ಕ್ರಿಕೆಟ್ ನಲ್ಲಿ Stop Clock ನಿಯಮ ಕಡ್ಡಾಯ 
ಕ್ರಿಕೆಟ್

T20 World Cupನಲ್ಲಿ ಮಹತ್ವದ ಬದಲಾವಣೆ; Stop Clock ಕಡ್ಡಾಯ ಸೇರಿ ಹಲವು ಹೊಸ ನಿಯಮಗಳ ಜಾರಿಗೆ ತಂದ ICC

ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಸೀಮಿತ ಓವರ್ ಕ್ರಿಕೆಟ್ ಮಾದರಿಯಲ್ಲಿ ಮಹತ್ತರ ಬದಲಾವಣೆಗಳನ್ನು ಜಾರಿಗೆ ತಂದಿದೆ.

ದುಬೈ: ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಸೀಮಿತ ಓವರ್ ಕ್ರಿಕೆಟ್ ಮಾದರಿಯಲ್ಲಿ ಮಹತ್ತರ ಬದಲಾವಣೆಗಳನ್ನು ಜಾರಿಗೆ ತಂದಿದೆ.

ಹೌದು.. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಶುಕ್ರವಾರ ದುಬೈನಲ್ಲಿ ನಡೆದ ವಾರ್ಷಿಕ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಅವುಗಳಲ್ಲಿ ಒಂದು ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಜಂಟಿ ವಿಜೇತರನ್ನು ಘೋಷಿಸುವುದನ್ನು ತಪ್ಪಿಸಲು ಸೆಮಿಫೈನಲ್ ಮತ್ತು ಫೈನಲ್‌ಗೆ ಮೀಸಲು ದಿನಗಳನ್ನು ಇರಿಸಲು ನಿರ್ಧರಿಸಿದೆ.

Stop Clock ಕಡ್ಡಾಯ

ಐಸಿಸಿ ಸಭೆಯಲ್ಲಿ ಮಹತ್ವದ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಜೊತೆಗೆ T20 ವಿಶ್ವಕಪ್ 2024 ರಿಂದ ಪ್ರಾರಂಭವಾಗುವ ಸೀಮಿತ-ಓವರ್‌ಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಓವರ್‌ಗಳ ನಡುವೆ ಸ್ಟಾಪ್-ಕ್ಲಾಕ್ (stop-clock) ಅನ್ನು ಬಳಸುವುದು ಕಡ್ಡಾಯಗೊಳಿಸಿದೆ. ಈ ಮೂಲಕ ಶುಕ್ರವಾರ ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಮಹತ್ವದ ನಿರ್ಧಾರಕ್ಕೆ ಮುದ್ರೆ ಬಿದ್ದಿದೆ. ಇದರ ಜೊತೆಗೆ T20 ವಿಶ್ವಕಪ್ 2024 ರಿಂದ ಪ್ರಾರಂಭವಾಗುವ ಸೀಮಿತ-ಓವರ್‌ಗಳ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಓವರ್‌ಗಳ ನಡುವೆ ಸ್ಟಾಪ್-ಕ್ಲಾಕ್ ಅನ್ನು ಬಳಸುವುದು ಕಡ್ಡಾಯಗೊಳಿಸಿದೆ. ಮಂಡಳಿಯು ಪುರುಷರ T20 ವಿಶ್ವಕಪ್ 2024 ನೀತಿಯನ್ನು ಸಹ ಅನುಮೋದಿಸಿದೆ ಎಂದು ತಿಳಿದುಬಂದಿದೆ.

ಡಿಸೆಂಬರ್ 2023ರಲ್ಲಿ, ಪುರುಷರ ಸೀಮಿತ-ಓವರ್‌ಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ICC ಸ್ಟಾಪ್ ಕ್ಲಾಕ್​ ನಿಯಮವನ್ನು ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಿತ್ತು. ಈ ನಿಯಮದಿಂದಾಗಿ ODI ಪಂದ್ಯಕ್ಕೆ ಸರಿಸುಮಾರು 20 ನಿಮಿಷಗಳನ್ನು ಉಳಿಸಿದಂತಾಗುತ್ತದೆ ದತ್ತಾಂಶಗಳು ತೋರಿಸಿದೆ. ಇದೀಗ ಈ ಸ್ಟಾಪ್​ ಕ್ಲಾಕ್​​ ನಿಯಮವನ್ನು ಐಸಿಸಿ ಜಾರಿಗೆ ಅಧಿಕೃತವಾಗಿ ತಂದಿದ್ದು, ಟಿ20 ವಿಶ್ವಕಪ್​ನಿಂದಲೇ ಇದು ಜಾರಿಯಾಗಲಿದೆ.

ಪರದೆ ಮೇಲೆ ಸ್ಟಾಪ್ ಕ್ಲಾಕ್

ಪುರುಷರ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಪ್ರಾಯೋಗಿಕ ಸ್ಟಾಪ್ ಕ್ಲಾಕ್ ನಿಯಮದ ಪ್ರಕಾರ, ಫೀಲ್ಡಿಂಗ್ ತಂಡವು ಹಿಂದಿನ ಓವರ್‌ನ ಅಂತ್ಯದ ನಂತರ 60 ಸೆಕೆಂಡುಗಳಲ್ಲಿ ಹೊಸ ಓವರ್ ಅನ್ನು ಪ್ರಾರಂಭಿಸಬೇಕು. ಇದು 60 ಸೆಕೆಂಡ್​​ನಿಂದ ಶೂನ್ಯಕ್ಕೆ ಎಣಿಸುವ ಎಲೆಕ್ಟ್ರಾನಿಕ್ ಗಡಿಯಾರವನ್ನು ಓವರ್​ ಬಳಿಕ ಡಿಸ್​ಪ್ಲೇ ಮೇಲೆ ಹಾಕಲಾಗುತ್ತದೆ. ಗಡಿಯಾರದ ಪ್ರಾರಂಭವನ್ನು ನಿರ್ಧರಿಸುವ ಜವಾಬ್ದಾರಿಯನ್ನು ಮೂರನೇ ಅಂಪೈರ್ ಹೊಂದಿರುತ್ತಾರೆ. ಹಿಂದಿನ ಓವರ್‌ನ ಅಂತ್ಯದ ನಂತರ ನಿಗದಿತ 60 ಸೆಕೆಂಡ್‌ಗಳ ಒಳಗೆ ತಮ್ಮ ಮುಂದಿನ ಓವರ್‌ನ ಮೊದಲ ಎಸೆತವನ್ನು ಬೌಲ್ ಮಾಡಲು ಸಿದ್ಧರಾಗಬೇಕಾಗುತ್ತದೆ.

ನಿಯಮ ತಪ್ಪಿದರೆ ದಂಡ, ಪೆನಾಲ್ಟಿ ರನ್

ಒಂದು ವೇಳೆ 60 ಸೆಕೆಂಡ್​ ಒಳಗೆ ಬೌಲಿಂಗ್​ ಮಾಡದಿದ್ದಲ್ಲಿ ಪ್ರತಿ ವಿಳಂಬಕ್ಕೂ ಸಹ ಐದು ರನ್‌ಗಳ ಪೆನಾಲ್ಟಿ ಹೊರೆ ಬೀಳಲಿದೆ. ಈ ಸ್ಟಾಪ್​ ಕ್ಲಾಕ್​ ನಿಯಮ ಟಿ20 ವಿಶ್ವಕಪ್​ನಿಂದ ಜಾರಿಗೆ ಬರಲಿದೆ. ಅಲ್ಲದೇ ಈ ನಿಯಮವನ್ನು ಶಾಸ್ವತಗೊಳಿಸಲಾಗಿದ್ದು, ಮುಂಬರುವ ಟಿ20 ಮತ್ತು ಏಕದಿನ ಮಾದರಿ ಕ್ರಿಕೆಟ್​ಗೆ ಈ ನಿಯಮ ಅನ್ವಯವಾಗುತ್ತದೆ ಎಂದು ಐಸಿಸಿ ತಿಳಸಿದೆ. ಈ ನಿಯಮ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಐಸಿಸಿ ತಿಳಿಸಿದೆ.

ವಿನಾಯಿತಿ

ಈ ನಿಯಮಕ್ಕೆ ಕೆಲವು ವಿನಾಯಿತಿಗಳಿದ್ದು, ಗಡಿಯಾರವು ಮೊದಲೇ ಪ್ರಾರಂಭಿಸಿದ್ದರೆ ಕೆಲವು ಸಂದರ್ಭಗಳಲ್ಲಿ ರದ್ದುಗೊಳಿಸಬಹುದು. ಅವುಗಳೆಂದರೆ ಓವರ್‌ನ ಸಮಯದಲ್ಲಿ ಹೊಸ ಬ್ಯಾಟರ್ ಕ್ರೀಸ್ ಗೆ ಬಂದಾಗ, ಪಾನೀಯಗಳ ವಿರಾಮದ ವೇಳೆ, ಬ್ಯಾಟರ್ ಅಥವಾ ಫೀಲ್ಡರ್‌ಗೆ ಗಾಯವಾದಾಗ ಮೈದಾನದಲ್ಲಿ ಚಿಕಿತ್ಸೆಯನ್ನು ಅಂಪೈರ್‌ಗಳು ಅಧಿಕೃತಗೊಳಿಸಿದಾಗ ಮತ್ತು ಫೀಲ್ಡಿಂಗ್ ತಂಡದ ನಿಯಂತ್ರಣಕ್ಕೆ ಮೀರಿದ ಯಾವುದೇ ಸ್ಥಿತಿಯಾದರೆ ಅಂದರೆ ಚೆಂಡು ಬದಲಾವಣೆಯಂತಹ ಸಮಯದಲ್ಲಿ ಈ ನಿಯಮ ರದ್ದಾಗುತ್ತದೆ. ಇದಲ್ಲದೆ ಫೀಲ್ಡಿಂಗ್ ತಂಡದ ನಿಯಂತ್ರಣಕ್ಕೆ ಮೀರಿದ ಯಾವುದೇ ಸಂದರ್ಭಗಳಲ್ಲ ಈ ಸ್ಟಾಪ್ ಕ್ಲಾಕ್ ಅನ್ನು ಫೀಲ್ಡ್ ಅಂಪೈರ್ ಗಳು ರದ್ದು ಮಾಡಬಹುದಾಗಿರುತ್ತದೆ.

ಟಿ20 ವಿಶ್ವಕಪ್‌ಗೆ ಅರ್ಹತಾ ಸುತ್ತು

ಐಸಿಸಿ ಮಂಡಳಿಯು 2024 ರ ಪುರುಷರ ಟಿ20 ವಿಶ್ವಕಪ್‌ಗೆ ಆಟದ ಪರಿಸ್ಥಿತಿಗಳನ್ನು ಅನುಮೋದಿಸಿದ್ದು, 2026 ರ ಆವೃತ್ತಿಯ ಅರ್ಹತಾ ಪ್ರಕ್ರಿಯೆಯನ್ನು ಪ್ರಕಟಿಸಿದೆ" ಎಂದು ಕೌನ್ಸಿಲ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

SCROLL FOR NEXT