್ ಮೊಹಮ್ಮದ್​ ಶಮಿ ಮಾನವೀಯತೆ ಮೆರೆದಿದ್ದಾರೆ.

ನೈನಿತಾಲ್(ಉತ್ತರಾಖಂಡ): ಕಾರು ಅಪಘಾತಕ್ಕೀಡಾಗಿ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡುವ ಮೂಲಕ ಟೀಂ ಇಂಡಿಯಾ ಬೌಲರ್ ಮೊಹಮ್ಮದ್​ ಶಮಿ ಮಾನವೀಯತೆ ಮೆರೆದಿದ್ದಾರೆ.

ಉತ್ತರಾಖಂಡದ ನೈನಿತಾಲ್​ನ ಕಣಿವೆಯೊಂದರಲ್ಲಿ ಕಾರೊಂದು ಅಪಘಾತಕ್ಕೀಡಾಗಿದ್ದನ್ನು, ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಶಮಿ ಗಮನಿಸಿದ್ದು, ಕಾರು ನಿಲ್ಲಿಸಿ ಸಹಾಯಹಸ್ತ ಚಾಚಿದ್ದಾರೆ.

ಘಟನೆಯ ವಿಡಿಯೋವನ್ನು ಶಮಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಸ್ತೆ ದಾಟಿ ಕಣಿವೆಗೆ ಬಿದ್ದ ಕಾರನ್ನು ವಿಡಿಯೋದಲ್ಲಿ ಕಾಣಬಹುದು. ಶಮಿ ಕಾರಲ್ಲಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದು ಉಪಚರಿಸುತ್ತಿರುವುದೂ ಇದೆ.

'ಆತ ತುಂಬಾ ಅದೃಷ್ಟಶಾಲಿ. ಭಗವಂತ ಮರುಜನ್ಮ ನೀಡಿದ್ದಾನೆ. ನೈನಿತಾಲ್​ ಬಳಿಯ ಕಣಿವೆಯಲ್ಲಿ ಕಾರು ಅಪಘಾತಕ್ಕೀಡಾಗಿತ್ತು. ನಾವು ಆತನನ್ನು ಸುರಕ್ಷಿತವಾಗಿ ಹೊರಗೆ ಕರೆತಂದೆವು' ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

KPSC ನೇಮಕಾತಿ ಹಗರಣಕ್ಕೆ ಬಿಗ್‌ ಟ್ವಿಸ್ಟ್‌ ; ₹40 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿದ್ದ ಮಧ್ಯವರ್ತಿ, BJP ಮುಖಂಡನ ಬಂಧನ!

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?

ನೇಪಾಳ ಪ್ರವಾಹ: ಲೈಕ್ಸ್ ಗಾಗಿ ನಕಲಿ ವಿಡಿಯೋ, ಸುಳ್ಳು ಮಾಹಿತಿ ಪ್ರಸಾರ; 72 ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಕಟ್ಟುನಿಟ್ಟಿನ ಸೂಚನೆ!

ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ 'Batwara 1947': ಸನ್ನಿ ಡಿಯೋಲ್ ಮುಸ್ಲಿಂ ಪಾತ್ರ ಜನರಿಗೆ ಇಷ್ಟವಾಗಲಿಲ್ಲವೇ! ಶಬಾನಾ ಆಜ್ಮಿ ಹೇಳಿದ್ದೇನು?