ಅನಿಲ್ ಕುಂಬ್ಳೆ 
ಕ್ರಿಕೆಟ್

'₹7 ಕೋಟಿಗೆ ಖರೀದಿಸಿದರೂ RCB ಪ್ಲೇಯಿಂಗ್ XIನಲ್ಲಿ ಆತ ಇರುವುದಿಲ್ಲ': IPL 2026 ಬಗ್ಗೆ ಭವಿಷ್ಯ ನುಡಿದ ಅನಿಲ್ ಕುಂಬ್ಳೆ

ಜಾಶ್ ಹೇಜಲ್‌ವುಡ್‌ ಅವರಿಗೆ ಜೇಕಬ್ ಡಫಿ ಬ್ಯಾಕಪ್ ಆಗಲಿದ್ದಾರೆ, ಫಿಲ್ ಸಾಲ್ಟ್‌ಗೆ ಬದಲಿಯಾಗಿ ಜೋರ್ಡಾನ್ ಕಾಕ್ಸ್ ಮತ್ತು ಯಶ್ ದಯಾಳ್ ಬದಲಿಗೆ ಮಂಗೇಶ್ ಯಾದವ್ ಬ್ಯಾಕಪ್ ಆಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಐಪಿಎಲ್ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ವೆಂಕಟೇಶ್ ಅಯ್ಯರ್ ಅವರನ್ನು ₹7 ಕೋಟಿಗೆ ಖರೀದಿಸಿತು. ಆದರೆ, ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಪೇಸ್ ಬೌಲಿಂಗ್ ಆಲ್‌ರೌಂಡರ್ ಟಿ20 ಲೀಗ್‌ನ ಆರಂಭಿಕ ಹಂತದಲ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯದಿರಬಹುದು ಎಂದು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಆರ್‌ಸಿಬಿ ತಂಡಕ್ಕೆ ಬಿಕರಿಯಾಗುವ ಮುನ್ನ ವೆಂಕಟೇಶ್ ಅಯ್ಯರ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡ ಬಿಡುಗಡೆ ಮಾಡಿತು. ಹರಾಜಿನಲ್ಲಿ ಉಭಯ ತಂಡಗಳು ಬಿಡ್ಡಿಂಗ್ ಯುದ್ಧದಲ್ಲಿ ಭಾಗಿಯಾಗಿದ್ದರೂ, ಅಯ್ಯರ್ ಅಂತಿಮವಾಗಿ ಆರ್‌ಸಿಬಿ ಪಾಲಾದರು. ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆದ ಹರಾಜಿನಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಅಯ್ಯರ್, ಜೇಕಬ್ ಡಫಿ ಮತ್ತು ಮಂಗೇಶ್ ಯಾದವ್ ಸೇರಿದಂತೆ ಇತರರನ್ನು ಖರೀದಿಸುವ ಮೂಲಕ ತಂಡವನ್ನು ಬಲಪಡಿಸಿಕೊಂಡಿತು.

'ಸ್ಥಿರವಾದ, ಗೆಲುವಿನ ಸಂಯೋಜನೆ ಹೊಂದಿರುವ ತಂಡಕ್ಕೆ ತೊಂದರೆ ನೀಡಲು ಬಯಸುವುದಿಲ್ಲ. ಹೀಗಾಗಿ, ವೆಂಕಟೇಶ್ ಅಯ್ಯರ್ ಅವರನ್ನು ಆರಂಭದಲ್ಲಿ ಪ್ಲೇಯಿಂಗ್ XI ನಲ್ಲಿ ಸೇರಿಸುವುದಿಲ್ಲ. ಯುವ ಸ್ಪಿನ್ನರ್ ಸುಯಾಶ್ ಶರ್ಮಾ ಆತ್ಮವಿಶ್ವಾಸದಿಂದ ಇರಲು ಮತ್ತು ಭಾರತದ ಹಿರಿಯ ಆಟಗಾರನ ಉಪಸ್ಥಿತಿಯಿಂದಾಗಿ ಒತ್ತಡ ಅಥವಾ ಅಸುರಕ್ಷಿತ ಭಾವನೆಯನ್ನು ಅನುಭವಿಸದಿರಲು ತಂಡವು ರವಿ ಬಿಷ್ಣೋಯ್ ಅವರನ್ನು ಬೆನ್ನಟ್ಟಲಿಲ್ಲ' ಎಂದು ಕುಂಬ್ಳೆ ಹೇಳಿದರು.

ಆರ್‌ಸಿಬಿ ವೆಂಕಟೇಶ್ ಅಯ್ಯರ್‌ ಅವರಿಗೆ ಭಾರಿ ಬಿಡ್ಡಿಂಗ್ ನಿರೀಕ್ಷಿಸಿತ್ತು. ಆದರೆ, ಅಂತಿಮವಾಗಿ ಅವರನ್ನು ಪಡೆದುಕೊಂಡಿತು. ಇದು ಫ್ರಾಂಚೈಸಿಗೆ ಸಂತೋಷ ತಂದಿತು ಎಂದು 2009ರ ಐಪಿಎಲ್ ಫೈನಲ್‌ಗೆ ಆರ್‌ಸಿಬಿಯನ್ನು ಮುನ್ನಡೆಸಿದ ಮತ್ತು 2011ರಲ್ಲಿ ಫ್ರಾಂಚೈಸಿಯ ಮುಖ್ಯ ಮೆಂಟರ್ ಆಗಿದ್ದ ಕುಂಬ್ಳೆ ಹೇಳಿದರು. 'ಐಪಿಎಲ್ ವಿಜೇತ ತಂಡದ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವ ಮೂಲಕ ಆರ್‌ಸಿಬಿ ಒಂದು ಬುದ್ಧಿವಂತ ನಡೆಯನ್ನು ಅನುಸರಿಸಿತು' ಎಂದು ಹೇಳಿದರು.

'ಅವರು (ಆರ್‌ಸಿಬಿ) ತಂಡವನ್ನು ಹಾಗೆಯೇ ಇರಿಸಿಕೊಳ್ಳಲು, ತಮ್ಮ ಆಟಗಾರರನ್ನು ಬೆಂಬಲಿಸಲು ಮತ್ತು ಏನಾದರೂ ತಪ್ಪಾದಲ್ಲಿ ಕೆಲವು ಬ್ಯಾಕಪ್‌ಗಳನ್ನು ಹೊಂದಲು ಬಯಸಿದ್ದರು. ಅದರಂತೆಯೇ ಹರಾಜಿನಲ್ಲಿ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿದ್ದಾರೆ' ಎಂದರು.

'ಜಾಶ್ ಹೇಜಲ್‌ವುಡ್‌ ಅವರಿಗೆ ಜೇಕಬ್ ಡಫಿ ಬ್ಯಾಕಪ್ ಆಗಲಿದ್ದಾರೆ, ಫಿಲ್ ಸಾಲ್ಟ್‌ಗೆ ಬದಲಿಯಾಗಿ ಜೋರ್ಡಾನ್ ಕಾಕ್ಸ್ ಮತ್ತು ಯಶ್ ದಯಾಳ್ ಬದಲಿಗೆ ಮಂಗೇಶ್ ಯಾದವ್ ಬ್ಯಾಕಪ್ ಆಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರು ಎಡಗೈ ಸೀಮರ್ ಆಗಿದ್ದು, ಹೆಚ್ಚು ಕ್ರಿಕೆಟ್ ಆಡಿಲ್ಲದಿದ್ದರೂ ಸಾಕಷ್ಟು ಸಾಮರ್ಥ್ಯ ಹೊಂದಿದ್ದಾರೆ'. ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಕೂಡ ಅಯ್ಯರ್ ಆರ್‌ಸಿಬಿ ಪ್ಲೇಯಿಂಗ್ XI ನಲ್ಲಿ ಇರುತ್ತಾರೆಯೇ ಎಂಬ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇದೆ ಎಂದು ಹೇಳಿದರು.

ವೆಂಕಟೇಶ್ ಅಯ್ಯರ್ ಅವರ ಸ್ಥಿರ ಪ್ರದರ್ಶನ ಮತ್ತು ಹೆಚ್ಚುತ್ತಿರುವ ಆತ್ಮವಿಶ್ವಾಸದಿಂದಾಗಿ ಕಳೆದ ಆವೃತ್ತಿಯಿಂದಲೂ ಅವರನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಮತ್ತು ಪ್ರತಿಭಾ ಸ್ಕೌಟ್ ಮಲೋಲನ್ ರಂಗರಾಜನ್ ಸೇರಿದಂತೆ ಆರ್‌ಸಿಬಿಯ ಸಹಾಯಕ ಸಿಬ್ಬಂದಿ ಅವರನ್ನು ತಂಡಕ್ಕೆ ಬಲಿಷ್ಠ ಮತ್ತು ವಿಶ್ವಾಸಾರ್ಹ ಆಯ್ಕೆಯಾಗಿ ನೋಡುತ್ತಾರೆ.

'ಮುಂಬರುವ ಆವೃತ್ತಿಯಲ್ಲಿ ಅವರು ತಕ್ಷಣವೇ ಪ್ಲೇಯಿಂಗ್ ಇಲೆವೆನ್‌ನಲ್ಲಿ ಇರುತ್ತಾರೆಯೇ? ಇದು ಸ್ಥಿರ ತಂಡವಾದ್ದರಿಂದ ಸ್ವಲ್ಪ ಸಂದೇಹವಿದೆ. ಅವರು ಎಡಗೈ ಆಟಗಾರರನ್ನು ಬಯಸಿ ಅವರನ್ನು ಆಯ್ಕೆ ಮಾಡಿಕೊಂಡರು. ಕಳೆದ ಆವೃತ್ತಿಯಲ್ಲಿ ಕೃನಾಲ್ ಪಾಂಡ್ಯ ಅವರೊಂದಿಗೆ ಮಾಡಿದಂತೆ ಅವರು ಹನ್ನೊಂದರಲ್ಲಿ ವೆಂಕಟೇಶ್ ಅವರನ್ನು ಹೊಂದಿಸಬಹುದು. ಕೃನಾಲ್ ಚೆನ್ನಾಗಿ ಆಡಿದರು, ಆದ್ದರಿಂದ ಉನ್ನತ ಸ್ಪಿನ್ನರ್ ಕೊರತೆ ಕಾಡಲಿಲ್ಲ. ಸುಯಾಶ್ ಶರ್ಮಾ ಉತ್ತಮ ಆವೃತ್ತಿಯನ್ನು ಹೊಂದಿದ್ದರು' ಎಂದರು.

ಆರ್‌ಸಿಬಿಗೆ ಅಯ್ಯರ್ ಅವರನ್ನು ಖರೀದಿಸಿದ್ದಕ್ಕೆ ಮುಖ್ಯ ಕೋಚ್ ಆಂಡಿ ಫ್ಲವರ್ ಸಂತೋಷ ವ್ಯಕ್ತಪಡಿಸಿದರು. 'ವೆಂಕಟೇಶ್ ಅಯ್ಯರ್ ಬಲವಾದ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಡ್ರೆಸ್ಸಿಂಗ್ ರೂಮ್ ಮತ್ತು ಮೈದಾನದಲ್ಲಿ ಅದು ತುಂಬಾ ಒಳ್ಳೆಯದು. ನಾವು ಅವರನ್ನು ಪಡೆಯಲು ಸಂತೋಷಪಡುತ್ತೇವೆ ಮತ್ತು ಅವರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ. ನೀವು ಚೆನ್ನಾಗಿ ಯೋಜಿಸಿದಾಗ ಮತ್ತು ಉತ್ತಮ ತಂತ್ರವನ್ನು ಹೊಂದಿರುವಾಗ, ನಿಮ್ಮ ಮಿತಿಗಳು ನಿಮಗೆ ತಿಳಿದಿರುತ್ತವೆ' ಎಂದು ತಿಳಿಸಿದರು.

'ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿಸಿದ ನಂತರವೂ ಕೆಕೆಆರ್ ಪರ್ಸ್‌ನಲ್ಲಿ ಸ್ವಲ್ಪ ಹೆಚ್ಚುವರಿ ಹಣ ಉಳಿದಿತ್ತು ಎಂದು ನಾನು ಭಾವಿಸುತ್ತೇನೆ. ಹೀಗಾಗಿಯೇ, ಅವರು ವೆಂಕಟೇಶ್ ಅಯ್ಯರ್ ಮೇಲೆ ಬಿಡ್ಡಿಂಗ್ ಮಾಡುತ್ತಿದ್ದರು. ಆದರೆ ಕೊನೆಯಲ್ಲಿ, ನಾವು ವೆಂಕಟೇಶ್ ಅನ್ನು ಸ್ವಾಧೀನಪಡಿಸಿಕೊಂಡೆವು ಮತ್ತು ನಾವು ಅದರಲ್ಲಿ ನಿಜವಾಗಿಯೂ ಸಂತೋಷವಾಗಿದ್ದೇವೆ' ಎಂದು ಆ್ಯಂಡಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕಠಿಣ ಶಿಕ್ಷೆಯಾಗಲಿ.. ಇಂತಹುದನ್ನು ಭಾರತ ನಿರ್ಲಕ್ಷಿಸಲ್ಲ': ಹಿಂದೂಗಳ ಹತ್ಯೆ ಕುರಿತು ಬಾಂಗ್ಲಾದೇಶಕ್ಕೆ ಖಡಕ್ ಎಚ್ಚರಿಕೆ!

ನಮ್ಮ ಸಾಧನೆಗಳ ಕ್ರೆಡಿಟ್ ತೆಗೆದುಕೊಳ್ಳುವ ಮೂಲಕ ವೈಷ್ಣವ್ ಕರ್ನಾಟಕದ ಯಶಸ್ಸನ್ನು ಕದಿತ್ತಿದ್ದಾರೆ: ಸಿದ್ದರಾಮಯ್ಯ

Vijay Hazare Trophy: ಫೀಲ್ಡಿಂಗ್ ವೇಳೆ KKR ಸ್ಟಾರ್ ಗೆ ಗಂಭೀರ ಗಾಯ, ಆಸ್ಪತ್ರೆಗೆ ದೌಡು.. ಆಗಿದ್ದೇನು?

ಶ್ರವಣ್ ಸಿಂಗ್, ವೈಭವ್ ಸೂರ್ಯವಂಶಿ ಸೇರಿ 20 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ! Video

ಕೇಂದ್ರ ಸರ್ಕಾರದ ದಿಟ್ಟ ಕ್ರಮ: ಹುರಿಯತ್ ಅಧ್ಯಕ್ಷ ಸ್ಥಾನಕ್ಕೆ ಮಿರ್ವೈಜ್ ಉಮರ್ ಫಾರೂಕ್ ರಾಜೀನಾಮೆ

SCROLL FOR NEXT