2025 ರ ವರ್ಷವು ಕೊನೆಗೊಳ್ಳಲು ಇನ್ನೂ ಕೇವಲ 22 ದಿನ ಬಾಕಿಯಿದೆ. ಹಿಂತಿರುಗಿ ನೋಡಿದಾಗ ಪ್ರತಿಯೊಬ್ಬರಿಗೂ ಕೆಲವೊಂದು ಮರೆಯಲಾಗದಂತಹ ಕ್ಷಣಗಳಿರುತ್ತವೆ.ಅಂದಹಾಗೆ, 2025 ರಲ್ಲಿ ಪಾಕಿಸ್ತಾನದಲ್ಲಿ ಗೂಗಲ್‌ನ ಅತಿ ಹೆಚ್ಚು ಹುಡುಕಿದ ಕ್ರಿಕೆಟಿಗ ಭಾರತದ ಅಭಿಷೇಕ್ ಶರ್ಮಾ ಆಗಿದ್ದಾರೆ.
ವಿಶ್ವದ ನಂಬರ್ ಟಿ-20 ಬ್ಯಾಟರ್ ಆಗಿರುವ ಅಭಿಷೇಕ್ ಶರ್ಮಾ, ಏಷ್ಯಾಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. 44.85ರ ಸರಾಸರಿಯಲ್ಲಿ 200ರ ಸ್ಟ್ರೈಕ್ ರೇಟ್ ನಲ್ಲಿ 314 ರನ್ ಕಲೆಹಾಕಿದ್ದರು. ಅದರೊಂದಿಗೆ ಸರಣಿ ಶ್ರೇಷ್ಠ ಎನಿಸಿದ್ದರು.
ಏಷ್ಯಾ ಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಪಾಕಿಸ್ತಾನದ ವಿರುದ್ಧ 39 ಎಸೆತಗಳಲ್ಲಿ 74 ರನ್ ಗಳಿಸಿದ್ದರು. ಆದರೆ ಫೈನಲ್ ನಲ್ಲಿ ಕೇವಲ 5 ರನ್ ಗಳಿಗೆ ಔಟ್ ಆಗಿದ್ದರು.
ಪಾಕಿಸ್ತಾನದಲ್ಲಿ 2025ರಲ್ಲಿ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಆಟಗಾರರಲ್ಲಿ ಅಭಿಷೇಕ್ ಶರ್ಮಾ ಮೊದಲ ಸ್ಥಾನದಲ್ಲಿದ್ದರೆ, ಹಸನ್ ನವಾಜ್ ಎರಡನೇ ಸ್ಥಾನದಲ್ಲಿದ್ದಾರೆ. ಇರ್ಫಾನ್ ಖಾನ್ ನಿಯಾಜ್, ಸಹಿಬಝಾದ್ ಫರ್ಹಾನ್ ಮತ್ತು ಮುಹಮ್ಮದ್ ಅಬ್ಬಾಸ್ ಕ್ರಮವಾಗಿ ತದನಂತರದ ಸ್ಥಾನದಲ್ಲಿದ್ದಾರೆ.