ಆರ್ ಸಿಬಿ  
ಕ್ರಿಕೆಟ್

IPL 2025: RCB vs CSK ಪಂದ್ಯಕ್ಕೆ ಫುಲ್ ಡಿಮ್ಯಾಂಡ್; ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್!

ತವರು ಕ್ರೀಡಾಂಗಣ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಆಡಲಿದ್ದು, ಪಂದ್ಯವನ್ನು ನೇರವಾಗಿ ಕಣ್ತುಂಬಿಕೊಳ್ಳಲು ಬಯಸಿರುವ ಅಭಿಮಾನಿಗಳು ಟಿಕೆಟ್ ಗಾಗಿ ಮುಗಿಬಿದಿದ್ದಾರೆ.

ಬೆಂಗಳೂರು: ಮೇ 3 ರಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯ ವೀಕ್ಷಣೆಗಾಗಿ ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ತವರು ಕ್ರೀಡಾಂಗಣ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಆಡಲಿದ್ದು, ಪಂದ್ಯವನ್ನು ನೇರವಾಗಿ ಕಣ್ತುಂಬಿಕೊಳ್ಳಲು ಬಯಸಿರುವ ಅಭಿಮಾನಿಗಳು ಟಿಕೆಟ್ ಗಾಗಿ ಮುಗಿಬಿದಿದ್ದಾರೆ.

ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೌಲ್ಡ್ ಔಟ್ : ಚೆನ್ನೈ ಮತ್ತು ಆರ್ ಸಿಬಿ ನಡುವಿನ ಪಂದ್ಯ ತೀವ್ರ ಕಾದಾಟಕ್ಕೆ ಸಾಕ್ಷಿಯಾಗಲಿದ್ದು, ಉಭಯ ತಂಡಗಳ ಅಭಿಮಾನಿಗಳಿಂದ ಟಿಕೆಟ್ ಗೆ ಫುಲ್ ಡಿಮ್ಯಾಂಡ್ ಇದೆ. ಇಂದಿನಿಂದ ಆನ್ ಲೈನ್ ನಲ್ಲಿ ಟಿಕೆಟ್ ನೀಡಲಾಗುತ್ತಿದ್ದು, ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಆರ್ ಸಿಬಿಯ ಅಧಿಕೃತ ಜಾಲತಾಣ SHOP Royal Challengers. COM ಹಾಗೂ BookMyShow ನಲ್ಲಿ ಮೊದಲ ಹಂತದಲ್ಲಿನ ಎಲ್ಲಾ ಟಿಕೆಟ್ ಗಳು ಸೌಲ್ಡ್ ಔಟ್ ಆಗಿದ್ದು, ಟಿಕೆಟ್ ಸಿಗದ ಅಭಿಮಾನಿಗಳು ಎಕ್ಸ್ ಸಾಮಾಜಿಕ ಜಾಲತಾಣಗಳಲ್ಲಿ ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ.

ವಿವಿಧ ವರ್ಗಗಳ ಟಿಕೆಟ್ ಗಳು ನಿರೀಕ್ಷಿತ ಬೆಲೆಗಳು ಇಲ್ಲಿವೆ:

* ಕತಾರ್ ಏರ್‌ವೇಸ್ ಜಾವಗಲ್ ಶ್ರೀನಾಥ್ ಸ್ಟ್ಯಾಂಡ್ P1 ಅನೆಕ್ಸ್ ರೂ. 7,200

* ಕತಾರ್ ಏರ್‌ವೇಸ್ ರಾಹುಲ್ ದ್ರಾವಿಡ್ ಪ್ಲಾಟಿನಂ ರೂ. 25,000

* ಲೌಂಜ್ (Lounge) ರೂ. 11,000

* ಬಿರ್ಲಾ ಎಸ್ಟೇಟ್‌ಗಳು BS ಚಂದ್ರಶೇಖರ್ ಸ್ಟ್ಯಾಂಡ್ ರೂ. 15,000

* ಟೆರಾಸ್ ರೂ. 2,990 (A Stand)

* KEI Wires ಮತ್ತು ಕೇಬಲ್ಸ್ ಎ ಸ್ಟ್ಯಾಂಡ್ ರೂ. 4,290

* ಬೋಟ್ ಸಿ ಸ್ಟ್ಯಾಂಡ್ ರೂ. 4,290

* ಪೂಮಾ ಬಿ ಸ್ಟ್ಯಾಂಡ್ ರೂ. 4,290

35,000 ಕ್ಕೂ ಹೆಚ್ಚು ಆಸನಗಳ ಸಾಮರ್ಥ್ಯ

ಎಂ. ಚಿನ್ನಸ್ವಾಮಿ ಕ್ರೀಡಾಂಗಣವು 35,000 ಕ್ಕೂ ಹೆಚ್ಚು ಆಸನಗಳ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸಾಮಾನ್ಯವಾಗಿ RCB ತವರು ಪಂದ್ಯಗಳ ಸಮಯದಲ್ಲಿ ಹೌಸ್ ಫುಲ್ ಆಗಿರುತ್ತದೆ. ಕೊನೆಯ ಕ್ಷಣದ ನೂಕುನುಗ್ಗಲು ತಪ್ಪಿಸಲು ಅಭಿಮಾನಿಗಳು ಬೇಗ ಆಗಮಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ID ಮತ್ತು ಅವರ RCB ಟಿಕೆಟ್‌ನ ಮುದ್ರಿತ/ಡಿಜಿಟಲ್ ಪ್ರತಿಯನ್ನು ತೆಗೆದುಕೊಂಡು ಹೋಗುವುದು ಮುಖ್ಯವಾಗಿದೆ. ಆಹಾರ, ದೊಡ್ಡ ಚೀಲಗಳು ಮತ್ತು ನೀರಿನ ಬಾಟಲಿಗಳಂತಹ ಯಾವುದೇ ನಿರ್ಬಂಧಿತ ವಸ್ತುಗಳನ್ನು ತರಬಾರದು ಎಂದು ಸೂಚಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT