ಅಜಿತ್ ಅಗರ್ಕಾರ್-ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ 
ಕ್ರಿಕೆಟ್

ಇಲ್ಲ, ಇಲ್ಲ ಸಾಧ್ಯವೇ ಇಲ್ಲ: Champions Trophy ಗೆ ಪತ್ನಿ ಜೊತೆ ಬರ್ತೀನಿ ಎಂದ ಕೊಹ್ಲಿಗೆ BCCI ಎಚ್ಚರಿಕೆ

ಆಟಗಾರರು 45 ದಿನಗಳಿಗಿಂತ ಹೆಚ್ಚಿನ ಅವಧಿಯ ವಿದೇಶಿ ಸರಣಿಯಲ್ಲಿ ಗರಿಷ್ಠ ಎರಡು ವಾರಗಳವರೆಗೆ ಮತ್ತು 45 ದಿನಗಳಿಗಿಂತ ಕಡಿಮೆ ಅವಧಿಯ ವಿದೇಶಿ ಸರಣಿಯಲ್ಲಿ ಗರಿಷ್ಠ ಒಂದು ವಾರದವರೆಗೆ ಮಾತ್ರ ತಮ್ಮ ಕುಟುಂಬಗಳನ್ನು ತಮ್ಮೊಂದಿಗೆ ಕರೆತರಬಹುದು.

ಮುಂಬೈ: ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ದುಬೈಗೆ ತೆರಳುವ ಭಾರತೀಯ ತಂಡದ ಸದಸ್ಯರು ತಮ್ಮ ಪತ್ನಿಯರನ್ನು ತಮ್ಮೊಂದಿಗೆ ಕರೆತರಲು ಅವಕಾಶವಿಲ್ಲ. ಹಿರಿಯ ಆಟಗಾರನೊಬ್ಬ ತನ್ನ ಪತ್ನಿಯನ್ನು ಕರೆದುಕೊಂಡು ಬರಲು ಅವಕಾಶ ಕೊಡಿ ಎಂದು ಬಿಸಿಸಿಐ ಬಳಿ ಕೇಳಿದ್ದಾಗಿ ವರದಿಯಾಗಿದೆ. ಅದಕ್ಕೆ ಬಿಸಿಸಿಐ ಅನುಮತಿ ನಿರಾಕರಿಸಿದೆ. ನಂತರ ಪತ್ನಿಯನ್ನು ಕರೆದುಕೊಂಡು ಬರೋದಕ್ಕೆ ಅನುಮತಿ ಕೇಳಿದ್ದ ವಿರಾಟ್ ಕೊಹ್ಲಿ ಎಂದು ತಿಳಿದುಬಂದಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿನ ಸೋಲಿನ ನಂತರ ಬಿಸಿಸಿಐ ಆಟಗಾರರ ಮೇಲೆ ನಿಯಂತ್ರಣಗಳನ್ನು ಬಿಗಿಗೊಳಿಸಿದೆ. ಆಸ್ಟ್ರೇಲಿಯಾ ಪ್ರವಾಸದ ನಂತರ ಬಿಸಿಸಿಐ ಹೊರಡಿಸಿದ ಆಟಗಾರರ ನೀತಿ ಸಂಹಿತೆಯ ಪ್ರಕಾರ, ಆಟಗಾರರು 45 ದಿನಗಳಿಗಿಂತ ಹೆಚ್ಚಿನ ಅವಧಿಯ ವಿದೇಶಿ ಸರಣಿಯಲ್ಲಿ ಗರಿಷ್ಠ ಎರಡು ವಾರಗಳವರೆಗೆ ಮತ್ತು 45 ದಿನಗಳಿಗಿಂತ ಕಡಿಮೆ ಅವಧಿಯ ವಿದೇಶಿ ಸರಣಿಯಲ್ಲಿ ಗರಿಷ್ಠ ಒಂದು ವಾರದವರೆಗೆ ಮಾತ್ರ ತಮ್ಮ ಕುಟುಂಬಗಳನ್ನು ತಮ್ಮೊಂದಿಗೆ ಕರೆತರಬಹುದು. ಚಾಂಪಿಯನ್ಸ್ ಟ್ರೋಫಿ ಒಂದು ತಿಂಗಳಿಗಿಂತ ಕಡಿಮೆ ಅವಧಿಯ ಟೂರ್ನಿಯಾಗಿರುವುದರಿಂದ ಕುಟುಂಬ ಸದಸ್ಯರು ತಂಡವನ್ನು ಸೇರಲು ಅವಕಾಶ ನೀಡದಿರಲು ಬಿಸಿಸಿಐ ನಿರ್ಧರಿಸಿದೆ.

ಬಿಸಿಸಿಐ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿದ್ದು, ಈ ವಿಷಯದಲ್ಲಿ ಹಿರಿಯ ಆಟಗಾರರಿಗೆ ಯಾವುದೇ ವಿಶೇಷ ಸಡಿಲಿಕೆ ನೀಡಲಾಗುವುದಿಲ್ಲ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ. ಯಾವುದೇ ಆಟಗಾರನಿಗೆ ವಿಶೇಷ ವಿನಾಯಿತಿ ನೀಡಿದರೆ, ಆಟಗಾರರು ಕುಟುಂಬದ ಸಂಪೂರ್ಣ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಸರಣಿ ಮತ್ತು ಪಂದ್ಯಾವಳಿಗಳಲ್ಲಿ ಭಾಗವಹಿಸುವಾಗ, ಆಟಗಾರರು ತಂಡದ ಹೋಟೆಲ್‌ನಿಂದ ಮೈದಾನ ಮತ್ತು ತರಬೇತಿ ಮೈದಾನಕ್ಕೆ ತಂಡದ ಬಸ್‌ನಲ್ಲಿಯೇ ಪ್ರಯಾಣಿಸಬೇಕು ಮತ್ತು ಖಾಸಗಿ ವಾಹನಗಳಲ್ಲಿ ಅಥವಾ ಅವರ ಕುಟುಂಬಗಳೊಂದಿಗೆ ಪ್ರಯಾಣಿಸಲು ಅವಕಾಶವಿಲ್ಲ ಎಂದು ಬಿಸಿಸಿಐ ನೀತಿ ಸಂಹಿತೆ ಸ್ಪಷ್ಟಪಡಿಸಿತ್ತು. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು.

ದೇಶೀಯ ಕ್ರಿಕೆಟ್ ಆಡಲು ಆಟಗಾರರಿಗೆ ಬಿಸಿಸಿಐ ಮಾರ್ಗಸೂಚಿಗಳನ್ನು ಬಿಗಿಗೊಳಿಸಿದ ನಂತರ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ರಣಜಿ ಟ್ರೋಫಿಯಲ್ಲಿ ಆಡಬೇಕಾಯಿತು. ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಳಲ್ಲಿ ಆಟಗಾರರು ನೀತಿ ಸಂಹಿತೆಯನ್ನು ಪಾಲಿಸುತ್ತಾರೆ ಎಂದು ಬಿಸಿಸಿಐ ಖಚಿತಪಡಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT