ಮುಂಬೈ: ಟಿ20 ವಿಶ್ವಕಪ್ ಬಳಿಕ ತವರಿಗೆ ಮರಳಿರುವ ಕನ್ನಡಿಗ ಹಾಗೂ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಬಹುಮಾನದಲ್ಲೂ ಸಮಾನತೆ ಬಯಸಿದ್ದು, ತಮಗೆ 5 ಕೋಟಿ ಬೇಡ.. ಎಲ್ಲರಂತೆ 2.5 ಕೋಟಿ ನೀಡಿ ಎಂದು ಬಿಸಿಸಿಐಗೆ ಮನವಿ ಮಾಡಿದ್ದಾರೆ.
T20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಸಾಧನೆಗೆ ಮೆಚ್ಚಿ ಭಾರತ ಕ್ರಿಕೆಟ್ ತಂಡಕ್ಕೆ ಬಿಸಿಸಿಐ 125 ಕೋಟಿ ರೂ ಬಹುಮಾನ ಘೋಷಣೆ ಮಾಡಿತ್ತು. ಅದರಂತೆ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಮತ್ತು ತಂಡದ ಆಟಗಾರರಿಗೆ ತಲಾ 5 ಕೋಟಿ ರೂ ವಿತರಿಸಲು ಬಿಸಿಸಿಐ ಸಿದ್ಧವಾಗಿತ್ತು.
ಸಹಾಯಕ ಕೋಚ್ ಗಳಿಗೆ ತಲಾ 2.5ಕೋಟಿ ರೂ ಘೋಷಣೆ ಮಾಡಿತ್ತು. ಆದರೆ ಇದೀಗ ಬಹುಮಾನದಲ್ಲೂ ಸಮಾನತೆಗೆ ಮುಂದಾಗಿರುವ ತಂಡದ ಪ್ರಧಾನಕೋಚ್ ರಾಹುಲ್ ದ್ರಾವಿಡ್ ತಮಗೆ 5 ಕೋಟಿ ರೂ ಬೇಡ.. ಸಹಾಯಕ ಕೋಚ್ ಗಳಿಗೆ ನೀಡಿದಂತೆ 2.5 ಕೋಟಿ ರೂ ಮಾತ್ರ ನೀಡಿ ಎಂದು ಹೇಳಿದ್ದಾರೆ. ಆ ಮೂಲಕ ಮತ್ತೊಮ್ಮೆರಾಹುಲ್ ದ್ರಾವಿಡ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಿಶ್ವಕಪ್ಗಾಗಿ ಟೀಂ ಇಂಡಿಯಾ ಜೊತೆ ಅಮೆರಿಕ ಮತ್ತು ವೆಸ್ಟ್ ವಿಂಡೀಸ್ಗೆ ಪ್ರಯಾಣ ಬೆಳೆಸಿದ್ದ 42 ಮಂದಿಗೆ 125 ಕೋಟಿ ರೂ ಹಣವನ್ನು ಹಂಚಿಕೆ ಮಾಡಲಾಗುವುದು ಎಂದು ಬಿಸಿಸಿಐ ಹೇಳಿತ್ತು. ಅದರಂತೆ ಬಿಸಿಸಿಐ ಎಲ್ಲರಿಗೂ ಹಣವನ್ನು ನೀಡುತ್ತಿದೆ. ಬಿಸಿಸಿಐ ನಿರ್ಧಾರದಂತೆ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಐದು ಕೋಟಿ ನೀಡೋದಾಗಿ ಹೇಳಿತ್ತು.
ಆದರೆ ದ್ರಾವಿಡ್ ನನಗೆ ಐದು ಕೋಟಿ ಹಣ ಬೇಡ. 2.5 ಕೋಟಿ ರೂಪಾಯಿ ಬಹುಮಾನ ಮಾತ್ರ ಸಾಕು ಎಂದು ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದಾರೆ. ದ್ರಾವಿಡ್ ಮನವಿಯನ್ನು ಪುರಸ್ಕರಿಸಿದ ಬಿಸಿಸಿಐ, ಅವರ ಅಭಿಪ್ರಾಯವನ್ನು ಗೌರವಿಸುವುದಾಗಿ ಹೇಳಿದೆ.
ರಾಹುಲ್ ನಿರ್ಧಾರಕ್ಕೆ ಕಾರಣವೇನು?
ಕೋಚ್ ಆಗಿ ಟೀಂ ಇಂಡಿಯಾ ಸೇರಿದ ದಿನದಿಂದ ದ್ರಾವಿಡ್, ಭಾರತದ ತಂಡದ ಪ್ರತಿ ಸಿಬ್ಬಂದಿಯನ್ನೂ ಸಮನಾಗಿ ಕಂಡಿದ್ದಾರೆ. ಯಾರಿಗೂ ತಾರತಮ್ಯ ಮಾಡದೇ, ಇಲ್ಲರನ್ನೂ ಒಂದೇ ರೀತಿ ಕಂಡು ಮೆಚ್ಚುಗೆ ಗಳಿಸಿದವರು. ನಡೆ, ನುಡಿಯಿಂದ ತಂಡದಲ್ಲಿ ಒಗ್ಗಟ್ಟಿನ ಮಂತ್ರವನ್ನು ಜಪಿಸಿದ್ದ ದ್ರಾವಿಡ್ ಅವರ ಈ ನಿರ್ಧಾರದ ಹಿಂದೆಯೂ ಒಂದು ದೊಡ್ಡ ಕಾರಣ ಇದೆ.
ವಿಷಯ ಏನೆಂದರೆ 125 ಕೋಟಿ ರೂಪಾಯಿ ಮೊತ್ತದ ಬಹುಮಾನದಲ್ಲಿ ತಂಡಕ್ಕೆ ಆಯ್ಕೆ ಆಗಿದ್ದ 15 ಆಟಗಾರರಿಗೆ ತಲಾ 5 ಕೋಟಿ ರೂಪಾಯಿ ನೀಡೋದಾಗಿ ಬಿಸಿಸಿಐ ಹೇಳಿತ್ತು. ಅವರ ಜೊತೆ ಮುಖ್ಯ ಕೋಚ್ ದ್ರಾವಿಡ್ಗೂ ಐದು ಕೋಟಿ ಸಿಗಲಿದೆ ಎಂದು ಬಿಸಿಸಿಐ ಹೇಳಿತ್ತು.
ಉಳಿದಂತೆ ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಸೇರಿದಂತೆ ಇತರೆ ಕೋಚ್ ಸಿಬ್ಬಂದಿಗೆ ತಲಾ 2.5 ಕೋಟಿ ರೂಪಾಯಿ ನೀಡೋದಾಗಿ ಹೇಳಿತ್ತು. ದ್ರಾವಿಡ್ ಅವರು ತಂಡದಲ್ಲಿದ್ದ ಎಲ್ಲಾ ಕೋಚ್ಗಳಿಗೂ ಹಣ ನೀಡಿದಂತೆ ತಮಗೂ ನೀಡಿ. ಹೆಚ್ಚುವರಿಯಾಗಿ ನನಗೆ ಏನೂ ಬೇಡ. ಅವರಂತೆ ನಾನೂ ಸಮ ಎಂದು ಬಿಸಿಸಿಐ ಬಳಿ ಮನವಿ ಮಾಡಿಕೊಂಡಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಜಾಮಿ ಸಮಾನತೆ ನಡೆ ಇದೇ ಮೊದಲಲ್ಲ
ದ್ರಾವಿಡ್ ಅವರು ಹೀಗೆ ಮಾಡಿದ್ದು ಇದೇ ಮೊದಲಲ್ಲ. 2018ರಲ್ಲಿ ನಡೆದ U-19 ವಿಶ್ವಕಪ್ನಲ್ಲಿ ಭಾರತ ತಂಡ ವಿಶ್ವಕಪ್ಗೆ ಮುತ್ತಿಟ್ಟಿತ್ತು. ಈ ವೇಳೆ ಹೆಡ್ ಮಾಸ್ಟರ್ ದ್ರಾವಿಡ್ಗೆ ಬಿಸಿಸಿಐ 50 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಹೇಳಿತ್ತು. ಜೊತೆಗೆ ಇತರೆ ಕೋಚ್ಗಳಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಹೇಳಿತ್ತು.
ಬಿಸಿಸಿಐ ಈ ನಿಲುವನ್ನು ದ್ರಾವಿಡ್ ಅಂದು ಕೂಡ ವಿರೋಧಿಸಿದ್ದರು. ದ್ರಾವಿಡ್ ಒತ್ತಾಯಕ್ಕೆ ಮಣಿದಿದ್ದ ಬಿಸಿಸಿಐ, ಇತರೆ ಕೋಚ್ ಸಿಬ್ಬಂದಿಗೆ ನೀಡಿದಂತೆ 25 ಲಕ್ಷ ರೂಪಾಯಿ ಹಣವನ್ನು ದ್ರಾವಿಡ್ಗೆ ಬಿಸಿಸಿಐ ನೀಡಿತ್ತು.