ನವದೆಹಲಿ: ದೆಹಲಿ ತಂಡದ ಬಸ್ ಚಾಲಕ ಬಹಳ ಚಾಲಕಿತನಿಂದ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ತನ್ನ ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಜಯ್ ಹಜಾರೆ ಟ್ರೋಫಿಯ ಸಂದರ್ಭದಲ್ಲಿ ದೆಹಲಿ ತಂಡಕ್ಕೆ ಕೊಹ್ಲಿ ಮರಳಿದ್ದು, ಪಂದ್ಯಾವಳಿಯಲ್ಲಿ ಇದುವರೆಗೆ ಅವರ ತಂಡ ಎರಡು ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜನವರಿ 11 ರಂದು ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ODI ಸರಣಿಗೆ ಸ್ಟಾರ್ ಬ್ಯಾಟರ್ ಸಜ್ಜಾಗುತ್ತಿದ್ದಾರೆ.
ಬೆಂಗಳೂರಿನ BCCI ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ದೆಹಲಿ ಪರ ಎರಡೂ ಪಂದ್ಯಗಳನ್ನು ಕೊಹ್ಲಿ ಆಡಿದರು. ಶುಕ್ರವಾರ ಗುಜರಾತ್ ವಿರುದ್ಧ ದೆಹಲಿ ಗೆಲುವು ಸಾಧಿಸಿದ ನಂತರ ವೀಡಿಯೊ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಡ್ರೈವರ್ ತನ್ನ ಮೊಬೈಲ್ ನ್ನು ಪಕ್ಕದಲ್ಲಿಟ್ಟು ತನ್ನನ್ನು ಮತ್ತು ಕೊಹ್ಲಿ ಮತ್ತಿತರ ದೆಹಲಿ ಆಟಗಾರರನ್ನು ರೆಕಾರ್ಡ್ ಮಾಡುವುದನ್ನು ನೋಡಬಹುದು. ಆದಾಗ್ಯೂ ತಮಾಷೆಯ ಸಂಗತಿಯೆಂದರೆ ಯಾರಿಗೂ ಅನುಮಾನ ಬಾರದಂತೆ ಓರೆ ಗಣ್ಣಿನಲ್ಲಿ ಆಟಗಾರರು ಮತ್ತು ಮೊಬೈಲ್ ನ್ನು ನೋಡುತ್ತಾ, ಸ್ಟಾರ್ ಬ್ಯಾಟರ್‌ನ್ನು ಮಾತನಾಡಿಸದೆ ಯಾವುದೇ ಅನುಮಾನಬಾರದಂತೆ ರೆಕಾರ್ಡ್ ಮಾಡಿದ್ದಾರೆ.
ಕೊಹ್ಲಿ, ಇಶಾಂತ್ ಶರ್ಮಾ ಮತ್ತಿತರರ ಆಟಗಾರರೊಂದಿಗೆ ಬಸ್ ನಿಂದ ಇಳಿಯುವಾಗ ಈ ವಿಡಿಯೋ ಮಾಡಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಕೆಲವು ತಮಾಷೆಯ ಕಾಮೆಂಟ್‌ಗಳೊಂದಿಗೆ ಬಸ್ ಡ್ರೈವರ್ ಚಾಲಕಿತನವನ್ನು ಹೊಗಳುತ್ತಿದ್ದಾರೆ.