ಆರ್ ಸಿಬಿ ತಂಡ 
ಕ್ರಿಕೆಟ್

IPL 2024: KKR ವಿರುದ್ಧ RCBಗೆ 1 ರನ್ ರೋಚಕ ಸೋಲು; ಪ್ಲೇ ಆಫ್ ನಿಂದ ಹೊರಕ್ಕೆ!

ಐಪಿಎಲ್ 2024ರ ಟೂರ್ನಿಯಲ್ಲಿ ಆರ್ ಸಿಬಿಯ ಸೋಲಿನ ವರಸೆ ಮುಂದುವರೆದಿದ್ದು ಕೆಕೆಆರ್ ವಿರುದ್ಧ 1 ರನ್ ನಿಂದ ರೋಚಕ ಸೋಲು ಕಂಡಿದೆ.

ಕೋಲ್ಕತ್ತಾ: ಐಪಿಎಲ್ 2024ರ ಟೂರ್ನಿಯಲ್ಲಿ ಆರ್ ಸಿಬಿಯ ಸೋಲಿನ ವರಸೆ ಮುಂದುವರೆದಿದ್ದು ಕೆಕೆಆರ್ ವಿರುದ್ಧ 1 ರನ್ ನಿಂದ ರೋಚಕ ಸೋಲು ಕಂಡಿದೆ.

ಕೋಲ್ಕತ್ತಾದ ಈಡೆನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ತಂಡ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್ ಪೇರಿಸಿತ್ತು. ಇನ್ನು ಕೆಕೆಆರ್ ನೀಡಿದ 223 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆರ್ ಸಿಬಿ ಕೊನೆಯ ಎರಡು ಓವರ್ ನಲ್ಲಿ 31 ರನ್ ಬೇಕಿತ್ತು. ಈ ವೇಳೆ ದಿನೇಶ್ ಕಾರ್ತಿಕ್ ಒಂದು ಸಿಕ್ಸ್ ಮತ್ತು ಒಂದು ಫೋರ್ ಹೊಡೆದು ಔಟಾದರು. ಹೀಗಾಗಿ ಕೊನೆಯ ಓವರ್ ನಲ್ಲಿ ಗೆಲ್ಲಲು 21 ರನ್ ಬೇಕಿತ್ತು. ಈ ವೇಳೆ ಕರ್ಣ್ ಮೂರು ಸಿಕ್ಸರ್ ಬಾರಿಸುವ ಮೂಲಕ ಗೆಲುವಿನ ಸನಿಹಕ್ಕೆ ಪಂದ್ಯವನ್ನು ತಂದರು.

ಆದರೆ ಮಿಚೆಲ್ ಸ್ಟಾರ್ಕ್ ನಾಲ್ಕನೇ ಎಸೆತದಲ್ಲಿ ಕರ್ಣ್ ರನ್ನು ಔಟ್ ಮಾಡಿದರು. ಹೀಗಾಗಿ ಕೊನೆಯ ಎಸೆತದಲ್ಲಿ ಪಂದ್ಯ ಗೆಲ್ಲಲು ಮೂರು ರನ್ ಬೇಕಿತ್ತು. ಈ ವೇಳೆ ಫರ್ಗುಸನ್ ಎರಡು ರನ್ ಪಡೆಯಲು ಮುಂದಾಗಿದ್ದು ಆದರೆ ರನ್ ಔಟ್ ಗೆ ಬಲಿಯಾದರು. ಹೀಗಾಗಿ ಆರ್ ಸಿಬಿ ತಂಡ 1 ರನ್ ನಿಂದ ಸೋಲು ಕಂಡಿತು.

ಕೆಕೆಆರ್ ಪರ ಫಿಲ್ ಸಾಲ್ಟ್ 48, ನಾಯಕ ಶ್ರೇಯಸ್ ಅಯ್ಯರ್ 50, ರಿಂಕು ಸಿಂಗ್ 24 ರನ್ ಬಾರಿಸಿ ಔಟಾದರು. ಆಂಡ್ರೆ ರಸೆಲ್ ಅಜೇಯ 27 ಹಾಗೂ ರಮಣದೀಪ್ ಸಿಂಗ್ ಅಜೇಯ 24 ರನ್ ಪೇರಿಸಿದ್ದು ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ನೆರವಾಯಿತು.

ಟೂರ್ನಿಯಲ್ಲಿ 8 ಪಂದ್ಯಗಳ ಪೈಕಿ 1 ಪಂದ್ಯ ಗೆದ್ದಿರುವ ಆರ್ ಸಿಬಿ ತಂಡ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನು ಸತತ ಆರು ಪಂದ್ಯಗಳಲ್ಲಿ ಸೋಲು ಕಂಡಿರುವ ಆರ್ ಸಿಬಿ ಪ್ಲೇ ಆಫ್ ನಿಂದ ಹೊರಬಿದ್ದ ಮೊದಲ ತಂಡವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT