ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

Rishab Pant Accident: ರಿಷಬ್ ಪಂತ್ ಚೇತರಿಕೆ, ದೇಶೀಯ ಕ್ರೆಕೆಟ್ ನಲ್ಲಿ ಭಾಗಿ, ಟೀಂ ಇಂಡಿಯಾಗೆ ಈ ಸರಣಿಯಲ್ಲಿ ಲಭ್ಯ!

ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಕ್ರಿಕೆಟ್ ನಿಂದ ದೂರ ಉಳಿದಿದ್ದ ಭಾರತೀಯ ಕ್ರಿಕೆಟ್ ಆಟಗಾರ ರಿಷಬ್ ಪಂತ್ (Rishabh Pant) ಇದೀಗ ಸಂಪೂರ್ಣ ಚೇತರಿಕೆಯಾಗಿದ್ದು, ದೇಶೀಯ ಕ್ರಿಕೆಟ್ (domestic cricket) ನಲ್ಲಿ ಪಾಲ್ಗೊಳ್ಳಲು ಗ್ರೀನ್ ಸಿಗ್ನಲ್ ದೊರೆತಿದೆ.

ರಿಷಬ್ ಪಂತ್
Srinivasa Murthy VN
Updated On : 30 Oct 2023, 4:40 pm

ನವದೆಹಲಿ: ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಕ್ರಿಕೆಟ್ ನಿಂದ ದೂರ ಉಳಿದಿದ್ದ ಭಾರತೀಯ ಕ್ರಿಕೆಟ್ ಆಟಗಾರ ರಿಷಬ್ ಪಂತ್ (Rishabh Pant) ಇದೀಗ ಸಂಪೂರ್ಣ ಚೇತರಿಕೆಯಾಗಿದ್ದು, ದೇಶೀಯ ಕ್ರಿಕೆಟ್ (domestic cricket) ನಲ್ಲಿ ಪಾಲ್ಗೊಳ್ಳಲು ಗ್ರೀನ್ ಸಿಗ್ನಲ್ ದೊರೆತಿದೆ.

ಹೌದು.. ಕಳೆದ ವರ್ಷ ಡಿಸೆಂಬರ್​ ಅಂತ್ಯದಲ್ಲಿ ಭೀಕರ ಕಾರು ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಪಾರಾದ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ರಿಷಭ್‌ ಪಂತ್‌(Rishabh Pant Accident) ಕ್ರಿಕೆಟ್​ ಕಮ್​ಬ್ಯಾಕ್​ಗೆ ಮುಹೂರ್ತ ಫಿಕ್ಸ್​ ಆಗಿದೆ. ಇದೇ ನವೆಂಬರ್​ 23ರಿಂದ ನಡೆಯಲಿರುವ ವಿಜಯ್​ ಹಜಾರೆ ಏಕದಿನ ಟ್ರೋಫಿ ಅಥವಾ ಜನವರಿ 5ರಿಂದ ಆರಂಭಗೊಳ್ಳುವ ರಣಜಿ ಟ್ರೋಫಿಯಲ್ಲಿ ತವರು(Pant likely to play domestic cricket) ದೆಹಲಿ ಪರ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಿಷಬ್ ಪಂತ್‌ ಬಗ್ಗೆ ಪ್ರಶ್ನಿಸಿದ್ದಕ್ಕೆ ನಟಿ ಊರ್ವಶಿ ರೌಟೇಲಾ ಆಕ್ರೋಶ: ವಿಡಿಯೋ

Advertisement

Advertisement

ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (National Cricket Academy)ಯಲ್ಲಿ (ಎನ್​ಸಿಎ) ಪುನಶ್ಚೇತನ ಶಿಬಿರದಲ್ಲಿರುವ ಪಂತ್​ ಈಗಾಗಲೆ ಬ್ಯಾಟಿಂಗ್​ ಮತ್ತು ಕೀಪಿಂಗ್​ ಅಭ್ಯಾಸ ನಡೆಸಿದ ವಿಡಿಯೊಗಳು ವೈರಲ್​ ಆಗಿತ್ತು. ಅಲ್ಲದೆ ಕರ್ನಾಟಕದ JSW ವಿಜಯನಗರದಲ್ಲಿ ನಡೆದ ಕ್ರಿಕೆಟ್​ ಅಭ್ಯಾಸ ಪಂದ್ಯವೊಂದರಲ್ಲಿ ಪಂತ್​ ಬ್ಯಾಟಿಂಗ್​ ನಡೆಸಿದ್ದರು. ತಮ್ಮ ಎಂದಿನ ಶೈಲಿಯಲ್ಲೇ ಸಿಕ್ಸರ್​ ಮತ್ತು ಬೌಂಡರಿ ಕೂಡ ಬಾರಿಸಿ ಮಿಂಚಿದ್ದರು. ಬಹುತೇಕ ಚೇತರಿಕೆ ಕಂಡಿರುವ ಅವರ ಫಿಟ್ನೆಸ್​ ಮೇಲೆ ಬಿಸಿಸಿಐ (BCCI) ವೈದ್ಯಕಿಯ ತಂಡ ನಿಗಾ ಇರಿಸಿದೆ. ಪಂತ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳ ಬೇಕಾದರೆ ದೇಶೀಯ ಕ್ರಿಕೆಟ್​ನಲ್ಲಿ ಆಡಿ ತಮ್ಮ ಫಿಟ್ನೆಸ್​ ಸಾಬೀತುಪಡಿಸಬೇಕಿದೆ ಎಂದು ಬಿಸಿಸಿಐ (BCCI) ಅಧಿಕಾರಿಯೊಬ್ಬರು ಹೇಳಿರುವುದಾಗಿ ಇನ್ಸೈಡ್​ ಸ್ಪೋರ್ಟ್ಸ್​ ವರದಿ ಮಾಡಿದೆ.

ಆಫ್ಘನ್​ ಸರಣಿಯಲ್ಲಿ ಟೀಮ್​ ಇಂಡಿಯಾ ಪರ ಕಣಕ್ಕೆ
ಏಕದಿನ ವಿಶ್ವಕಪ್ ಟೂರ್ನಿ (ICC Cricket WorldCup 2023) ಮುಗಿದ ಬಳಿಕ ಭಾರತ ತಂಡ ತವರಿನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಟಿ20 ಸರಣಿಯಲ್ಲಿ ಆಡಲಿದೆ. ಈ ಸರಣಿ ಮುಕ್ತಾಯದ ಬೆನ್ನಲ್ಲೇ ಡಿಸೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ (South Africa) ಪ್ರವಾಸ ಕೈಗೊಳ್ಳಲಿದೆ. ಆದರೆ ಪಂತ್​ ಈ ಸರಣಿಗೆ ಫಿಟ್​ ಆಗುವ ಸಾಧ್ಯತೆ ಕಡಿಮೆ ಇದೆ. 2024ರ ಜನವರಿ 11ರಿಂದ ಅಫ್ಫಾನಿಸ್ತಾನ(IND vs AFG series) ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿ ವೇಳೆಗೆ ಅವರು ಫಿಟ್​ ಆಗಿ ತಂಡದ ಪರ ಆಡುವ ನಿರೀಕ್ಷೆ ಇದೆ. ಪಂತ್​ ಅಫಘಾನಿಸ್ತಾನ ಪರ ಆಡಿದರೆ, ಜನವರಿ 25ರಿಂದ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್ (England)​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಪಂತ್​ ಆಡುವ ಸಾಧ್ಯತೆ ಇದೆ.

ಇದನ್ನೂ ಓದಿ: ರಿಷಭ್ ಪಂತ್ ಭೇಟಿಯಾದ ರೈನಾ, ಭಜ್ಜಿ, ಶ್ರೀಶಾಂತ್! ಹೇಳಿದಿಷ್ಟು...

“ಹಾಲಿ ನಡೆಯುತ್ತಿರುವ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ (Syed Mushtaq Ali Trophy) ದೇಶೀಯ ಟಿ20 ಟೂರ್ನಿಯಲ್ಲಿ ಪಂತ್​ ಆಡುವ ನಿರೀಕ್ಷೆಯಲ್ಲಿದ್ದರು. ಆದರೆ ಸಂಪೂರ್ಣ ಫಿಟ್​ ಆಗದ ಕಾರಣ ಅವರನ್ನು ಈ ಟೂರ್ನಿಗೆ ಪರಿಗಣನೆ ಮಾಡಿಲ್ಲ. ಆದರೆ, ನವೆಂಬರ್​ 23ರಿಂದ ನಡೆಯಲಿರುವ ವಿಜಯ್​ ಹಜಾರೆ (Vijaya Hazare Trophy) ಏಕದಿನ ಟ್ರೋಫಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದೊಮ್ಮ ಇದು ಕೂಡ ಸಾಧ್ಯವಾಗದಿದ್ದರೆ, ಜನವರಿ 5ರಿಂದ ನಡೆಯಲಿರುವ ರಣಜಿ ಟ್ರೋಫಿ (Ranji Trophy)ಯಲ್ಲಿ ಆಡುವುದು ಖಚಿತ” ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments