ವಿಂಡೀಸ್ ವಿರುದ್ಧ ಉಗಾಂಡಗೆ ಸೋಲು 
ಕ್ರಿಕೆಟ್

ICC T20 WC 2024: ಕಳಪೆ ಬ್ಯಾಟಿಂಗ್, ಭರ್ಜರಿ ಬೌಲಿಂಗ್; ಉಗಾಂಡ vs ವಿಂಡೀಸ್ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಾಣ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉಗಾಂಡ vs ವಿಂಡೀಸ್ ಪಂದ್ಯದಲ್ಲಿ ಹಲವು ದಾಖಲೆಗಳ ನಿರ್ಮಾಣವಾಗಿದ್ದು, ಈ ಪಂದ್ಯದಲ್ಲಿ ಉಗಾಂಡ ತಂಡ ಕೇವಲ 39ರನ್ ಗಳಿಗೆ ಆಲೌಟ್ ಆಗಿದೆ.

ಗಯಾನಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉಗಾಂಡ vs ವಿಂಡೀಸ್ ಪಂದ್ಯದಲ್ಲಿ ಹಲವು ದಾಖಲೆಗಳ ನಿರ್ಮಾಣವಾಗಿದ್ದು, ಈ ಪಂದ್ಯದಲ್ಲಿ ಉಗಾಂಡ ತಂಡ ಕೇವಲ 39ರನ್ ಗಳಿಗೆ ಆಲೌಟ್ ಆಗಿದೆ.

ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್ ನೀಡಿದ 174ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಉಗಾಂಡ ಕೇವಲ 39ರನ್ ಗಳಿಗೆ ಆಲೌಟ್ ಆಗಿದೆ. ತಂಡದ ಪರ ಕೆಳ ಕ್ರಮಾಂಕದ ಜುಮಾ ಮಿಯಾಗಿ (ಅಜೇಯ 13) ಅವರನ್ನು ಹೊರತುಪಡಿಸಿ ತಂಡದ ಉಳಿದಾವ ಆಟಗಾರರೂ ಎರಡಂಕಿ ಮೊತ್ತ ದಾಟಿಲ್ಲ.

12 ಓವರ್ ನಲ್ಲೇ ಉಗಾಂಡ 39 ರನ್ ಗಳಿಗೇ ಆಲೌಟ್ ಆಯಿತು. ವಿಂಡೀಸ್ ಪರ ಅಕೀಲ್ ಹೊಸೇನ್ 5 ವಿಕೆಟ್ ಪಡೆದು ಉಗಾಂಡ ಪತನಕ್ಕೆ ಕಾರಣರಾದರು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 134 ರನ್ ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದೆ.

ಹಲವು ದಾಖಲೆಗಳ ನಿರ್ಮಾಣ

ಇನ್ನು ಈ ಪಂದ್ಯದಲ್ಲಿ ಹಲವು ದಾಖಲೆಗಳ ನಿರ್ಮಾಣವಾಗಿದ್ದು, ಪ್ರಮುಖವಾಗಿ ಕೇವಲ 39ರನ್ ಗಳಿಗೆ ಉಗಾಂಡ ಆಲೌಟ್ ಆಗಿದೆ. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ 2ನೇ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ 2014ರಲ್ಲಿ ನೆದರ್​ಲ್ಯಾಂಡ್ಸ್ ತಂಡವು 39 ರನ್​ಗಳಿಗೆ ಆಲೌಟ್ ಆಗಿತ್ತು. ಇದೀಗ ಉಗಾಂಡ ಈ ಕಳಪೆ ದಾಖಲೆಯನ್ನು ಸರಿಗಟ್ಟಿದೆ.

Lowest all-out totals in T20 WCs

  • 39 - NED vs SL, Chattogram, 2014

  • 39 - UGA vs WI, Providence, 2024*

  • 44 - NED vs SL, Sharjah, 2021

  • 55 - WI vs ENG, Dubai, 2021

  • 58 - UGA vs AFG, Guyana, 2024

ವಿಂಡೀಸ್ ಪರ ಉತ್ತಮ ಬೌಲಿಂಗ್

ಇನ್ನು ಈ ಪಂದ್ಯದಲ್ಲಿ ವೆಸ್ಟ್ ತಂಡದ ಅಕೀಲ್ ಹೊಸೇನ್ 5 ವಿಕೆಟ್ ಪಡೆದು ಉಗಾಂಡ ಪತನಕ್ಕೆ ಕಾರಣರಾದರು. ಒಟ್ಟು 4 ಓವರ್ ಎಸೆದ ಅಕೀಲ್ 2.80 ಸರಾಸರಿಯಲ್ಲಿ 11 ರನ್ ನೀಡಿ 5 ಪ್ರಮುಖ ವಿಕೆಟ್ ಪಡೆದರು. ಅಕೀಲ್ ರ ಈ ಪ್ರದರ್ಶನ ವೆಸ್ಟ್ ಇಂಡೀಸ್ ಪರ ದಾಖಲಾದ 2ನೇ ಉತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಈ ಹಿಂದೆ 2022ರಲ್ಲಿ ಭಾರತ ತಂಡದ ವಿರುದ್ಧ ಒಬೆಡ್ ಮೆಕಾಯ್ ಕೇವಲ 17ರನ್ ನೀಡಿ 6 ವಿಕೆಟ್ ಪಡೆದಿದ್ದರು. ಇದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

Best bowling figures for West Indies in T20Is

  • 6/17 - Obed McCoy vs IND, Basseterre, 2022

  • 5/11 - Akeal Hosein vs UGA, Providence, 2024 (WC)

  • 5/15 - Keemo Paul vs BAN, Mirpur, 2018

  • 5/26 - Daren Sammy vs ZIM, Port of Spain, 2010

ವಿಶ್ವಕಪ್ ನಲ್ಲಿ 2ನೇ ಅತೀ ದೊಡ್ಡ ಜಯ

ಇನ್ನು ರನ್ ಗಳ ಲೆಕ್ಕಾಚಾರದಲ್ಲಿ ಉಂಗಾಡ ವಿರುದ್ಧ ವಿಂಡೀಸ್ ದಾಖಲಿಸಿದ 134 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ಟಿ20 ವಿಶ್ವಕಪ್ ನಲ್ಲಿ ಅತೀ ದೊಡ್ಡ ರನ್ ಗಳ ಅಂತರದಲ್ಲಿ ಸಿಕ್ಕ 2ನೇ ದಾಖಲೆಯ ಜಯ ಇದಾಗಿದೆ. ಈ ಹಿಂದೆ 2007ರಲ್ಲಿ ಕೀನ್ಯಾ ವಿರುದ್ಧ ಶ್ರೀಲಂಕಾ ತಂಡ 172ರನ್ ಗಳ ಅಂತರದ ಜಯ ದಾಖಲಿಸಿತ್ತು. ಇದು ಅಗ್ರಸ್ಥಾನದಲ್ಲಿದೆ.

Biggest wins margin in T20 WCs (by runs)

  • 172 - SL vs KENYA, Jo'burg, 2007

  • 134 - WI vs UGA, Providence, 2024*

  • 130 - AFG vs SCO, Sharjah, 2021

  • 130 - SA vs SCO, The Oval, 2009

  • 125 - AFG vs UGA, Providence, 2024

ಸತತ ಟಿ20 ಜಯ

ಈ ಟೂರ್ನಿಯಲ್ಲಿ ಉಗಾಂಡ ವಿರುದ್ಧ ಜಯ ದಾಖಲಿಸುವ ಮೂಲಕ ವಿಂಡೀಸ್ ತಂಡ 2024ರಲ್ಲಿ ಸತತ 6ನೇ ಟಿ20 ಪಂದ್ಯದಲ್ಲಿ ಜಯ ದಾಖಲಿಸಿದೆ. ಈ ಹಿಂದೆ 2012-13ರಲ್ಲಿ ವಿಂಡೀಸ್ ತಂಡ ಸತತ 7 ಪಂದ್ಯಗಳಲ್ಲಿ ಜಯ ದಾಖಲಿಸಿತ್ತು.

Most consecutive wins for West Indies in T20Is

  • 7 in 2012-13

  • 6 in 2024*

  • 5 in 2017

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT