ಟೀಂ ಇಂಡಿಯಾ ಆಟಗಾರರು ಮತ್ತು ಕುಟುಂಬಸ್ಥರು 
ಕ್ರಿಕೆಟ್

ICC Champions Trophy 2025: ಆಟಗಾರರ ಒತ್ತಡಕ್ಕೆ ಮಣಿದ BCCI? 'ಕ್ರಿಕೆಟಿಗರ ಪತ್ನಿಯರಿಗೂ ಅವಕಾಶ... ಆದರೆ ಒಂದು ಷರತ್ತು'..!

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದುಬೈನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ತಂಡದ ಸದಸ್ಯರು ತಮ್ಮ ಕುಟುಂಬಗಳೊಂದಿಗೆ ಇರಲು ಅವಕಾಶ ನೀಡಿದೆ.

ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ (BCCI) ಸಿಹಿಸುದ್ದಿ ನೀಡಿದ್ದು, ಟೂರ್ನಿಗೆ ಕ್ರಿಕೆಟಿಗರೊಂದಿಗೆ ಅವರ ಪತ್ನಿಯರು ಪ್ರಯಾಣಿಸಲೂ ಅವಕಾಶ ನೀಡಿದೆ. ಆ ಮೂಲಕ ತಾನೇ ಮಾಡಿದ್ದ ನಿಯಮದಿಂದ ಬಿಸಿಸಿಐ ಯೂಟರ್ನ್ ಹೊಡೆದಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದುಬೈನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ತಂಡದ ಸದಸ್ಯರು ತಮ್ಮ ಕುಟುಂಬಗಳೊಂದಿಗೆ ಇರಲು ಅವಕಾಶ ನೀಡಿದೆ. ಆದರೆ ಇದಕ್ಕೆ ಕೆಲ ಷರತ್ತುಗಳನ್ನು ವಿಧಿಸಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸೋಲಿನ ನಂತರ ಬಿಸಿಸಿಐ ಕೆಲವು ನಿಯಮಗಳನ್ನು ಬದಲಾಯಿಸುವ 10 ಅಂಶಗಳ ಆದೇಶವನ್ನು ಹೊರಡಿಸಿತ್ತು. ಇದರಲ್ಲಿ ತಂಡದ ಆಟಗಾರರು ಟೂರ್ನಿವೇಳೆ ತಮ್ಮ ಕುಟುಂಬಸ್ಥರೊಂದಿಗೆ ಇರುವ ಅವಕಾಶವಿರದಂತೆ ಮಾಡಲಾಗಿತ್ತು. ಈ ಬೆಳವಣಿಗೆ ಆಟಗಾರರ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಈ ನಿಯಮ ಬದಲಾವಣೆಗೆ ಕಿರಿಯ ಆಟಗಾರರು ಹಿರಿಯ ಆಟಗಾರರನ್ನು ಒತ್ತಾಯಿಸಿದರೆ, ಹಿರಿಯ ಆಟಗಾರರು ತಂಡದ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.

ಇದೀಗ ಕೊನೆಗೂ ಬಿಸಿಸಿಐ ತನ್ನ ನಿಯಮಗಳಲ್ಲಿ ಬದಲಾವಣೆ ತಂದಿದ್ದು, ಆಟಗಾರರೊಂದಿಗೆ ಇರಲು ಕುಟುಂಬಸ್ಥರಿಗೂ ಅವಕಾಶ ನೀಡಿದೆ.

ಷರತ್ತು ಅನ್ವಯ

ಇನ್ನು ತಾನೇ ಮಾಡಿದ್ದ ನಿಯಮದಿಂದ ಯೂಟರ್ನ್ ಮಾಡಿರುವ ಬಿಸಿಸಿಐ ಇದಕ್ಕಾಗಿ ಆಟಗಾರರಿದೆ ಷರತ್ತು ಕೂಡ ವಿಧಿಸಿದೆ. ಅದರಂತೆ ಆಟಗಾರರು ಒಂದು ಪಂದ್ಯಕ್ಕೆ ಮಾತ್ರ ತಮ್ಮ ಕುಟುಂಬ ಸದಸ್ಯರೊಂದಿಗೆ ಬರಲು ಅವಕಾಶ ನೀಡಲಾಗುವುದು. ಆಟಗಾರರು ತಮ್ಮ ನಡುವೆ ಚರ್ಚಿಸಿ ಅದಕ್ಕಾಗಿ ಬಿಸಿಸಿಐಗೆ ವಿನಂತಿಯನ್ನು ಸಲ್ಲಿಸಬಹುದು. ನಂತರ ಮಂಡಳಿಯು ವ್ಯವಸ್ಥೆಗಳನ್ನು ಮಾಡುತ್ತದೆ ಎಂದು ತಿಳಿಸಿದೆ. ಅದರಂತೆ ಆಟಗಾರರ ಪತ್ನಿಯರು ಮತ್ತು ಕುಟುಂಬ ಸದಸ್ಯರು ದುಬೈನಲ್ಲಿ ಅವರೊಂದಿಗೆ ಬರಲು ಅವಕಾಶ ನೀಡಿದ್ದರೂ, ಅದು ಒಂದೇ ಪಂದ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎನ್ನಲಾಗಿದೆ.

ಈ ಹಿಂದೆ, ಮಂಡಳಿಯು ತನ್ನ ಆದೇಶದಲ್ಲಿ, 45 ದಿನಗಳನ್ನು ಮೀರಿದ ವಿದೇಶಿ ಪ್ರವಾಸಗಳ ಸಮಯದಲ್ಲಿ ಕುಟುಂಬಗಳು ಆಟಗಾರರೊಂದಿಗೆ ಇರಲು ಎರಡು ವಾರಗಳ ಅವಧಿಯನ್ನು ಮಾತ್ರ ಅನುಮೋದಿಸಿತು, ಜೊತೆಗೆ ವೈಯಕ್ತಿಕ ಸಿಬ್ಬಂದಿ ಮತ್ತು ವಾಣಿಜ್ಯ ಚಿತ್ರೀಕರಣದ ಮೇಲೆ ನಿರ್ಬಂಧ ವಿಧಿಸಿತು. ಚಾಂಪಿಯನ್ಸ್ ಟ್ರೋಫಿಯಂತಹ ಕಡಿಮೆ ಅವಧಿಗಳಿಗೆ, ಕುಟುಂಬ ಸದಸ್ಯರ ಸಹಭಾಗಿತ್ವವನ್ನು ಮೂಲತಃ ಅನುಮತಿಸಲಾಗುತ್ತಿರಲಿಲ್ಲ.

ಆದರೆ, ಕಾರ್ಯಕ್ರಮದ ಸ್ವರೂಪವನ್ನು ಪರಿಗಣಿಸಿ, ಮಂಡಳಿಯು ಪ್ರತಿ ಆಟಗಾರನಿಗೆ ಒಂದು ಪಂದ್ಯಕ್ಕೆ ಕುಟುಂಬ ಸದಸ್ಯರ ಸಹಭಾಗಿತ್ವವನ್ನು ಹೊಂದಲು ಅವಕಾಶ ನೀಡಿದೆ. ಅಂತೆಯೇ ಆಟಗಾರರು ಯಾವ ಪಂದ್ಯಕ್ಕೆ ಮಂಡಳಿಯ ಅನುಮೋದನೆಯನ್ನು ಪಡೆಯಲು ನಿರ್ಧರಿಸಿದ್ದಾರೆ ಎಂಬುದನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

"ಯಾವುದೇ ವಿನಾಯಿತಿಗಳು ಅಥವಾ ವಿಚಲನಗಳನ್ನು ಆಯ್ಕೆ ಸಮಿತಿಯ ಅಧ್ಯಕ್ಷರು ಮತ್ತು ಮುಖ್ಯ ತರಬೇತುದಾರರು ಮೊದಲೇ ಅನುಮೋದಿಸಬೇಕು. ಅನುಸರಣೆಯನ್ನು ಮಾಡದಿರುವುದು ಬಿಸಿಸಿಐ ಸೂಕ್ತವೆಂದು ಪರಿಗಣಿಸುವ ಶಿಸ್ತು ಕ್ರಮಕ್ಕೆ ಕಾರಣವಾಗಬಹುದು.

ಹೆಚ್ಚುವರಿಯಾಗಿ, ಆಟಗಾರನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಹಕ್ಕನ್ನು ಬಿಸಿಸಿಐ ಕಾಯ್ದಿರಿಸಿದೆ, ಇದರಲ್ಲಿ ಬಿಸಿಸಿಐ ಆಟಗಾರರ ಒಪ್ಪಂದದ ಅಡಿಯಲ್ಲಿ ಉಳಿಸಿಕೊಳ್ಳುವವರ ಮೊತ್ತ/ಪಂದ್ಯ ಶುಲ್ಕದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಕಡಿತ ಸೇರಿದಂತೆ ಬಿಸಿಸಿಐ ನಡೆಸುವ ಎಲ್ಲಾ ಪಂದ್ಯಾವಳಿಗಳಲ್ಲಿ ಭಾಗವಹಿಸುವುದರಿಂದ ಸಂಬಂಧಪಟ್ಟ ಆಟಗಾರನ ವಿರುದ್ಧ ಅನುಮತಿ ಸೇರಿರಬಹುದು" ಎಂದು ಅದು ಹೇಳಿದೆ.

ಅಂದಹಾಗೆ ಭಾರತ ತಂಡ ಫೆಬ್ರವರಿ 20 ರಂದು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ನಂತರ, ತಂಡವು ಫೆಬ್ರವರಿ 23 ರಂದು ಪಾಕಿಸ್ತಾನ ಮತ್ತು ಮಾರ್ಚ್ 02 ರಂದು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!