ಟಿಮ್ ಡೇವಿಡ್ 
ಕ್ರಿಕೆಟ್

IPL 2025: ಜಸ್ಪ್ರೀತ್ ಬುಮ್ರಾ ಮೊದಲನೇ ಎಸೆತ 4 ಅಥವಾ 6 ಹೋಗಲಿದೆ; ಅವರೊಬ್ಬ ಅತ್ಯುತ್ತಮ ಬೌಲರ್ ಎಂದ RCB ಟಿಮ್ ಡೇವಿಡ್!

ಮುಂಬೈ ಇಂಡಿಯನ್ಸ್ ಜೊತೆಗಿನ ಮೂರು ವರ್ಷಗಳ ಅವಧಿಯಲ್ಲಿ, ಟಿಮ್ ಡೇವಿಡ್ ಹಲವಾರು ಸಂದರ್ಭಗಳಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ನೆಟ್‌ನಲ್ಲಿ ಎದುರಿಸಿದ್ದಾರೆ. ಇದೀಗ ಸೋಮವಾರ ಬುಮ್ರಾ ಅವರನ್ನು ಪಂದ್ಯದಲ್ಲಿ ಎದುರಿಸಲಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂದ್ಯವು ಮುಂಬೈ ಇಂಡಿಯನ್ಸ್ (ಎಂಐ) ತಂಡವನ್ನು ಎದುರಿಸಲಿದೆ. 10 ವರ್ಷಗಳಿಂದ ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲದ ಆರ್‌ಸಿಬಿ ಈ ಬಾರಿ ಗೆಲುವಿನ ವಿಶ್ವಾಸದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಬುಮ್ರಾ ವಾಪಸ್ಸಾಗಿರುವುದು ತಂಡಕ್ಕೆ ಬಲ ಸಿಕ್ಕಂತಾಗಿದ್ದು, ರೋಹಿತ್ ಶರ್ಮಾ ಕೂಡ ಹಿಂತಿರುಗಿದ್ದಾರೆ.

ಮುಂಬೈ ಇಂಡಿಯನ್ಸ್ ಜೊತೆಗಿನ ಮೂರು ವರ್ಷಗಳ ಅವಧಿಯಲ್ಲಿ, ಟಿಮ್ ಡೇವಿಡ್ ಹಲವಾರು ಸಂದರ್ಭಗಳಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ನೆಟ್‌ನಲ್ಲಿ ಎದುರಿಸಿದ್ದಾರೆ. ಇದೀಗ ಸೋಮವಾರ ಬುಮ್ರಾ ಅವರನ್ನು ಪಂದ್ಯದಲ್ಲಿ ಎದುರಿಸಲಿದ್ದಾರೆ. ಡೆತ್ ಓವರ್‌ಗಳಲ್ಲಿ ಬುಮ್ರಾ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿದ್ದು, 29 ವರ್ಷದ ಟಿಮ್ ಡೇವಿಡ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಆರ್‌ಸಿಬಿ ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡರೆ ಡೆತ್‌ನಲ್ಲಿ ಟಿಮ್ ಡೇವಿಡ್ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡುತ್ತಾರೆ. ಈ ಇಬ್ಬರು ಮುಖಾಮುಖಿಯಾದರೆ ಯಾರು ಮೇಲುಗೈ ಸಾಧಿಸುತ್ತಾರೆ ಎಂಬ ಕುತೂಹಲ ಮನೆಮಾಡಿದೆ.

ಬುಮ್ರಾ ಅವರು ಮಾರಕ ಯಾರ್ಕರ್‌ ಬೌಲಿಂಗ್ ಮಾಡುತ್ತಾರೆ. ಹೀಗಾಗಿ ನಾನು ಯಾವಾಗಲೂ ಔಟ್ ಆಗುವುದನ್ನು ಅಥವಾ ಗಾಯಗೊಳ್ಳುವುದನ್ನು ತಪ್ಪಿಸಲು ನನ್ನ ಕಾಲ್ಬೆರಳನ್ನು ತಪ್ಪಿಸಲು ಬಯಸುತ್ತೇನೆ ಎಂದು ಸಿಂಗಾಪುರ ಮೂಲದ ಆಸ್ಟ್ರೇಲಿಯಾದ ಆಟಗಾರ ಟಿಮ್ ಡೇವಿಡ್ ಹೇಳುತ್ತಾರೆ.

ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಿಮ್ ಡೇವಿಡ್, 'ಅವರು ಮಾರಕ ಯಾರ್ಕರ್ ಬೌಲಿಂಗ್ ಮಾಡುವುದರಿಂದ ನಾನು ನನ್ನ ಕಾಲ್ಬೆರಳುಗಳನ್ನು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಅವರೊಬ್ಬ ಅದ್ಭುತ ಬೌಲರ್. ಅತ್ಯುತ್ತಮ ತಂಡಗಳು ಮತ್ತು ಅತ್ಯುತ್ತಮ ಆಟಗಾರರ ವಿರುದ್ಧ ಉತ್ತಮ ಪ್ರದರ್ಶನ ನೀಡಿದಾಗ, ಒಬ್ಬ ಆಟಗಾರನಾಗಿ ನಿಮಗೆ ಅದು ಉತ್ತಮ ಪ್ರದರ್ಶನವಾಗಿರುತ್ತದೆ. ಆದ್ದರಿಂದಲೇ ಉತ್ತಮ ಆಟಗಾರರು ಅತ್ಯುತ್ತಮ ಎದುರಾಳಿ ಆಟಗಾರರಿಂದ ಸವಾಲು ಎದುರಿಸಲು ಬಯಸುತ್ತಾರೆ. ನಾನು ಕೂಡ ಅದನ್ನೇ ಎದುರು ನೋಡುತ್ತಿದ್ದೇನೆ' ಎಂದು ಭಾನುವಾರ ಹೇಳಿದರು.

ಕೆಲವು ತಿಂಗಳ ಹಿಂದೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರಾ ಅವರು ಸಂಪೂರ್ಣವಾಗಿ ಚೇತರಿಸಿಕೊಂಡ 3 ತಿಂಗಳ ಬಳಿಕ ತಂಡಕ್ಕೆ ಮರಳುತ್ತಿದ್ದಾರೆ. ಐಪಿಎಲ್ 2025ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ ಮೊದಲ ನಾಲ್ಕು ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಯಲಿದ್ದಾರೆ.

2022 ರಿಂದ 2024ರವರೆಗೆ ಮುಂಬೈ ಇಂಡಿಯನ್ಸ್ ಪರ ಆಡಿರುವ 29 ವರ್ಷದ ಟಿಮ್ ಡೇವಿಡ್, ಬುಮ್ರಾ ತಮ್ಮ ತಂಡದ ವಿರುದ್ಧ ಎಸೆದ ಮೊದಲ ಎಸೆತವು ಫೋರ್ ಅಥವಾ ಸಿಕ್ಸ್‌ಗೆ ಹೋಗುತ್ತದೆ ಎಂದಿದ್ದಾರೆ.

'ಈ ಟೂರ್ನಮೆಂಟ್‌ನಲ್ಲಿ ನಾವು ಮುಂದೆ ಸಾಗಬೇಕಾದರೆ, ನಾವು ಅತ್ಯುತ್ತಮ ತಂಡಗಳನ್ನು ಮತ್ತು ಅತ್ಯುತ್ತಮ ಆಟಗಾರರನ್ನು ಸೋಲಿಸಬೇಕು. ಆದ್ದರಿಂದ, ಸೋಮವಾರ ರಾತ್ರಿ ಮೊದಲ ಓವರ್‌ನಲ್ಲಿ ಬುಮ್ರಾ ಚೆಂಡನ್ನು ಎಸೆಯುತ್ತಾರೆ. ಆರ್‌ಸಿಬಿ ಪರವಾಗಿ ಬ್ಯಾಟಿಂಗ್ ಮಾಡುವವರಿಂದ ಮೊದಲ ಚೆಂಡು ಫೋರ್ ಅಥವಾ ಸಿಕ್ಸ್‌ಗೆ ಹೋಗುತ್ತದೆ' ಎಂದು ಅವರು ಹೇಳಿದರು.

'ಬುಮ್ರಾ ಅವರು ಟೂರ್ನಮೆಂಟ್‌ನಲ್ಲಿ ಮತ್ತೆ ಆಡುತ್ತಿರುವುದು ಉತ್ತಮವಾಗಿರುತ್ತದೆ. ಏಕೆಂದರೆ ಅವರು ಆಡಿದರೆ ಆಟವು ಮತ್ತಷ್ಟು ಉತ್ತಮವಾಗಿರುತ್ತದೆ. ಮುಂಬೈ ತಂಡದಲ್ಲಿ ಆಡಿದ್ದು ಸಿಹಿ-ಕಹಿ ಅನುಭವವನ್ನುಂಟುಮಾಡಿದೆ. ಮುಂಬೈ ತಂಡದಲ್ಲಿ ಬಹಳಷ್ಟು ಉತ್ತಮ ನೆನಪುಗಳು ಮತ್ತು ಬಹಳಷ್ಟು ಒಳ್ಳೆಯ ಸ್ನೇಹಿತರು ಇದ್ದಾರೆ. ಆದ್ದರಿಂದ, ಈ ಐಪಿಎಲ್ ಆವೃತ್ತಿಯು ಆಸಕ್ತಿದಾಯಕ ಭಾಗವಾಗಿದೆ. ಎಲ್ಲ ಆರ್‌ಸಿಬಿ ಆಟಗಾರರು ಉತ್ತಮವಾಗಿ ಆಡುತ್ತಾರೆ' ಎಂದು ಹೇಳಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿರುವ ಮೂರು ಪಂದ್ಯಗಳಲ್ಲಿ ಟಿಮ್ ಡೇವಿಡ್, 207.69 ಸ್ಟ್ರೈಕ್ ರೇಟ್‌ನಲ್ಲಿ 54 ರನ್ ಗಳಿಸಿದ್ದಾರೆ ಮತ್ತು ಗರಿಷ್ಠ 32 ರನ್ ಗಳಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಟಿಮ್ ಡೇವಿಡ್, ಆಸ್ಟ್ರೇಲಿಯಾ ತಂಡಕ್ಕೆ ಸೇರ್ಪಡೆಯಾಗುವ ಮುನ್ನ 2019 ರಿಂದ 2020 ರವರೆಗೆ ಸಿಂಗಾಪುರ ಪರ ಆಡಿದ್ದಾರೆ. ಅವರು 2022ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT