ಅಫೀಫ್ ಹುಸೇನ್ 
ಕ್ರಿಕೆಟ್

ಕ್ರಿಕೆಟ್ ಲೋಕದಲ್ಲಿ ಶೋಕದ ಅಲೆ: ಕುಸಿದು ಬಿದ್ದು 28 ವರ್ಷಕ್ಕೆ ಕ್ರಿಕೆಟಿಗ ಸಾವು!

ಆಸಿಫ್ ಸಾವಿನಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಯಾರೂ ನಂಬಲು ಸಿದ್ಧರಿಲ್ಲ. ಆಸಿಫ್ ಹುಸೇನ್ ಬಂಗಾಳದ ಸಮರ್ಪಿತ ಆಟಗಾರರಲ್ಲಿ ಒಬ್ಬರು.

ಕೋಲ್ಕತ್ತಾ: 28 ವರ್ಷದ ಬಂಗಾಳದ ಕ್ರಿಕೆಟಿಗ ಆಸಿಫ್ ಹುಸೇನ್ ಅಕಾಲಿಕ ನಿಧನರಾಗಿದ್ದಾರೆ. ಅಫೀಫ್ ಸಾವಿನ ದಾರುಣ ಘಟನೆಯಿಂದ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದೆ.

ಘಟನೆಗೆ ಮುನ್ನ ಆಸಿಫ್ ಹುಸೇನ್ ಅವರ ಸ್ಥಿತಿ ಚೆನ್ನಾಗಿತ್ತು ಎಂಬ ಮಾಹಿತಿ ಲಭಿಸಿದೆ. ಆತ ತಮ್ಮ ಮನೆಯ ಮೆಟ್ಟಿಲುಗಳಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಆಸಿಫ್ ನನ್ನು ನಗರದ ಪ್ರಸಿದ್ಧ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ಆಸಿಫ್ ಸಾವಿನಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಯಾರೂ ನಂಬಲು ಸಿದ್ಧರಿಲ್ಲ. ಆಸಿಫ್ ಹುಸೇನ್ ಬಂಗಾಳದ ಸಮರ್ಪಿತ ಆಟಗಾರರಲ್ಲಿ ಒಬ್ಬರು. ಅವರು ವಿವಿಧ ವಯೋಮಿತಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಬಂಗಾಳದ ಹಿರಿಯ ತಂಡಕ್ಕೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದ್ದರು.

ಆಸಿಫ್ ಹುಸೇನ್ ಇತ್ತೀಚೆಗೆ ಬಂಗಾಳ ಟಿ20 ಲೀಗ್‌ನಲ್ಲಿ 99 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಈ ವರ್ಷದ ಆರಂಭದಲ್ಲಿ, ಅವರು ಕ್ಲಬ್ ಕ್ರಿಕೆಟ್‌ನ ಮೊದಲ ವಿಭಾಗದಲ್ಲಿ ಸ್ಪೋರ್ಟಿಂಗ್ ಯೂನಿಯನ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಈ ಮೂಲಕ ಹಿರಿಯರ ತಂಡದಲ್ಲಿ ಸ್ಥಾನ ಪಡೆಯುವ ಸುಳಿವು ನೀಡಿದ್ದರು.

ಆಸಿಫ್ ಹುಸೇನ್ ಅವರ ನಿಧನದಿಂದ ಅವರ ಕುಟುಂಬ ತೀವ್ರ ದುಃಖಿತವಾಗಿದೆ. ಆಸಿಫ್ ನಿಧನಕ್ಕೆ ತಂಡದ ಸಹ ಆಟಗಾರರು ಸಂತಾಪ ಸೂಚಿಸಿದ್ದಾರೆ. ಹಿರಿಯ ಬಂಗಾಳ ತಂಡ ಅಭ್ಯಾಸದ ಅವಧಿಯಲ್ಲಿ ಮೌನ ಆಚರಿಸುವ ಮೂಲಕ ಆಸಿಫ್ಗೆ ಗೌರವ ಸಲ್ಲಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT