

ಭಾರತ ಇಂದು ಐಸಿಸಿ ಅಂಡರ್-19 ವಿಶ್ವಕಪ್ 2026ರ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 411 ರನ್ ಪೇರಿಸಿದೆ. ಭಾರತದ ಸ್ಟಾರ್ ಬ್ಯಾಟರ್ ವೈಭವ್ ಸೂರ್ಯವಂಶಿ 175 ರನ್ ಗಳ ಸ್ಫೋಟಕ ಬ್ಯಾಟಿಂಗ್ ಮಾಡಿದರು.
ಹರಾರೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಪರ ನಾಯಕ ಆಯುಷ್ ಮ್ಹಾತ್ರೆ ಕೂಡ 53 ರನ್ ಗಳಿಸಿದರು. ಅಭಿಗ್ಯಾನ್ ಕುಂಡು 40, ಕನಿಷ್ಕ್ ಚೌಹಾಣ್ ಅಜೇಯ 37 ಮತ್ತು ವೇದಾಂತ್ ತ್ರಿವೇದಿ 32 ರನ್ ಗಳಿಸಿದರು. ಜೇಮ್ಸ್ ಮಿಂಟೊ ಇಂಗ್ಲೆಂಡ್ ಪರ ಮೂರು ವಿಕೆಟ್ ಪಡೆದರು. ಭಾರತ ಇಂಗ್ಲೆಂಡ್ ತಂಡಕ್ಕೆ 412 ರನ್ ಗಳ ರನ್ ಗುರಿ ನೀಡಿದೆ.
ಟೀಮ್ ಇಂಡಿಯಾ ತನ್ನ ಆರನೇ ಟ್ರೋಫಿ ಗೆಲುವಿನತ್ತ ಕಣ್ಣಿಟ್ಟಿದೆ. 2000, 2008, 2012, 2018 ಮತ್ತು 2022ರಲ್ಲಿ ಟ್ರೋಫಿಯನ್ನು ಎತ್ತಿ ಹಿಡಿದಿರುವ ಭಾರತ ಈ ಪಂದ್ಯಾವಳಿಯಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ಈಗ, ಆಯುಷ್ ಮ್ಹಾತ್ರೆ ಅವರ ನಾಯಕತ್ವದಲ್ಲಿ, ತಂಡವು ಮತ್ತೊಮ್ಮೆ ಪ್ರಶಸ್ತಿ ಗೆಲುವನ್ನು ಬಯಸುತ್ತಿದೆ.
Advertisement