ಟೀಂ ಇಂಡಿಯಾ 
ಕ್ರಿಕೆಟ್

3rd ODI: ಗಿಲ್ ಸ್ಫೋಟಕ ಶತಕ; ಇಂಗ್ಲೆಂಡ್ ವಿರುದ್ಧ ಗೆದ್ದ ಭಾರತ; ಸರಣಿ ವೈಟ್‌ವಾಶ್ ಮಾಡಿದ ರೋಹಿತ್ ಪಡೆ!

ಭಾರತ ಮತ್ತೊಮ್ಮೆ ಇಂಗ್ಲೆಂಡ್ ವಿರುದ್ಧ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಎಲ್ಲಾ ವಿಭಾಗಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ.

ಅಹಮದಾಬಾದ್: ಟೀಂ ಇಂಡಿಯಾದ ಅದ್ಭುತ ಆಲ್‌ರೌಂಡ್ ಪ್ರದರ್ಶನದಿಂದಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 142 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ, ಭಾರತ ಇಂಗ್ಲೆಂಡ್ ವಿರುದ್ಧ 3-0 ಸರಣಿಯನ್ನು ವೈಟ್‌ವಾಶ್ ಮಾಡಿದೆ.

ಭಾರತ ಮತ್ತೊಮ್ಮೆ ಇಂಗ್ಲೆಂಡ್ ವಿರುದ್ಧ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಎಲ್ಲಾ ವಿಭಾಗಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ. ಇಂಗ್ಲೆಂಡ್ ಮತ್ತೊಮ್ಮೆ ಬ್ಯಾಟಿಂಗ್ ಮತ್ತು ಬಾಲ್‌ನಲ್ಲಿ ಎಡವಿತು, ಮತ್ತೊಂದು ಭಾರೀ ಸೋಲನ್ನು ಅನುಭವಿಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 357 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿ, ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಆಲೌಟ್ ಆಯಿತು. ಶುಭಮನ್ ಗಿಲ್ ಅದ್ಭುತ ಶತಕದೊಂದಿಗೆ ಮಿಂಚಿದರು. ಇನ್ನು ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ನಿರ್ಣಾಯಕ ಅರ್ಧಶತಕಗಳ ಗಳಿಸಿದರು. ಇಂಗ್ಲೆಂಡ್‌ನ ಆದಿಲ್ ರಶೀದ್ ಅತ್ಯುತ್ತಮ ಬೌಲರ್ ಆಗಿದ್ದು ನಾಲ್ಕು ವಿಕೆಟ್‌ಗಳನ್ನು ಪಡೆದರು. ಮಾರ್ಕ್ ವುಡ್ ಎರಡು ವಿಕೆಟ್ ಪಡೆದರು. ಜೋ ರೂಟ್ ಮತ್ತು ಸಕೀಬ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.

ಭಾರತ ನೀಡಿದ 358 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ 214 ರನ್ ಗಳಿಗೆ ಸರ್ವಪತನ ಕಂಡಿದೆ. ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಆದರೆ ಅರ್ಷದೀಪ್ ಸಿಂಗ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು ಆರಂಭಿಕ ಪಿಲ್ ಸಾಲ್ಟ್ 23 ಮತ್ತು ಬೆನ್ ಡಕೆಟ್ 34 ರನ್ ಗಳಿಗೆ ಔಟ್ ಮಾಡಿದರು. ನಂತರ ಬಂದ ಟಾಮ್ ಬ್ಯಾಂಟನ್ 38 ರನ್ ಗಳಿಸಿ ಔಟಾದರು. ಗಸ್ ಅಟ್ಕಿನ್ಸನ್ ಅತ್ಯುತ್ತಮವಾಗಿ 38 ರನ್ ಬಾರಿಸಿದರು. ಆದರೆ ನಂತರ ಬಂದ ಆಟಗಾರರು ರನ್ ಗಳಿಸುವಲ್ಲಿ ವಿಫಲರಾದರು. ಭಾರತದ ಪರ ಅರ್ಷ್ ದೀಪ್, ಹರ್ಷಿತ್ ರಾಣಾ, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರೆ ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

207 ಮೀಟರ್ ಎತ್ತರಕ್ಕೆ ಉಕ್ಕಿದ ಯಮುನೆ; ದೆಹಲಿಯ ತಗ್ಗು ಪ್ರದೇಶ, ಮಾರುಕಟ್ಟೆಗಳು ಜಲಾವೃತ

ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ?: ಹಾಸಿಗೆ, ದಿಂಬು ಬೇಡಿಕೆ ತೀರ್ಪು ಸೆ.9ಕ್ಕೆ ಕಾಯ್ದಿರಿಸಿದ ಕೋರ್ಟ್!

VIKRAM-32: ಭಾರತದ ಹೊಸ ಬಾಹ್ಯಾಕಾಶ ದರ್ಜೆಯ ಮೈಕ್ರೋಪ್ರೊಸೆಸರ್; Microchip ಮಹತ್ವ, ವಿಶೇಷತೆ ಏನು? ಇಲ್ಲಿದೆ ಮಾಹಿತಿ!

'DNA ಕಳ್ಳತನ' ಭೀತಿ.. ಚೀನಾದಲ್ಲಿ ಸರ್ವಾಧಿಕಾರಿ Kim Jong-un ಮುಟ್ಟಿದ ಎಲ್ಲ ವಸ್ತುಗಳ ಸ್ವಚ್ಛಗೊಳಿಸಿದ ಸಿಬ್ಬಂದಿ, ಕಾರಣ ಏನು? video

7 ವರ್ಷದ ಹಿಂದೆ ವ್ಯಕ್ತಿ ನಾಪತ್ತೆ: ಹೊಸ ಪತ್ನಿ ಜೊತೆಗಿನ Video ನೋಡಿ ಹಳೇ ಪತ್ನಿ ಶಾಕ್; Instagram Reels ನಿಂದ ಸಿಕ್ಕಿಬಿದ್ದ ರೋಚಕ ಕಥೆ!

SCROLL FOR NEXT