ಕುಲದೀಪ್ ಯಾದವ್  
ಕ್ರಿಕೆಟ್

'ಕುಲದೀಪ್ ಯಾದವ್ ಅವರನ್ನು ಕರೆತನ್ನಿ, ಅವರಲ್ಲಿ ವಿಶೇಷ ಪ್ರತಿಭೆ ಇದೆ': CD Gopinath

ಕುಲ್ದೀಪ್ ಯಾದವ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕು ಎಂದು ಗೋಪಿನಾಥ್ ಟ್ರೆಂಟ್ ಬ್ರಿಡ್ಜ್‌ನಲ್ಲಿ ಭಾರತದ ಮೂರನೇ ಟೆಸ್ಟ್ ಸೋಲಿನ ನಂತರ ವಿಶೇಷ ಸಂದರ್ಶನದಲ್ಲಿ ಅವರು ಹೇಳಿದರು.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಅವರನ್ನು ಆಡಿಸದಿರುವ ಮೂಲಕ ಆಟದಲ್ಲಿ ನಾವು ಒಂದು ತಂತ್ರವನ್ನು ತಪ್ಪಿಸಿಕೊಂಡಿದ್ದೇವೆ ಎಂದು ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ಆಯ್ಕೆಗಾರ ಮತ್ತು ವ್ಯವಸ್ಥಾಪಕ ಸಿಡಿ ಗೋಪಿನಾಥ್ ಹೇಳಿದ್ದಾರೆ.

ಕುಲ್ದೀಪ್ ಯಾದವ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕು ಎಂದು ಗೋಪಿನಾಥ್ ಟ್ರೆಂಟ್ ಬ್ರಿಡ್ಜ್‌ನಲ್ಲಿ ಭಾರತದ ಮೂರನೇ ಟೆಸ್ಟ್ ಸೋಲಿನ ನಂತರ ವಿಶೇಷ ಸಂದರ್ಶನದಲ್ಲಿ ಅವರು ಹೇಳಿದರು. ನಮ್ಮ ತಂಡದಲ್ಲಿ ಈಗ ಯಾವುದೇ ವಿಶೇಷ ಸ್ಪಿನ್ನರ್ ಗಳಿಲ್ಲ, ಕುಲ್ದೀಪ್ ಅವರಿಂದ ಅದು ಸಾಧ್ಯ, ಅವರಲ್ಲಿ ವಿಶೇಷ ಪ್ರತಿಭೆ ಇದೆ ಎಂದರು.

ಇಂಗ್ಲೆಂಡ್‌ನಲ್ಲಿ ಭಾರತದ ಬೌಲಿಂಗ್ ದಾಳಿಯು ವೇಗದ ಮೇಲೆ ಹೆಚ್ಚು ಅವಲಂಬಿತವಾಗಿದೆ, ದೀರ್ಘ ಸ್ವರೂಪದಲ್ಲಿ ಈ ತಂತ್ರವು ಮೂಲಭೂತವಾಗಿ ದೋಷಪೂರಿತವಾಗಿದೆ, ಲಾರ್ಡ್ಸ್‌ನಲ್ಲಿ ಭಾರತದ ಎರಡನೇ ಟೆಸ್ಟ್ ಗೆಲುವಿನ ಸಮಯದಲ್ಲಿ ವಾಷಿಂಗ್ಟನ್ ಸುಂದರ್ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರೂ, ರವೀಂದ್ರ ಜಡೇಜಾ ಅವರು ಫಿಟ್ ಆದ ಮೇಲೆ ಎಡಗೈ ಸ್ಪಿನ್ ಒದಗಿಸಿದ್ದರೂ, ತಂಡದ ಆಟಕ್ಕೆ ಅಷ್ಟು ಸಾಕಾಗುವುದಿಲ್ಲ.

ಕಳೆದ ಟೆಸ್ಟ್‌ನಲ್ಲಿ ವಾಷಿಂಗ್ಟನ್ ಸುಂದರ್ ನಾಲ್ಕು ವಿಕೆಟ್‌ಗಳನ್ನು ಹೇಗೆ ಪಡೆದರು ಎಂಬುದನ್ನು ನೋಡಿ. ಐದನೇ ದಿನ, ಪಿಚ್ ಸವೆದುಹೋಗಿ ಬೌಲಿಂಗ್ ಮಾಡಲು ನಮಗೆ ಸ್ಪಿನ್ನರ್ ಅಗತ್ಯವಿರುತ್ತದೆ ಎಂದರು.

1952 ರಲ್ಲಿ ಇಂಗ್ಲೆಂಡ್‌ನಲ್ಲಿ ಆಡಿ, 1979 ರಲ್ಲಿ ರಾಷ್ಟ್ರೀಯ ತಂಡವನ್ನು ನಿರ್ವಹಿಸಿದ ಮತ್ತು 1980 ರ ದಶಕದಲ್ಲಿ ಆಯ್ಕೆದಾರರಾಗಿ ಸೇವೆ ಸಲ್ಲಿಸಿದ ಗೋಪಿನಾಥ್ ಅವರು ತಮ್ಮ ಅನುಭವದ ಮಾತುಗಳನ್ನು ಇಲ್ಲಿ ಆಡಿದ್ದಾರೆ.

ನಾನು ಆಯ್ಕೆದಾರನಾಗಿದ್ದಾಗ, ನಾವು ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಇಟ್ಟುಕೊಳ್ಳುತ್ತಿದ್ದೆವು. ಅದು ಅಗತ್ಯವೂ ಕೂಡ ಆಗಿತ್ತು. ಟಿ 20 ಪಂದ್ಯಗಳಿಗೆ ವೇಗದ ಬೌಲರ್‌ಗಳು ಉತ್ತಮವಾಗುತ್ತದೆ. ಟೆಸ್ಟ್ ವಿಷಯಕ್ಕೆ ಬಂದಾಗ, ನಮಗೆ ಸ್ಪಿನ್ನರ್‌ಗಳು ಸಹ ಬೇಕು ಎಂದರು.

ಹೊಸ ನಾಯಕ ಶುಭಮನ್ ಗಿಲ್ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಗೋಪಿನಾಥ್, ಅವರು ಸಮತೋಲಿತ, ಸಮಚಿತ್ತದ ಸ್ವಭಾವದವರು, ಮೊದಲ ಟೆಸ್ಟ್ ಪಂದ್ಯದಲ್ಲಿ, ನಾಯಕನಾಗಿ ಅವರು ಆ ಪಂದ್ಯವನ್ನು ಬಚಾವ್ ಮಾಡಬಹುದಿತ್ತು ಎಂದು ನನಗೆ ಅನಿಸಿತು. ನಮ್ಮಲ್ಲಿ ಕ್ರೀಸ್‌ನಲ್ಲಿ ಶತಕ ಗಳಿಸಿದ ಇಬ್ಬರು ಬ್ಯಾಟ್ಸ್‌ಮನ್‌ಗಳಿದ್ದರು, ಮತ್ತೊಂದು ಗಂಟೆ ಬ್ಯಾಟ್ ಮಾಡಿ ಎಂದು ಅವರಿಗೆ ಯಾರೂ ಕೇಳಲಿಲ್ಲ. ಅದು ಕಳಪೆ ಪಂದ್ಯ ನಿರ್ವಹಣೆ ಎಂಬುದು ನನ್ನ ಅನಿಸಿಕೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT