ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ 
ಕ್ರಿಕೆಟ್

IPL 2022 ವೇಳೆ ವೈಫಲ್ಯದಿಂದ ಹೊರಬರಲು ಉತ್ಸಾಹ ತುಂಬಿದ್ದು ಇವರೇ! ಡಿಕೆ ಜೊತೆಗಿನ ವಿಶೇಷ ಬಾಂಧವ್ಯ ಸ್ಮರಿಸಿದ ಕೊಹ್ಲಿ

ಆರ್‌ಸಿಬಿಯ ಐಪಿಎಲ್ ಅಭಿಯಾನದ ಕೊನೆಯಲ್ಲಿ ದಿನೇಶ್ ಕಾರ್ತಿಕ್ ನಿವೃತ್ತಿಯಾದ ನಂತರ ಅವರಿಗೆ ಪ್ರೀಮಿಯರ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಗೌರವ ಸಲ್ಲಿಸಿದ್ದಾರೆ.IPL 2022 ವೇಳೆ ತಾನು ಸಾಲು ಸಾಲು ವೈಫಲ್ಯಕ್ಕೊಳಗಾದಾಗ ಅದರಿಂದ ಹೊರಬರಲು ತಮ್ಮಲ್ಲಿ ಉತ್ಸಾಹವನ್ನು ಹೆಚ್ಚಿಸಿದ ಬುದ್ಧಿವಂತ ಮತ್ತು ಪ್ರಾಮಾಣಿಕ ವ್ಯಕ್ತಿ ಡಿಕೆ ಎಂದು ಬಣ್ಣಿಸಿದರು.

ಬೆಂಗಳೂರು: ಆರ್‌ಸಿಬಿಯ ಐಪಿಎಲ್ ಅಭಿಯಾನದ ಕೊನೆಯಲ್ಲಿ ದಿನೇಶ್ ಕಾರ್ತಿಕ್ ನಿವೃತ್ತಿಯಾದ ನಂತರ ಅವರಿಗೆ ಪ್ರೀಮಿಯರ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಗೌರವ ಸಲ್ಲಿಸಿದ್ದಾರೆ.IPL 2022 ವೇಳೆ ತಾನು ಸಾಲು ಸಾಲು ವೈಫಲ್ಯಕ್ಕೊಳಗಾದಾಗ ಅದರಿಂದ ಹೊರಬರಲು ತಮ್ಮಲ್ಲಿ ಉತ್ಸಾಹವನ್ನು ಹೆಚ್ಚಿಸಿದ ಬುದ್ಧಿವಂತ ಮತ್ತು ಪ್ರಾಮಾಣಿಕ ವ್ಯಕ್ತಿ ಡಿಕೆ ಎಂದು ಬಣ್ಣಿಸಿದರು. 2015 ರ ನಂತರ ಕೆಕೆಆರ್ ನಿಂದ 2022 ರಲ್ಲಿ ಎರಡನೇ ಬಾರಿಗೆ ಆರ್ ಸಿಬಿ ಸೇರಿದ 38 ವರ್ಷದ ದಿನೇಶ್ ಕಾರ್ತಿಕ್, ಬುಧವಾರ ತಮ್ಮ ಐಪಿಎಲ್ ವಿದಾಯದ ಪಂದ್ಯವನ್ನಾಡಿದರು. ನಂತರ ರಾಜಸ್ಥಾನ ರಾಯಲ್ಸ್ , RCBಯನ್ನು ಪ್ಲೇ ಆಫ್ ನಿಂದ ಹೊರಹಾಕಿತು.

"ಫೀಲ್ಡ್‌ನ ಹೊರಗೆ, ಅವರೊಂದಿಗೆ ಕೆಲವು ಉತ್ತಮ ಮತ್ತು ಆಸಕ್ತಿದಾಯಕ ಸಂಭಾಷಣೆಗಳನ್ನು ನಡೆಸಿದ್ದೇನೆ. ಅವರು ಬುದ್ಧಿವಂತ ವ್ಯಕ್ತಿ, ಮತ್ತು ಕ್ರಿಕೆಟ್ ಮಾತ್ರವಲ್ಲದೆ ಬಹಳಷ್ಟು ವಿಷಯಗಳ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದಾರೆ" ಎಂದು ಆರ್‌ಸಿಬಿ ಪೋಸ್ಟ್ ಮಾಡಿದ ವಿಶೇಷ ವಿಡಿಯೋದಲ್ಲಿ ಕೊಹ್ಲಿ ಹೇಳಿದ್ದಾರೆ. 11 ನಿಮಿಷಕ್ಕಿಂತ ಕಡಿಮೆ ಅವಧಿಯ ವೀಡಿಯೊ ಕಾರ್ತಿಕ್ ಅವರ ಪತ್ನಿ ದೀಪಿಕಾ ಪಲ್ಲಿಕಲ್ ಕಾರ್ತಿಕ್, ಅವರ ವೈಯಕ್ತಿಕ ಮಾರ್ಗದರ್ಶಕರಾದ ಅಭಿಷೇಖಕ್ ನಾಯರ್, ಆರ್ ಸಿಬಿ ಸಹಾಯಕ ಕೋಚ್, ಮಾಲೋಲಾನ್ ರಂಗರಾಜನ್, ಫಿಟ್ನೆಸ್ ಕೋಚ್ ಶಂಕರ್ ಬಸು ಅವರ ಹಾರೈಕೆಯ ಮಾತುಗಳನ್ನು ಒಳಗೊಂಡಿದೆ.

2022ರ ಸೀಸನ್ ನೆಪಿಸಿಕೊಂಡಿರುವ ಕೊಹ್ಲಿ, ಆಗ 16 ಪಂದ್ಯಗಳಿಂದ 341 ರನ್ ಗಳೊಂದಿಗೆ ಕೇವಲ 22. 73 ಸರಾಸರಿಯಲ್ಲಿದ್ದಾಗ ರಾಜಸ್ಥಾನ ರಾಯಲ್ಸ್ ಎದುರು ಫೈನಲ್ ನಲ್ಲಿ ಸೋತಾಗ ದಿನೇಶ್ ಕಾರ್ತಿಕ್ ಜೊತೆಗಿನ ಸಂಭಾಷಣೆಯನ್ನು ಸಂಪೂರ್ಣವಾಗಿ ಆನಂದಿಸಿದೆ. ಆ ಸಂದರ್ಭದಲ್ಲಿ ವೈಫಲ್ಯದಿಂದ ಹೊರಬರಲು ಕಷ್ಟಪಡುತ್ತಿದೆ. ಅವರು ನನ್ನನ್ನು ಒಂದೆರಡು ಬಾರಿ ಕೂರಿಸಿಕೊಂಡು, ಕೆಲವೊಂದು ವಿಷಯಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಹಂಚಿಕೊಂಡರು. ಬಹುಶಃ ನಾನೇ ಅವರನ್ನು ಆ ರೀತಿಯಲ್ಲಿ ನೋಡಲು ಸಾಧ್ಯವಾಗಲಿಲ್ಲ ಎಂದು ಕೊಹ್ಲಿ ಹೇಳಿದರು.

ಐಪಿಎಲ್ ಆರಂಭವಾದಾಗಿನಿಂದಲೂ ಎಲ್ಲಾ ಆವೃತ್ತಿಗಳಲ್ಲಿ ಆಡಿರುವ ಕಾರ್ತಿಕ್, ಕೆಕೆಆರ್ ಸೇರಿದಂತೆ ಆರು ಪ್ರಾಂಚೈಸಿಗಳಲ್ಲಿ ಆಡಿದ್ದಾರೆ. 257 ಪಂದ್ಯಗಳಲ್ಲಿ 22 ಅರ್ಧ ಶತಕದೊಂದಿಗೆ 4,842 ರನ್ ಗಳಿಸಿದ್ದಾರೆ. ನನಗೆ ದಿನೇಶ್ ಕಾರ್ತಿಕ್ ಅವರ ಪ್ರಾಮಾಣಿಕತೆ ಇಷ್ಟವಾಗಿದೆ. ಅವರಿಗೆ ನಿಜವಾಗಿಯೂ ಇಷ್ಟವಾಗುವ ವ್ಯಕ್ತಿಗಳೊಂದಿಗೆ ಮುಕ್ತವಾಗಿ ಮಾತನಾಡುತ್ತಾರೆ. ಅವರ ವಿಷಯ ಬಂದಾಗ ಅವರು ವಿಶೇಷ ವ್ಯಕ್ತಿಯಾಗಿ ಕಾಣುತ್ತಾರೆ. ಇದೇ ನಾನು ಅವರನ್ನು ಯಾವಾಗಲೂ ಪ್ರೀತಿಸಲು ಕಾರಣ ಎಂದು ಕೊಹ್ಲಿ ಹೇಳಿದ್ದಾರೆ.

ಕಾರ್ತಿಕ್ ತಾಂತ್ರಿಕವಾಗಿ "ಸರಿಯಾದ" ಮತ್ತು ಬಹುಮುಖ ಬ್ಯಾಟರ್ ಎಂದು ಶ್ಲಾಘಿಸಿರುವ ಕೊಹ್ಲಿ, ಅವರ ಶಾಟ್ ಗಳನ್ನು ನೋಡಿದ್ದೇನೆ, ಹೆಸರಾಂತ ಫಿನಿಶರ್ ಆಗಲು ಅದ್ಭುತವಾಗಿ ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರ ಮುಂದಿನ ಎಲ್ಲಾ ಪ್ರಯತ್ನಗಳು ಮುಂದುವರಿಯಲು ಶುಭ ಹಾರೈಸುತ್ತೇನೆ. ಕೆಲವು ಸಾಮರ್ಥ್ಯದಲ್ಲಿ RCB ಫ್ರಾಂಚೈಸಿಗೆ ಅವರು ಸಂಪರ್ಕದಲ್ಲಿರುತ್ತಾರೆ ಎಂದು ಕೊಹ್ಲಿ ಆಶಿಸಿದ್ದಾರೆ.

2009 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಸಂದರ್ಭದಲ್ಲಿ ಕಾರ್ತಿಕ್ ಅವರೊಂದಿಗಿನ ತನ್ನ ಮೊದಲ ಭೇಟಿಯನ್ನು ನೆನಪಿಸಿಕೊಂಡ ಕೊಹ್ಲಿ, ಮೊದಲಿಗೆ ಅವರು ಹೈಪರ್ ಆಕ್ಟಿವ್ ಮತ್ತು ಗೊಂದಲಮಯ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

ದಿನೇಶ್ ಜೊತೆಗೆ ಮೊದಲ ಬಾರಿಗೆ ರೂಮ್ ಹಂಚಿಕೊಂಡಾಗ ಅವರು ತುಂಬಾ ವಿನೋದಮಯವಾಗಿರುವುದನ್ನುಕಂಡುಕೊಂಡೆ. “ಹೆಚ್ಚಾಗಿ ಎಲ್ಲ ಕಡೆ ಓಡಾಡುತ್ತಿದ್ದರು. ಅದು ದಿನೇಶ್ ಅವರ ಮೊದಲ ಇಂಫ್ರೆಶನ್ ಆಗಿತ್ತು. "ಅವರು ಅತ್ಯುತ್ತಮ ಪ್ರತಿಭೆ, ಅದ್ಭುತ ಬ್ಯಾಟರ್ ಮತ್ತು ನನ್ನ ಮೊದಲ ಅನಿಸಿಕೆ ಮತ್ತು ಇಂದಿನ ಅನಿಸಿಕೆ ದೂರವಿಲ್ಲ. ಅವರು ಬುದ್ಧಿವಂತರಾಗಿದ್ದು, ಸಾಕಷ್ಟು ಶಾಂತವಾಗಿದ್ದಾರೆ" ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT