ಗುಜರಾತ್‌ನ ಶಿಕ್ಷಣ ಸಚಿವೆ ಮತ್ತು ಭಾರತೀಯ ಕ್ರಿಕೆಟ್ ತಂಡದ ಸೂಪರ್‌ಸ್ಟಾರ್ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಇತ್ತೀಚೆಗೆ ನೀಡಿದ ಹೇಳಿಕೆಯೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಗುಜರಾತ್‌ನ ದ್ವಾರಕಾದಲ್ಲಿ ನಡೆದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿವಾಬಾ, ರವೀಂದ್ರ ಜಡೇಜಾ ಅವರ ಜವಾಬ್ದಾರಿ ಮತ್ತು ಬದ್ಧತೆಯನ್ನು ಎತ್ತಿ ತೋರಿಸುವ ಉದ್ದೇಶ ಹೊಂದಿದ್ದರೂ, ಅವರ ಜೀವನಶೈಲಿಯನ್ನು ತಂಡದ ಇತರ ಆಟಗಾರರ ಜೀವನಶೈಲಿಗೆ ಹೋಲಿಸಿರುವುದು ಇದೀಗ ಕ್ರಿಕೆಟಿಗರು ಮತ್ತು ಅವರ ಅಭಿಮಾನಿಗಳಲ್ಲಿ ಮಹತ್ವದ ಚರ್ಚೆಗೆ ನಾಂದಿ ಹಾಡಿದೆ.
'ನನ್ನ ಪತಿ, ಕ್ರಿಕೆಟಿಗ ರವೀಂದ್ರ ಜಡೇಜಾ ಅವರು, ಕ್ರಿಕೆಟ್ ಆಡಲು ಲಂಡನ್, ದುಬೈ ಮತ್ತು ಆಸ್ಟ್ರೇಲಿಯಾದಂತಹ ಅನೇಕ ಸ್ಥಳಗಳಿಗೆ ವಿದೇಶಕ್ಕೆ ಪ್ರಯಾಣಿಸಬೇಕಾಗಿರುತ್ತದೆ. ಇದರ ಹೊರತಾಗಿಯೂ, ಅವರಿಗೆ ಇಂದಿಗೂ ಯಾವುದೇ ರೀತಿಯ ವ್ಯಸನ ಅಥವಾ ದುರ್ಗುಣಗಳನ್ನು ಹೊಂದಿಲ್ಲ ಅಥವಾ ತೊಡಗಿಕೊಂಡಿಲ್ಲ. ಏಕೆಂದರೆ, ಅವರು ತಮ್ಮ ಜವಾಬ್ದಾರಿಗಳು ಏನೆಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ತಂಡದ ಉಳಿದವರೆಲ್ಲರೂ ದುಶ್ಚಟಗಳಲ್ಲಿ ತೊಡಗುತ್ತಾರೆ. ಆದರೆ, ಅವುಗಳ ಮೇಲೆ ಯಾವುದೇ ನಿರ್ಬಂಧವಿಲ್ಲ. ನನ್ನ ಪತಿ ಹನ್ನೆರಡು ವರ್ಷಗಳಿಂದ ಮನೆಯಿಂದ ದೂರವಿದ್ದಾರೆ; ಅವರು ಏನು ಬೇಕಾದರೂ ಮಾಡಬಹುದು, ಆದರೆ ಅವರು ನೈತಿಕ ಕರ್ತವ್ಯವನ್ನು, ಏನು ಮಾಡಬೇಕೆಂದು ಅರ್ಥಮಾಡಿಕೊಂಡಿದ್ದಾರೆ' ಎಂದಿದ್ದಾರೆ.
'ತಂಡದ ಉಳಿದವರೆಲ್ಲರೂ ದುಶ್ಚಟಗಳಲ್ಲಿ ತೊಡಗುತ್ತಾರೆ' ಎಂಬ ಹೇಳಿಕೆ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.
ರವೀಂದ್ರ ಜಡೇಜಾ ಅವರ ವೃತ್ತಿಜೀವನದ ಮಹತ್ವದ ಪರಿವರ್ತನೆಯ ಸಮಯದಲ್ಲಿ ಈ ಹೇಳಿಕೆ ಬಂದಿದೆ. ಅವರು ಭಾರತದ ಟೆಸ್ಟ್ ಮತ್ತು ಏಕದಿನ ತಂಡಗಳ ಅವಿಭಾಜ್ಯ ಅಂಗವಾಗಿ ಉಳಿದಿದ್ದರೂ, ಜಡೇಜಾ ಇನ್ಮುಂದೆ ಟಿ20ಐ ಪಂದ್ಯಗಳಲ್ಲಿ ಸಕ್ರಿಯ ಆಟಗಾರನಲ್ಲ.
ಪ್ರಸಿದ್ಧ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೃತ್ತಿಜೀವನದ ಸಂಧ್ಯಾಕಾಲದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸಲಿದ್ದಾರೆ. ಪ್ರಮುಖ ಟ್ರೇಡಿಂಗ್ ಬೆಳವಣಿಗೆಯಲ್ಲಿ, ಜಡೇಜಾ ಅವರನ್ನು ರಾಜಸ್ಥಾನ ರಾಯಲ್ಸ್ ಜೊತೆಗೆ ವಿನಿಮಯ ಮಾಡಿಕೊಳ್ಳಲಾಗಿದ್ದು, ತಮ್ಮ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸಿದ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಜೊತೆಗಿನ ಅವರ ಅತ್ಯಂತ ಯಶಸ್ವಿ ಮತ್ತು ಪ್ರೀತಿಯ ಸಂಬಂಧ ಕೊನೆಗೊಂಡಿದೆ.