ಭಾರತ-ಬಾಂಗ್ಲಾದೇಶ ಪಂದ್ಯ 
ಕ್ರಿಕೆಟ್

3rd T20I: ಬಾಂಗ್ಲಾದೇಶ ವಿರುದ್ಧ ಸರಣಿ ಜಯದ ಬೆನ್ನಲ್ಲೇ ಪಾಕಿಸ್ತಾನ ಹಿಂದಿಕ್ಕಿದ ಭಾರತ!

ಹಾಲಿ ವರ್ಷದಲ್ಲಿ ಭಾರತ 21ನೇ ಅಂತಾರಾಷ್ಟ್ರೀಯ ಟಿ20 ಪಂದ್ಯದವನ್ನು ಗೆದ್ದಿದ್ದು ಆ ಮೂಲಕ 2021ರಲ್ಲಿ ಪಾಕಿಸ್ತಾನ ಸಾಧಿಸಿದ್ದ 20 ಜಯಗಳ ಸಾಧನೆಯನ್ನು ಹಿಂದಿಕ್ಕಿದೆ. ಕಳೆದ ವರ್ಷ ತಾಂಜೇನಿಯಾ ತಂಡ ಸಾಧಿಸಿದ್ದ 21 ಜಯಗಳ ದಾಖಲೆಯನ್ನು ಸರಿಗಟ್ಟಿದೆ.

ಹೈದರಾಬಾದ್: 3ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಸರಣಿ ಜಯ ಸಾಧಿಸಿದ ಭಾರತ ತಂಡ ಅದೇ ಗೆಲುವಿನ ಮೂಲಕ ಪಾಕಿಸ್ತಾನ ತಂಡವನ್ನೂ ಕೂಡ ಹಿಂದಿಕ್ಕಿದೆ.

ಹೌದು.. ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶವನ್ನು 133 ರನ್ ಗಳ ಅಂತರದಲ್ಲಿ ಮಣಿಸಿದ ಭಾರತ ತಂಡ 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿತು. ಅಲ್ಲದೆ ಈ ಜಯ ಮೂಲಕ ಪಾಕಿಸ್ತಾನ ತಂಡದ ದಾಖಲೆಯೊಂದನ್ನೂ ಭಾರತ ಹಿಂದಿಕ್ಕಿದೆ.

ಹಾಲಿ ವರ್ಷದಲ್ಲಿ ಭಾರತ 21ನೇ ಅಂತಾರಾಷ್ಟ್ರೀಯ ಟಿ20 ಪಂದ್ಯದವನ್ನು ಗೆದ್ದಿದ್ದು ಆ ಮೂಲಕ 2021ರಲ್ಲಿ ಪಾಕಿಸ್ತಾನ ಸಾಧಿಸಿದ್ದ 20 ಜಯಗಳ ಸಾಧನೆಯನ್ನು ಹಿಂದಿಕ್ಕಿದೆ. ಅಂತೆಯೇ ಕಳೆದ ವರ್ಷ ತಾಂಜೇನಿಯಾ ತಂಡ ಸಾಧಿಸಿದ್ದ 21 ಜಯಗಳ ದಾಖಲೆಯನ್ನು ಸರಿಗಟ್ಟಿದೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ 2023ರಲ್ಲಿ ಉಗಾಂಡ ತಂಡ 29 ಪಂದ್ಯಗಳಲ್ಲಿ ಜಯ ಸಾಧಿಸಿತ್ತು.

ಇದು ಈ ವರೆಗೆ ತಂಡವೊಂದು ಒಂದು ವರ್ಷದಲ್ಲಿ ಗಳಿಸಿದ ಅತಿಹೆಚ್ಚು ಗೆಲುವಾಗಿದೆ. ನಂತರದ ಸ್ಥಾನದಲ್ಲಿ ಭಾರತ ತಂಡ ಇದ್ದು, 2022ರಲ್ಲಿ ಭಾರತ 28 ಪಂದ್ಯಗಳನ್ನು ಗೆದ್ದಿತ್ತು. ಇದೀಗ 2ನೇ ಬಾರಿಗೆ ಇದೇ ಸಾಧನೆಯತ್ತ ದಾಪುಗಾಲಿರಿಸಿದೆ.

Most T20I wins in a calendar year

  • 29 - Uganda (2023)

  • 28 - India (2022)

  • 21 - Tanzania (2022)

  • 21* - India (2024)

  • 20 - Pakistan (2021)

ಅತೀ ಹೆಚ್ಚು ಬಾರಿ 200+ ರನ್ ಗಳಿಕೆ, ಅಗ್ರ ಸ್ಥಾನಕ್ಕೇರಿದ ಭಾರತ

ಇನ್ನು ಟಿ20 ಮಾದರಿಯಲ್ಲಿ ಅತಿಹೆಚ್ಚು ಬಾರಿ 200ಕ್ಕೂ ಅಧಿಕ ರನ್ ಗಳಿಸಿದ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನಕ್ಕೇರಿದೆ. ನಿನ್ನೆ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 297 ರನ್ ಗಳಿಸಿತ್ತು. ಈ ಪಂದ್ಯವೂ ಸೇರಿದಂತೆ ಭಾರತ ತಂಡ ಒಟ್ಟು 37 ಬಾರಿ 200ಕ್ಕೂ ಅಧಿಕ ರನ್ ಗಳಿಸಿದಂತಾಗಿದೆ. ಆ ಮೂಲಕ 36 ಬಾರಿ ಈ ಸಾಧನೆ ಮಾಡಿದ್ದ ಸೋಮರ್ಸೆಟ್ ತಂಡವನ್ನು ಹಿಂದಿಕ್ಕಿದೆ. ಇನ್ನು ಈ ಪಟ್ಟಿಯಲ್ಲಿ 35 ಬಾರಿ 200ಕ್ಕೂ ಅಧಿಕ ರನ್ ಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರನೇ ಸ್ಥಾನದಲ್ಲಿದ್ದು, 33 ಬಾರಿ ಈ ಸಾಧನೆ ಮಾಡಿದ RCB 4ನೇ ಸ್ಥಾನದಲ್ಲಿದೆ. ಅಂತೆಯೇ ಆಸ್ಟ್ರೇಲಿಯಾ ತಂಡ 23 ಬಾರಿ ಮಾತ್ರ 200ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದೆ.

Teams scoring 200-plus most often in Men’s T20 cricket

  • 37 - India

  • 36 - Somerset

  • 35 - CSK

  • 33 - RCB

  • 31 - Yorkshire

- The next most by a Men’s international team is 23 by Australia.

ಒಂದೇ ವರ್ಷದಲ್ಲಿ ಅಧಿಕ ಬಾರಿ 200ಕ್ಕೂ ಅಧಿಕ ರನ್; ತನ್ನದೇ ದಾಖಲೆ ಮುರಿಯುವತ್ತ ಭಾರತ

ಇನ್ನು ಒಂದು ವರ್ಷದಲ್ಲಿ ಅಧಿಕ ಬಾರಿ 200ಕ್ಕೂ ಅಧಿಕ ರನ್ ತಂಡಗಳ ಪಟ್ಟಿಯಲ್ಲಿ ಮತ್ತೆ ಭಾರತ ತಂಡ ರೇಸ್ ಗೆ ಬಿದಿದ್ದು, ಹಾಲಿ ವರ್ಷ ಒಟ್ಟು 6 ಬಾರಿ ಭಾರತ ತಂಡ 200ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದೆ.

ಆ ಮೂಲಕ ಇಂಗ್ಲೆಂಡ್ (2022) ಮತ್ತು ದಕ್ಷಿಣ ಆಫ್ರಿಕಾ (2022) ತಂಡಗಳನ್ನು ಸರಿಗಟ್ಟಿದ್ದು, ಇನ್ನೊಂದು ಬಾರಿ 200ಕ್ಕೂ ಅಧಿಕ ರನ್ ಗಳಿಸಿದರೆ ಜಪಾನ್ ದಾಖಲೆಯನ್ನು ಸರಿಗಟ್ಟಲಿದೆ. ಕಳೆದ ವರ್ಷ ಅಂದರೆ 2023ರಲ್ಲಿ ಭಾರತ ಒಟ್ಟು ಬಾರಿ ಸಾಧನೆ ಮಾಡಿತ್ತು. ಅಲ್ಲದೆ ವರ್ಷವೊಂದರಲ್ಲಿ ಗರಿಷ್ಠ ಬಾರಿ 200ಕ್ಕೂ ಅಧಿಕರನ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಭಾರತ ಮತ್ತು ಜಪಾನ್ ಜಂಟಿ ಅಗ್ರಸ್ಥಾನದಲ್ಲಿದೆ.

Most 200-plus totals in a calendar year in T20Is

  • 7 - India in 2023

  • 7 - Japan in 2024

  • 6 - England in 2022

  • 6 - South Africa in 2022

  • 6 - India in 2024

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

SCROLL FOR NEXT