ಅಮಿತ್ ಮಿಶ್ರಾ 
ಕ್ರಿಕೆಟ್

Amit Mishra: 'ಅನೈತಿಕ ಸಂಬಂಧ, ವರದಕ್ಷಿಣೆ ಕಿರುಕುಳ'; ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ವಿರುದ್ಧ ಪತ್ನಿ ಪೊಲೀಸ್ ದೂರು

ದೂರಿನಲ್ಲಿ ಅಮಿತ್ ಮಿಶ್ರಾ ಹಾಗೂ ಅವರ ಕುಟುಂಬಸ್ಥರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಗರಿಮಾ ಆರೋಪಿಸಿದ್ದಾರೆ.

ಮುಂಬೈ: ಭಾರತೀಯ ಕ್ರಿಕೆಟ್ ನಲ್ಲಿ ಮತ್ತೊಂದು ದಂಪತಿಗಳ ನಡುವೆ ವಿರಸ ಏರ್ಪಟ್ಟಿದ್ದು, ಒಂದು ಕಾಲದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ತನಗೆ ವರದಕ್ಷಿಣ ಕಿರುಕುಳ ನೀಡುತ್ತಿದ್ದು, ಅನೇಕ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಪತ್ನಿ ಪೊಲೀಸ್ ದೂರು ನೀಡಿದ್ದಾರೆ.

ಸ್ಟಾರ್ ಕ್ರಿಕೆಟಿಗನ ಕುಟುಂಬಸ್ಥರು ಹಣಕ್ಕಾಗಿ ತನಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ಆತ ಕೂಡ ಅನೇಕ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ಇದರಿಂದಲೇ ನಿತ್ಯ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.

ಇಷ್ಟಕ್ಕೂ ಯಾರು ಆ ಸ್ಟಾರ್ ಕ್ರಿಕೆಟಿಗ ಎಂದರೆ.. ಅದು ಬೇರಾರು ಅಲ್ಲ.. ಒಂದು ಕಾಲದ ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಅಮಿತ್ ಮಿಶ್ರಾ.. ಹೌದು... ಅಮಿತ್ ಮಿಶ್ರಾ ಮತ್ತು ಅವರ ಪತ್ನಿ ಗರಿಮಾ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿದ್ದು, ಇದು ಇದೀಗ ಹಾದಿರಂಪ ಬೀದಿರಂಪವಾಗಿದೆ. ಅಮಿತ್ ಮಿಶ್ರಾ ಪತ್ನಿ ಗರಿಮಾ ಇದೀಗ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅಮಿತ್ ಮಿಶ್ರಾ ಮತ್ತು ಅವರ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾರೆ.

ದೂರಿನಲ್ಲಿ ಅಮಿತ್ ಮಿಶ್ರಾ ಹಾಗೂ ಅವರ ಕುಟುಂಬಸ್ಥರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಗರಿಮಾ ಆರೋಪಿಸಿದ್ದಾರೆ. ಅಲ್ಲದೆ, ಅಮಿತ್ ಮಿಶ್ರಾ ಅನೇಕ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪವನ್ನೂ ಗರಿಮಾ ಮಾಡಿದ್ದಾರೆ.

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಹಲ್ಲೆ

ಇನ್ನು ಅಮಿತ್ ಮಿಶ್ರಾ ತನ್ನನ್ನು ಹಲವು ಬಾರಿ ಹೊಡೆದಿದ್ದಾರೆ ಎಂದು ಆರೋಪಿಸಿರುವ ಪತ್ನಿ ಗರಿಮಾ, 'ಅಮಿತ್ ಇತರ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿರುವುದನ್ನು ನಾನು ನಾಲ್ಕು ತಿಂಗಳ ಹಿಂದೆ ವಿರೋಧಿಸಿದೆ. ಆಗ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದರು. ಹೀಗಾಗಿ ನಾನು ಪ್ರಸ್ತುತ ತಮ್ಮ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದೇನೆ' ಎಂದು ಆರೋಪಿಸಿದ್ದಾರೆ. ಅಲ್ಲದೆ ಅಮಿತ್ ಮತ್ತು ಅವರ ಕುಟುಂಬಸ್ಥರು , 'ಹೋಂಡಾ ಸಿಟಿ ಕಾರು ಮತ್ತು 10 ಲಕ್ಷ ರೂಪಾಯಿ ತರುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಗರಿಮಾ ಆರೋಪಿಸಿದ್ದಾರೆ. ಈ ಕುರಿತು ಪೊಲೀಸ್ ಆಯುಕ್ತರ ಬಳಿಯೂ ಗರಿಮಾ ದೂರು ನೀಡಿರುವುದಾಗಿ ವರದಿಯಾಗಿದೆ.

ಆರೋಪ ಅಲ್ಲಗಳೆದ ಅಮಿತ್ ಮಿಶ್ರಾ

ಇನ್ನು ಪತ್ನಿ ಗರಿಮಾ ಅವರ ಎಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ಅಮಿತ್ ಮಿಶ್ರಾ, ಆಕೆಯೇ ನನಗೆ ಮತ್ತು ನನ್ನ ಕುಟುಂಬಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಪತ್ನಿ ಒಮ್ಮೆ ನನ್ನ ಮೇಲೆ ಬ್ಯಾಂಕ್ ಕಚೇರಿಯ ಹೊರಗೆ ಹಲ್ಲೆ ಮಾಡಿದ್ದರು. ಇದೀಗ ಮಾಧ್ಯಮಗಳ ಮುಂದೆ ಡ್ರಾಮಾ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಂದಹಾಗೆ ಅಮಿತ್ ಮಿಶ್ರಾ 2003 ರಲ್ಲಿ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ 2008 ರಲ್ಲಿ ಟೆಸ್ಟ್ ಮಾದರಿಗೆ ಪಾದಾರ್ಪಣೆ ಮಾಡಿದ ಅಮಿತ್ 2010 ರಲ್ಲಿ ಟಿ20 ಮಾದರಿಯಲ್ಲಿ ಆಡುವ ಅವಕಾಶ ಸಿಕ್ಕಿತು. ಭಾರತ ಪರ 22 ಟೆಸ್ಟ್ ಪಂದ್ಯಗಳನ್ನಾಡಿರುವ ಅಮಿತ್ 76 ವಿಕೆಟ್‌ಗಳು, 36 ಏಕದಿನ ಪಂದ್ಯಗಳಲ್ಲಿ 64 ವಿಕೆಟ್‌ಗಳು ಮತ್ತು 10 ಟಿ20 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದಲ್ಲದೆ, ಅವರು 162 ಐಪಿಎಲ್ ಪಂದ್ಯಗಳನ್ನು ಸಹ ಆಡಿದ್ದು, ಇದರಲ್ಲಿ ಅವರು 174 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅಂತೆಯೇ ಅಮಿತ್ ಮಿಶ್ರಾ ಮತ್ತು ಗರಿಮಾ ಏಪ್ರಿಲ್ 26 2021ರಂದು ವಿವಾಹವಾಗಿದ್ದರು. ಇದೇ ಏಪ್ರಿಲ್ 26ರಂದು ಅವರ ವಿವಾಹ ವಾರ್ಷಿಕೋತ್ಸವ ಇದ್ದು ಅದಾಗಲೇ ಅವರ ಕುಟುಂಬ ಗಲಾಟೆ ಬೀದಿಗೆ ಬಿದ್ದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT