ಪಾಕಿಸ್ತಾನ-ಆಸ್ಟ್ರೇಲಿಯಾ 
ಕ್ರಿಕೆಟ್

ಅಂಡರ್ 19 ವಿಶ್ವಕಪ್: ಪಾಕ್ ವಿರುದ್ಧ ಗೆದ್ದ ಆಸ್ಟ್ರೇಲಿಯಾ, ಭಾರತ-ಆಸೀಸ್ ನಡುವೆ ಫೈನಲ್ ಹಣಾಹಣಿ!

ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಿದ್ದು ಈ ಮೂಲಕ ಫೈನಲ್ ಗೆ ಪ್ರವೇಶಿಸಿದೆ.

ಬಿನೋನಿ(ದಕ್ಷಿಣ ಆಫ್ರಿಕಾ): ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಿದ್ದು ಈ ಮೂಲಕ ಫೈನಲ್ ಗೆ ಪ್ರವೇಶಿಸಿದೆ.

ದಕ್ಷಿಣ ಆಫ್ರಿಕಾದ ಬಿನೊನಿ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ ಓವರ್ ನಲ್ಲಿ 179 ರನ್ ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನ ಪರ ಶಾಮಿಲ್ ಹುಸೇನ್ 17, ಅಜಾನ್ ಅವೈಸ್ 52 ಮತ್ತು ಅರಾಫತ್ ಮಿನ್ಹಾಸ್ 52 ರನ್ ಸಿಡಿಸಿದ್ದರು. ಆಸ್ಟ್ರೇಲಿಯಾದ ಟಾಮ್ ಸ್ಟ್ರಾಕರ್ 6 ವಿಕೆಟ್ ಪಡೆದಿದ್ದಾರೆ.

ಪಾಕ್ ನೀಡಿದ 180 ರನ್ ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೊನೆಯ ಓವರ್ ನಲ್ಲಿ 181 ರನ್ ಬಾರಿಸುವ ಮೂಲಕ 1 ವಿಕೆಟ್ ನಿಂದ ರೋಚಕ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ಪರ ಹ್ಯಾರಿ ಡಿಕ್ಸನ್ 50, ಆಲಿವರ್ ಪೀಕ್ 49, ಟಾಮ್ ಕ್ಯಾಂಪ್ಬೆಲ್ 25 ಮತ್ತು ರಾಫ್ ಮ್ಯಾಕ್‌ಮಿಲನ್ ಅಜೇಯ 19 ರನ್ ಬಾರಿಸಿದ್ದಾರೆ. ಪಾಕ್ ಪರ ಅಲಿ ರಾಜಾ 4 ಮತ್ತು ಅರಾಫತ್ ಮಿನ್ಹಾಸ್ 2 ವಿಕೆಟ್ ಪಡೆದಿದ್ದಾರೆ.

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದ್ದ ಭಾರತ ಸತತ ಐದನೇ ಬಾರಿಗೆ ಫೈನಲ್ ಗೆ ಪ್ರವೇಶಿಸಿದೆ. ಇನ್ನು ಆಸ್ಟ್ರೇಲಿಯಾ ಇದೀಗ ಫೈನಲ್ ಪ್ರವೇಶಿಸಿದ್ದು ಉಭಯ ತಂಡಗಳು ಫೆಬ್ರವರಿ 11ರಂದು ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ